ಅಪ್ರಾಪ್ತ ಬಾಲಕಿಗೆ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಮೆಮೊರಿ ಕಾರ್ಡ್ ನೀಡಿದ ಆರೋಪ – ಓರ್ವನ ಸೆರೆ

0

ವಿಟ್ಲ: ಬಾಲಕಿಯೋರ್ವರಿಗೆ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಮೊಬೈಲ್ ಮೆಮೊರಿ ಕಾರ್ಡ್ ನೀಡಿದ ಆರೋಪದ ಮೇಲೆ ಗೋಳ್ತಮಜಲು ನಿವಾಸಿಯೋರ್ವನನ್ನು ವಿಟ್ಲ ಪೋಲಿಸರು ಬಂಧಿಸಿದ ಘಟನೆ ನಡೆದಿದೆ.

ಗೋಳ್ತಮಜಲು ನಿವಾಸಿ ಸಮೀರ್(33 ವ.) ಬಂಧಿತ ಆರೋಪಿ. ಮಾಣಿ ಸಮೀಪದ ಬುಡೋಳಿಯಲ್ಲಿರುವ ದಿನಸಿ ಅಂಗಡಿಯೋಂದರಲ್ಲಿ ಕೆಲಸ ಮಾಡುತ್ತಿದ್ದ ಸಮೀರ್ ತನಗೆ ಅಶ್ಲೀಲ ಚಿತ್ರಗಳನ್ನು ಹೊಂದಿರುವ ಮೆಮೊರಿ ಕಾರ್ಡ್ ನೀಡಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಬಾಲಕಿಯೋರ್ವರು ನೀಡಿದ ದೂರಿನಂತೆ ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಽಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

LEAVE A REPLY

Please enter your comment!
Please enter your name here