ವಾಲಿಬಾಲ್ ಪಂದ್ಯಾಟ: ಪಾಪೆಮಜಲು ಸ.ಪ್ರೌ.ಶಾಲಾ ದೀಕ್ಷಿತಾ ಬಿ. ರಾಜ್ಯಮಟ್ಟಕ್ಕೆ

0

ಪುತ್ತೂರು: ಚಿಕ್ಕಮಗಳೂರಿನ ಕಡೂರಿನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದಪ್ರೌಢಶಾಲಾ ವಾಲಿಬಾಲ್ ಪಂದ್ಯಾಟದಲ್ಲಿ ಪಾಪೆಮಜಲು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ದೀಕ್ಷಿತಾ ಬಿ., ಪ್ರೀತಿಕ, ಶ್ರಾವ್ಯ, ನಯನಶ್ರೀ, ಮತ್ತು ಭವ್ಯಶ್ರೀರವರು ದ.ಕ.ಜಿಲ್ಲಾ ತಂಡವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.

ತಂಡದ ಆಟಗಾರ್ತಿ ದೀಕ್ಷಿತಾ ಬಿ.,(ಬಪ್ಪಪುಂಡೇಲು ದಿ. ನಾರಾಯಣ ನಾಯ್ಕ ಮತ್ತು ಮೀನಾಕ್ಷಿ ದಂಪತಿ ಪುತ್ರಿ) ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕೆ ಪ್ರವೀಣ ರೈ ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here