ರಾಜ್ಯಮಟ್ಟದ ಈಜು ಸ್ಪರ್ಧೆ ದ.ಕ ಜಿಲ್ಲೆ ಚಾಂಪಿಯನ್: ಸುದಾನದ ನಾಲ್ವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ

0

ಪುತ್ತೂರು: ರಾಷ್ಟ್ರೀಯ ಸ್ಕೂಲ್ ಗೇಮ್ಸ್ 2022-23ನಡಿಯಲ್ಲಿ ಶಿಕ್ಷಣ ಇಲಾಖೆಯು ಅ.11 ರಿಂದ 13ರ ವರೆಗೆ ಬೆಂಗಳೂರು ಬಸವನಗುಡಿಯ ಆಕ್ವಾಟಿಕ್ ಸೆಂಟರ್ ನಲ್ಲಿ ಆಯೋಜಿಸಿದ 14 ಹಾಗೂ17ರ ವಯೋಮಿತಿಯ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ಪುತ್ತೂರಿನ ಸುದಾನ ವಸತಿಯುತ ಶಾಲೆಯ ನಾಲ್ವರು ವಿದ್ಯಾರ್ಥಿಗಳನ್ನೊಳಗೊಂಡ ದ.ಕ ಜಿಲ್ಲೆಯು ಚಾಂಪಿಯನ್ ಎನಿಸಿಕೊಂಡಿದೆ.


ದಕ್ಷಿಣ ಕನ್ನಡ ಜಿಲ್ಲೆಯ ತಂಡದಲ್ಲಿ ಗುರುತಿಸಿಕೊಂಡ ಸುದಾನ ಶಾಲೆಯ ವಿದ್ಯಾರ್ಥಿಗಳಾದ ಅನಿಕೇತ್ ಜಿ(ಹತ್ತನೇ ತರಗತಿ)ರವರು 200ಮೀ ಹಾಗೂ 400ಮೀ ವೈಯಕ್ತಿಕ ಮೆಡ್ಲೆಯಲ್ಲಿ ಕಂಚು, ನಂದನ್ ನಾಯಿಕ್(ಹತ್ತನೇ ತರಗತಿ)ರವರು 50ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಬೆಳ್ಳಿ ಪದಕ ಹಾಗೂ 200ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಕಂಚು, ಅನಿಕಾ ಯು(ಎಂಟನೇ ತರಗತಿ)ರವರು 200ಮೀ ಫ್ರೀಸ್ಟೈಲ್ ನಲ್ಲಿ ಕಂಚು, ನಿಕೋಲಾಸ್ ಮಥಾಯಿಸ್(ಎಂಟನೇ ತರಗತಿ)ರವರು 100ಮೀ ಹಾಗೂ 50ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಚಿನ್ನ, 4*100 ಮೆಡ್ಲೆ ರಿಲೇ ಹಾಗೂ 4*100 ಫ್ರೀಸ್ಟೈಲ್ ರಿಲೇನಲ್ಲಿ ಬೆಳ್ಳಿ ಪದಕಗಳನ್ನು ಗಳಿಸಿರುತ್ತಾರೆ.
ಬೆಳ್ಳಿ ಮತ್ತು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ, ನಂದನ್ ನಾಯಕ್ ಮತ್ತು ನಿಕೋಲಸ್ ಮಥಿಯಾಸ್ ರಾಷ್ಟ್ರೀಯ ಪಂದ್ಯಗಳಿಗೆ ಅರ್ಹತೆ ಪಡೆದಿದ್ದಾರೆ.

ಈ ನಾಲ್ವರು ಈಜುಪಟುಗಳಿಗೆ ಪರ್ಲಡ್ಕ ಬಾಲವನದ ಪುತ್ತೂರು ಅಕ್ವಾಟಿಕ್ ಕ್ಲಬ್ ನ ತರಬೇತುದಾರರಾದ ಪಾರ್ಥ ವಾರಣಾಶಿ, ನಿರೂಪ್ ಕೆ, ರೋಹಿತ್ ಪಿ, ದೀಕ್ಷಿತ್ ಕೆ.ರವರು ತರಬೇತಿ ನೀಡಿರುತ್ತಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here