ವಿಟ್ಲ ಕುಲಾಲ ಸಂಘದ ವಾರ್ಷಿಕ ಮಹಾಸಭೆ, ಭಜನಾ ಕಾರ್ಯಕ್ರಮ

0

ವಿಟ್ಲ: ಕುಲಾಲ ಸಂಘವಿಟ್ಲ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಬಿ.ಕೆ ಬಾಬು ರವರ ಅಧ್ಯಕ್ಷತೆಯಲ್ಲಿ ನಡೆಯಿತು. 2021-22ರ ಸಾಲಿನ ಲೆಕ್ಕಪತ್ರವನ್ನು ಸಂಘದ ಕೋಶಾಧಿಕಾರಿ ಅಚ್ಚುತ ಕಟ್ಟೆ ಮಂಡಿಸಿದರು. ಮುಂದಿನ ವರ್ಷದಲ್ಲಿ ನಡೆಯಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು.
ಕಾರ್ಯದರ್ಶಿ ರಮೇಶ್ ಕುಲಾಲ್ ನೆಕ್ಕರೆಕಾನ ಅಜ್ಜಿನಡ್ಕ, ಕಟ್ಟಡ ಸಮಿತಿ ಅಧ್ಯಕ್ಷ ರಮನಾಥ್ ವಿಟ್ಲ ಉಪಸ್ಥಿತರಿದ್ದರು. ಮಹಿಳಾ ಘಟಕದ ಅಧ್ಯಕ್ಷೆ ಸುಚಿತ್ರ ರಮನಾಥ್ ವಿಟ್ಲ ವರದಿ ವಾಚಿಸಿದರು. ವಾರಿಜ ಬಾಬು ಮೂಲ್ಯ ಸ್ವಾಗತಿಸಿ, ಸುರೇಶ್ ಕಲಾರಸಿಕ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ 2022 ರಿಂದ 2024ರ ಕಾರ್ಯಕಾರಿ ಸಮಿತಿಯ ಆಯ್ಕೆಯು ನಡೆಯಿತು.ಅಧ್ಯಕ್ಷರಾಗಿ ಬಿ.ಕೆ ಬಾಬುರವರು ಎರಡನೇ ಬಾರಿಗೆ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ವೀರಪ್ಪ ಮೂಲ್ಯ ಪುಣಚ ಉಪಾಧ್ಯಕ್ಷರಾಗಿ ರಾಧಾಕೃಷ್ಣ ಎ ಹಾಗೂ ನಾರಾಯಣ ಪುಣಚ, ಕಾರ್ಯದರ್ಶಿಗಳಾಗಿ ರಮೇಶ ಪುಣಚ ನೆಕ್ಕರೆಕಾನ,ಜೊತೆ ಕಾರ್ಯದರ್ಶಿಗಳಾಗಿ ಅರುಣಾಕರ ಪೆರುವಾಜೆ ಕೋಶಾಧಿಕಾರಿಗಳಾಗಿ ಅಚ್ಚುತ ಕಟ್ಟೆ, ಸಂಘಟನಾ ಕಾರ್ಯದರ್ಶಿ ಶೀನ ಮೂಲ್ಯ ಅಡ್ಯನಡ್ಕ, ಕ್ರೀಡಾ ಕಾರ್ಯದರ್ಶಿ ಪ್ರವೀಣ್ ಚಂದಳಿಕೆ, ಸಾಂಸ್ಕೃತಿಕ ಕಾರ್ಯದರ್ಶಿ ಸುರೇಶ್ ಕಲಾರಸಿಕ ಹಾಗೂ 15 ಜನ ಸದಸ್ಯರನ್ನು ಒಳಗೊಂಡಂತೆ ರಚಿಸಲಾಯಿತು.

ಮಹಿಳಾ ಸಂಘದ ಅಧ್ಯಕ್ಷರಾಗಿ ಸುಚಿತ್ರಾ ರಮಾನಾಥ ವಿಟ್ಲ ಎರಡನೇ ಬಾರಿ ಮರು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಮೋಹಿನಿ ಎಣ್ಣೆದಕಲ ಹಾಗೂ ಚೇತನ ಕಟ್ಟೆ, ಕಾರ್ಯದರ್ಶಿಗಳಾಗಿ ಮೀನಾಕ್ಷಿ ನಾರಾಯಣ ಪುಣಚ, ಜೊತೆ ಕಾರ್ಯದರ್ಶಿಗಳಾಗಿ ಉಷಾ ವಸಂತ್ ಎರುಂಬು, ಕೋಶಾಧಿಕಾರಿಗಳಾಗಿ ವಾರಿಜಾ ಬಾಬು ಮೂಲ್ಯ ಮಾರ್ನೆಮಿಗುಡ್ಡೆ ಸಾಂಸ್ಕೃತಿಕ ಕಾರ್ಯದರ್ಶಿ ಶಾರದಾ ಮಾಮೇಶ್ವರ ಕ್ರೀಡಾ ಕಾರ್ಯದರ್ಶಿ ಗೀತಾ ಅಡ್ಯನಡ್ಕ,ಸಂಘಟನಾ ಕಾರ್ಯದರ್ಶಿ ಪ್ರೇಮ ಕುಂಡಡ್ಕ ಹಾಗೂ 13 ಜನ ಸದಸ್ಯರ ಒಳಗೊಂಡಂತೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.ಆಗಮಿಸಿದ ಸದಸ್ಯರೆಲ್ಲರೂ ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸಿದರು. ಅರುಣಾಕರ ಪೆರ್ವಾಜೆ ವಂದಿಸಿದರು. ಇದೇ ಸಂದರ್ಭದಲ್ಲಿ ನವರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here