ಆಲಂಕಾರಿನಲ್ಲಿ ಕೆಂಪೇಗೌಡ ಪವಿತ್ರ ಮೃತ್ತಿಕೆ ಸಂಗ್ರಹಣಾ ಅಭಿಯಾನ ರಥಕ್ಕೆ ಸ್ವಾಗತ

0

ಆಲಂಕಾರು: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ನ.11ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು ಅನಾವರಣ ಮಾಡಲಿದ್ದು ಇದರ ಅಂಗವಾಗಿ ಹಮ್ಮಿಕೊಂಡಿರುವ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನದ ಕೆಂಪೇಗೌಡ ರಥಕ್ಕೆ ಅ.30ರಂದು ಆಲಂಕಾರು ಗ್ರಾ.ಪಂ.ನಲ್ಲಿ ಸ್ವಾಗತ ಕೋರಿದರು.

ಆಲಂಕಾರು ಗ್ರಾ.ಪಂ ಅಧ್ಯಕ್ಷ ಸದಾನಂದ ಆಚಾರ್ಯ ಪುಷ್ಷರ್ಚನೆ ಸಲ್ಲಿಸುವ ಮೂಲಕ .ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ ಯವರು ಸ್ವಾಗತಿಸಿ ಕಾರ್ಯಕ್ರಮದ ಬಗ್ಗೆ ತಿಳಿಸಿ ಚೆಂಡೆವಾದನದೊಂದಿಗೆ ರಥವನ್ನು ಬರಮಾಡಿಕೊಂಡರು ಆನಂತರ ಚೆಂಡೆಯೊಂದಿಗೆ ಆಲಂಕಾರು ಪೇಟೆಯಲ್ಲಿ ಮೆರವಣಿಗೆ ಸಾಗಿ ಆಲಂಕಾರು ಪೇಟೆಯಲ್ಲಿ ಕೆಂಪೇಗೌಡ ರಥದಲ್ಲಿದ್ದ ಎಲ್.ಐ.ಡಿ ಯ ಮೂಲಕ ಪ್ರತಿಮೆ ಅನಾವರಣದ ಕಿರು ಚಿತ್ರವನ್ನು ಪ್ರದರ್ಶಿಸಿದರು ನಂತರ ಸವಣೂರಿನ ಕಡೆ ರಥ ಪ್ರಯಾಣ ಬೆಳಿಸಿತು.
ಈ ಸಂದರ್ಭದಲ್ಲಿ ಮೆಸ್ಕಾಂ ಇಲಾಖಾಧಿಕಾರಿ ಸಜೀಕುಮಾರ್, ಕಡಬ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ,ಕಡಬ
ಉಪತಹಶೀಲ್ದಾರ್‌ ಗೋಪಾಲ.ಕೆ,ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಾಮೋದರ ಗೌಡ ಕಕ್ವೆ, ಆಲಂಕಾರು ಸಿ.ಎ ಬ್ಯಾಂಕ್ ಉಪಾಧ್ಯಕ್ಷ  ಪ್ರದೀಪ್ ರೈ ಮನವಳಿಕೆ,ತಾ.ಪಂ ಮಾಜಿ ಸದಸ್ಯ ದಯಾನಂದ ಆಲಡ್ಕ ಸೇರಿದಂತೆ ಗ್ರಾ.ಪಂ ಉಪಾದ್ಯಕ್ಷರು,ಸದಸ್ಯರು,ವಿವಿಧ ಸಂಘ ಸಂಸ್ಥೆಯ ಪದಾದಿಕಾರಿಗಳು ಗ್ರಾಮಸ್ಥರು,ಕಂದಾಯ ಇಲಾಖೆಯವರು,ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here