ಪುತ್ತೂರು: ಈಶ್ವರಮಂಗಲ ದ ಹೃದಯ ಭಾಗದಲ್ಲಿರುವ ಮೇಜರ್ ಸಂದೀಪ್ ಉನ್ನಿಕೃಷ್ಣನ್ ವೃತ್ತದಲ್ಲಿ ದೇಶಕ್ಕಾಗಿ ಮಡಿದ ಸೈನಿಕನ ಹೆಸರೇ ಕಾಣದಂತೆ ಹಸಿರು ಬಟ್ಟೆ ಮುಚ್ಚಲಾಗಿತ್ತು. ಇದು ಸೈನ್ಯಕ್ಕೆ ಮತ್ತು ಸಂದೀಪ್ ಉನ್ನಿಕೃಷ್ಣನ್ ಅವರಿಗೆ ಮಾಡಿರೋ ಅಪಮಾನ ಎಂದು ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಹಸಿರು ಬಟ್ಟೆಯನ್ನು ತೆರವು ಗೊಳಿಸಲಾಗಿದೆ ಎಂದು ತಿಳಿದುಬಂದಿದೆ.