ಕುದ್ಮಾರು ಶಾಲಾ ಕೊಠಡಿ ನಿರ್ಮಾಣಕ್ಕೆ ಸಚಿವ ಎಸ್ ಅಂಗಾರರಿಂದ ಶಿಲಾನ್ಯಾಸ

0

ಕಾಣಿಯೂರು: ಕುದ್ಮಾರು ಉ. ಹಿ. ಪ್ರಾಥಮಿಕ ಶಾಲೆಯಲ್ಲಿ ರೂ 41.7ಲಕ್ಷ ಅನುದಾನದಲ್ಲಿ ನಿರ್ಮಾಣವಾಗಲಿರುವ ಶಾಲಾ ಕೊಠಡಿ ನಿರ್ಮಾಣಕ್ಕೆ ಸಚಿವ ಎಸ್. ಅಂಗಾರ ಶೀಲಾನ್ಯಾಸ ನೆರವೇರಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಬೆಳಂದೂರು ಗ್ರಾ. ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್,ಗ್ರಾ.ಪಂ.ಸದಸ್ಯರಾದ ಪ್ರವೀಣ್ ಕೆರೆನಾರು, ತಾರಾ ಅನ್ಯಾಡಿ, ಗೀತಾ ಕುವೆತ್ತೋಡಿ, ರವಿ ಕುಮಾರ್ ಕೆಡೆಂಜಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಗಂಗಾಧರ ಗೌಡ, ಬರೆಪ್ಪಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ಗೌಡ ಬರೆಪ್ಪಾಡಿ, ಕುದ್ಮಾರು ಸ್ಕಂದಶ್ರೀ ಕಾಂಪ್ಲೆಕ್ಸ್ ಮಾಲಕ ಚೆನ್ನಪ್ಪ ಗೌಡ ನೂಜಿ, ಕುದ್ಮಾರು ಸ್ಕಂದಶ್ರೀ ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ, ಯಶೋಧರ್ ಕೆಡೆಂಜಿಕಟ್ಟ, ಕುದ್ಮಾರು ತಿರಂಗಾ ವಾರಿಯರ್ಸ್ ನ ಸಂಚಾಲಕ ಲೋಕೇಶ್ ಬಿ.ಎನ್ ಮತ್ತಿತರರು ಉಪಸ್ಥಿತರಿದ್ದರು.ಶಾಲಾ ಮುಖ್ಯಗುರು ಕುಶಾಲಪ್ಪ ಗೌಡ ಸ್ವಾಗತಿಸಿದರು.

LEAVE A REPLY

Please enter your comment!
Please enter your name here