ಯುವವಾಹಿನಿ ಉಪ್ಪಿನಂಗಡಿ ಘಟಕದ 25 ಸಂವತ್ಸರದ ಸಂಭ್ರಮ:ಭಜನೆ-ಗುರುಸ್ಮರಣೆ

0

ಪುತ್ತೂರು: ಯುವವಾಹಿನಿ ಉಪ್ಪಿನಂಗಡಿ ಘಟಕ 25 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದ ಸವಿನೆನಪಿಗಾಗಿ ಘಟಕದ ಮಾಜಿ ಅಧ್ಯಕ್ಷರುಗಳ ಮನೆ ಭೇಟಿಯ ಕಾರ್ಯಕ್ರಮದ ಅಂಗವಾಗಿ ಭಜನೆ ಮತ್ತು ಗುರುಸ್ಮರಣೆ ನಡೆಯಿತು.

2019-2020ರ ಅವಧಿಯಲ್ಲಿ ಉಪ್ಪಿನಂಗಡಿ ಘಟಕದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಡಾ. ಆಶಿತ್ ಎಂ. ವಿ.ರವರ ಮನೆಯಲ್ಲಿ ಕಾರ್ಯಕ್ರಮ‌ ಏರ್ಪಡಿಸಲಾಗಿತ್ತು. ಭಜನಾ ಕಾರ್ಯಕ್ರಮ ಮುಗಿದ ನಂತರ ಗುರುಸ್ಮರಣೆ ಕಾರ್ಯಕ್ರಮವನ್ನು ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರಾಗಿರುವ ಘಟಕದ ಮಾಜಿ ಅಧ್ಯಕ್ಷ ಡಾ. ರಾಜರಾಮ್ ಕೆ.ಬಿ. ನಡೆಸಿಕೊಟ್ಟರು. ಘಟಕವನ್ನು ತಮ್ಮ ಅಧ್ಯಕ್ಷ ಅವಧಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದ ಡಾ. ಆಶಿತ್ ಎಂ. ವಿ. ಮತ್ತು ಡಾ. ಶ್ವೇತಾ ಆಶಿತ್ ದಂಪತಿಯನ್ನು ಡಾ.ಅಶಿತ್ ಅವರ ಮಾತಾಪಿತರಾದ ಘಟಕದ ಗೌರವ ಸಲಹೆಗಾರರೂ ಆಗಿರುವ ವರದ್ ರಾಜ್ ಎಂ. ಹಾಗೂ ವಿಮಲರವರ ಸಮ್ಮುಖದಲ್ಲಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿ ಮಾತನಾಡಿದ ಡಾ. ಆಶಿತ್ ಎಂ.ವಿ.ರವರು ತಮ್ಮ ಅಧ್ಯಕ್ಷ ಅವಧಿಯಲ್ಲಿ ಘಟಕವನ್ನು ಅತ್ಯುತ್ತಮವಾಗಿ ನಡೆಸಲು ಸಹಕರಿಸಿದವರನ್ನು ಸ್ಮರಿಸಿದರು.

ಘಟಕದ ಅಧ್ಯಕ್ಷ ಕುಶಾಲಪ್ಪ ಹತ್ತುಕಳಸೆ, ಸಮಾಜದ ಮುಖಂಡರಾದ ಕೋರಿಂಜ ದೇವಸ್ಥಾನದ ಆಡಳಿತ ಮೊಕ್ತೇಸರ ಯೋಗೀಶ್ ಕಡ್ತಿಲ, ಘಟಕದ ಮಾಜಿ ಅಧ್ಯಕ್ಷರಾದ ಗುಣಕರ ಮುಗ್ಗಗುತ್ತು, ಜಯವಿಕ್ರಂ ಕಲ್ಲಾಪು, ಅಜಿತ್ ಕುಮಾರ್ ಪಾಲೇರಿ, ಅಶೋಕ್ ಕುಮಾರ್ ಪಡ್ಪು, ಚಂದ್ರಶೇಖರ್ ಸನಿಲ್, ಕೃಷ್ಣಪ್ಪ ಪೂಜಾರಿ, ಜಯಾನಂದ ಕಲ್ಲಾಪು, ರವೀಂದ್ರ ದಲ್ಕಾಜೆ, ಹರೀಶ್ ಕುಮಾರ್ ಪಾಲೆತ್ತಡಿ, ರವಿಚಂದ್ರ ಶಾಂತಿ, ಡೀಕಯ್ಯ ಗೌಂಡತ್ತಿಗೆ, ನವೀನ್ ಪಡ್ಪು, ಹಿರಿಯರಾದ ಬೊಮ್ಮಯ್ಯ ಬಂಗೇರ, ಘಟಕದ ಕಾರ್ಯದರ್ಶಿ ಉದಯ್ ಪೂಜಾರಿ, ಜೊತೆ ಕಾರ್ಯದರ್ಶಿ ಅನಿತಾ ಸತೀಶ್, ಪದಾಧಿಕಾರಿಗಳಾದ ನಾಣ್ಯಪ್ಪ ಕೋಟ್ಯಾನ್, ಪುನೀತ್ ದಾಸರ ಮೂಲೆ, ಉಮೇಶ್, ಅಂಕಿತ್ ಪೂಜಾರಿ, ದಿವ್ಯಶ್ರೀ ಮನೋಜ್, ಮನೋಹರ್ ಕರುವೇಲ್, ರಕ್ಷಾ ಎಚ್.ಎಸ್, ಸವಿತಾ ಹರೀಶ್, ಸವಿತಾ, ಬಿಲ್ಲವ ಗ್ರಾಮ ಸಮಿತಿ ಬೆಳ್ಳಿಪಾಡಿಯ ಅಧ್ಯಕ್ಷ ವಸಂತ್ ಪೂಜಾರಿ ಕುಂಡಾಪು, ಘಟಕದ ಸದಸ್ಯರಾದ ಡಾ. ರಮ್ಯಾ ರಾಜಾರಾಮ್, ತನಿಯಪ್ಪ ಪೂಜಾರಿ ಕೆಳಗಿನಮನೆ, ಗಂಗಾಧರ್ ಪುರಿಯ, ಕು. ವರ್ಷ, ವಿಕ್ರಂ ಬಿಳಿಯೂರು, ರಕ್ಷಿತ್ ಪೂಜಾರಿ, ಕು.ಹರ್ಷಿತಾ, ಕು.ಮೇಷ, ಕು.ಆಕೃತಿ, ವನಿತಾ, ಕು.ಶ್ರೇಯಾ, ಬೇಬಿ ಸಾನಿಧ್ಯ, ಬೇಬಿ ದ್ರುವಿ, ಮಾಸ್ಟರ್ ಕೃತಿಕ್ ಮುಂತಾದವರು ಉಪಸ್ಥಿತರಿದ್ದರು.

ಘಟಕದ ಅಧ್ಯಕ್ಷ ಕುಶಾಲಪ್ಪ ಹತ್ತುಕಳಸೆ ಸ್ವಾಗತಿಸಿ, ಉಪಾಧ್ಯಕ್ಷ ಮನೋಜ್ ಸಾಲಿಯಾನ್ ವಂದಿಸಿದರು. ಘಟಕದ ಪ್ರಥಮ ಉಪಾಧ್ಯಕ್ಷ ಮನೋಹರ್ ಆಟಲ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here