ಕಾಣಿಯೂರು ಹಲ್ಲೆ ಪ್ರಕರಣ:  ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವರ ಆರೋಗ್ಯ ವಿಚಾರಿಸಿದ ಶಕುಂತಳಾ ಶೆಟ್ಟಿ 

0

ಪುತ್ತೂರು: ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರು ಕಾಣಿಯೂರಿನಲ್ಲಿ ಮಾರಣಾಂತಿಕವಾಗಿ ಗುಂಪು ಹಲ್ಲೆಗೊಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಬೆಡ್ ಶೀಟ್ ವ್ಯಾಪಾರಿಗಳ ಆರೋಗ್ಯ ವಿಚಾರಿಸಿ ಸಾಂತ್ವನ ಹೇಳಿದರು.
 ಈ ಸಂದರ್ಭದಲ್ಲಿ ಮಾತನಾಡಿದ ಶಕುಂತಳಾ ಶೆಟ್ಟಿ ಅವರು ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶವಿಲ್ಲ. ಮಹಿಳೆಯ ಮೇಲೆ ಮಾನಭಂಗ ಯತ್ನ ನಡೆದಿದ್ದರೆ ಅದನ್ನು ವಿಚಾರಿಸಲು, ಶಿಕ್ಷೆ ನೀಡಲು ಇಲ್ಲಿ ಪೊಲೀಸ್ ಇಲಾಖೆ ಇದೆ.   ಇದು ಪ್ರಜಾಪ್ರಭುತ್ವ ದೇಶ. ವ್ಯಾಪಾರಿಗಳ ಮೇಲೆ ಮಾರಣಾಂತಿಕ  ಹಲ್ಲೆ  ನಡೆಸಿದ್ದು ಗಂಭೀರ ಪ್ರಕರಣವಾಗಿದ್ದು ಇದು ಮನುಷ್ಯತ್ವ ಇಲ್ಲದವರಿಂದ ಮಾತ್ರ ಸಾಧ್ಯ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಎರಡೂ ಘಟನೆಯನ್ನು ಪಾರದರ್ಶಕ ತನಿಖೆ ನಡೆಸಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿಕೊಡಬೇಕು. ವ್ಯಾಪಾರಿಗಳ ಮೇಲೆ ಗಂಭೀರ ರೀತಿಯ ಹಲ್ಲೆ ನಡೆಸಿದ ಎಲ್ಲರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ನಾನು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು ತಾರತಮ್ಯ ತೋರದೆ ನಿಷ್ಪಕ್ಷಪಾತ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದ್ದೇನೆ ಎಂದು ಶಕುಂತಳಾ ಶೆಟ್ಟಿ ತಿಳಿಸಿದ್ದಾರೆ. 

LEAVE A REPLY

Please enter your comment!
Please enter your name here