ನ. 2ರಂದು ಹಾರಾಡಿ, ರೈಲ್ವೇ ನಿಲ್ದಾಣ ಸಂಪರ್ಕದ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ : ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಿಂದ ಪರಿಶೀಲನೆ

0

ಪುತ್ತೂರು: ಬಹುಕಾಲದ ಬೇಡಿಕೆಯಾಗಿರುವ ಹಾರಾಡಿಯಿಂದ ರೈಲ್ವೇ ನಿಲ್ದಾಣದ ಸಂಪರ್ಕ ರಸ್ತೆ ಅಭಿವೃದ್ಧಿಗೆ ನ.2ರಂದು ಶಿಲಾನ್ಯಾಸ ನಡೆಯಲಿದ್ದು, ಅ.20ರಂದು ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಸಹಿತ ಅಧಿಕಾರಿಗಳು ರೈಲ್ವೇ ನಿಲ್ದಾಣ ರಸ್ತೆ ಪರಿಶೀಲನೆ ನಡೆಸಿದರು.
ಹಾರಾಡಿ ರೈಲ್ವೇ ರಸ್ತೆ ಅಭಿವೃದ್ಧಿಗೆ 15ನೇ ಹಣಕಾಸು ಯೋಜನೆ ಮತ್ತು ನಗರಸಭೆಯಿಂದ ರೂ. 1.5 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಇದರ ಶಿಲಾನ್ಯಾಸ ನ. 2 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಯಾವ ಭಾಗದಲ್ಲಿ ಅಗಲೀಕರಣ ಮತ್ತು ಯಾವೆಲ್ಲ ಕಾಮಗಾರಿ ನಡೆಯುತ್ತಿದೆ ಎಂಬುದರ ಕುರಿತುಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿ ವೇಳೆ ರಸ್ತೆ ಬಂದ್ ಮಾಡುವ ಅಥವಾ ವಾಹನ ಸವಾರರಿಗೆ ತೊಂದರೆ ಆಗದ ರೀತಿಯಲ್ಲಿ ಕಾಮಗಾರಿ ನಡೆಸುವಂತೆ ಸ್ಥಳೀಯ ಭಾರತ್ ಅಟೋ ಕಾರ್‍ಸ್ ಸಂಸ್ಥೆಯ ಮತ್ತು ಸ್ಥಳೀಯರಲ್ಲಿ ಮಾತುಕತೆ ನಡೆಸಲಾಯಿತು. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸದಸ್ಯರಾದ ಪದ್ಮನಾಭ ಪಡೀಲು, ಪ್ರೇಮಲತಾ ನಂದಿಲ, ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಪೌರಾಯುಕ್ತ ಮಧು ಎಸ್ ಮನೋಹರ್ ಸಹಿತ ಇಂಜಿನಿಯರ್‌ಗಳು, ಭಾರತ್ ಅಟೋ ಕಾರ್‍ಸ್ ಸಂಸ್ಥೆಯ ಮ್ಯಾನೇಜರ್ ಆನಂದ್ ಕುಲಾಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here