ರಾಷ್ಟ್ರೀಯ ಸ್ವಯಂಸೇವಕ ಸಂಘ ಕೆದಿಲ ಗ್ರಾಮದ ವತಿಯಿಂದ ತುಡರ್ ಉತ್ಸವ

0

ಪುತ್ತೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಕೆದಿಲ ಗ್ರಾಮದ ವತಿಯಿಂದ ತುಡರ್ ಉತ್ಸವ ಅ.24ರಂದು ಸಂಜೆ ಕೆದಿಲ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯಿತು.

ಭಜನೆ ಮೂಲಕ ಕಾಲೋನಿ ವಾಸಿ ಬಂಧುಗಳು ರಾಮಜ್ಯೋತಿ (ತುಡರ್) ಹಿಡಿದು ಭಜನೆ ಮಾಡುತ್ತಾ ಬಡೆಕ್ಕಿಲ ಕಾಲೊನಿಯಲ್ಲಿ ಪ್ರತಿ ಮನೆಗಳಿಗೂ ತೆರಳಿ ರಾಮಜ್ಯೋತಿಯಿಂದ ಮನೆಯೊಳಗೆ ದೀಪ ಬೆಳಗಿಸಲಾಯಿತು. ಕಾರ್ಯಕ್ರಮದ ಕೊನೆಗೆ ಬೆಳ್ತ ಅವರ ಮನೆಯಲ್ಲಿ ಸಮಾಪನಗೊಂಡು ಸಭಾಕಾರ್ಯಕ್ರಮ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಮುಖರಾದ ಭರಣೀಕೆರೆ ಸುಭ್ರಹ್ಮಣ್ಯ ಭಟ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಶಿವರಾಮ ಭಟ್ ವಳಂಗಜೆ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬೆಳ್ತ ಬಡೆಕ್ಕಿಲ ದಂಪತಿಯನ್ನು ಸನ್ಮಾನಿಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಟ್ಲ ತಾಲೂಕು ಸಂಘಚಾಲಕ ಸುಭ್ರಹ್ಮಣ್ಯ ಭಟ್ ಬಡೆಕ್ಕಿಲ ಕಾರ್ಯಕ್ರಮ ನಿರೂಪಿಸಿದರು.

ಹಿಂದು ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ ಗಣರಾಜ ಭಟ್ ಕೆದಿಲ, ಬಿಜೆಪಿ ಅಧ್ಯಕ್ಷ ಪದ್ಮನಾಭ ಭಟ್, ಮಾಜಿ ಸೈನಿಕ ಸುನಿಲ್ ಕುಲಾಲ್ ಕಾಂಜಳಿಕೆ, ಸ್ವಯಂಸೇವಕರಾದ ಸುಭ್ರಹ್ಮಣ್ಯ ಭಟ್ ಬೀಟಿಗೆ, ಕೆದಿಲ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಕೆದಿಲ, ಸಮಾಜ ಸೇವಕ ಗೋಪಾಲ ಕೃಷ್ಣ ಭಟ್ ವಳಂಗಜೆ, ಶ್ರೀ ರಾಮ ಮಂದಿರದ ಕಾರ್ಯಕರ್ತ ಅಶ್ವತ್ ಕಾಂತುಕೋಡಿ, ಕರಿಮಜಲು ಶ್ರೀಕೃಷ್ಣ ಮಂದಿರದ ಕಾರ್ಯಕರ್ತ ಶ್ರೀನಿವಾಸ ಕರಿಮಜಲು ಹಾಗು ಊರಿನ ಅನೇಕ ಗಣ್ಯರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here