ವಿಜಯ ಕರ್ನಾಟಕ ಪ್ರಸ್ತುತಿಯ ವಿಕ ಯಕ್ಷಗಾನ ಫೆಸ್ಟ್ 2022

ತೆಂಕು ಬಡಗು ತಿಟ್ಟುಗಳ ಯಕ್ಷ ದಿಗ್ಗಜರ ಸಮಾಗಮ
ಏಕಕಾಲದಲ್ಲಿ ಐವರು ಭಾಗವತರ ಸಮ್ಮಿಲನ, ಯಕ್ಷ-ಗಾನ -ನಾಟ್ಯ ಸುಧೆ

ದೇಶದ ಸಂಸ್ಕೃತಿಯನ್ನು ಎಚ್ಚರಿಸುವ ಕೆಲಸ ವಿಜಯಕ ಕರ್ನಾಟಕ ಟೈಮ್ಸ್ ಗ್ರೂಫ್ ಮಾಡುತ್ತಿದೆ – ಸಂಜೀವ ಮಠಂದೂರು

ಪುತ್ತೂರು: ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಯುವ ಸಮುದಾಯವನ್ನು ಆಕರ್ಷಿಸುವ ಸದುದ್ದೇಶದಿಂದ ವಿಜಯ ಕರ್ನಾಟಕ ಪತ್ರಿಕೆಯು ಯಕ್ಷಗಾನ ಫೆಸ್ಟ್ ಎಂಬ ವಿನೂತನ ಕಾರ್ಯಕ್ರಮ ವರ್ಷದ 2ನೇ ಕಾರ್ಯಕ್ರಮ ನ. 4ರಂದು ಸಂಜೆ ಪುತ್ತೂರು ಪುರಭವನದಲ್ಲಿ ನಡೆಯಿತು.

ಮಂಗಳೂರಿನಲ್ಲಿ ಆಯೋಜಿಸಿದ್ದ ಮೊದಲ ಕಾರ್ಯಕ್ರಮದ ಬಳಿಕ 2ನೇ ಕಾರ್ಯಕ್ರಮವನ್ನು ಪುತ್ತೂರಿನಲ್ಲಿ ಆಯೋಜಿಸಲಾಗಿದ್ದು, ತೆಂಕು- ಬಡಗು ತಿಟ್ಟುಗಳ ದಿಗ್ಗಜರ ಕೂಡುವಿಕೆಯಿಂದ ವಿನೂತನ ಪ್ರಯೋಗ `ಯಕ್ಷ ವಿಜಯ- ಗಾನ ನಾಟ್ಯ ವೈಭವ’ ಎಂಬ ನವರಸ ಪಾಕ ಕಾರ್ಯಕ್ರಮವನ್ನು ಶಾಸಕ ಸಂಜೀವ ಮಠಂದೂರು ಉದ್ಘಾಟಿಸಿದರು.

ದೇಶದ ಸಂಸ್ಕೃತಿಯನ್ನು ಎಚ್ಚರಿಸುವ ಕೆಲಸ ವಿಜಯಕ ಕರ್ನಾಟಕ ಟೈಮ್ಸ್ ಗ್ರೂಫ್ ಮಾಡುತ್ತಿದೆ:

ಶಾಸಕ ಸಂಜೀವ ಮಠಂದೂರು ಮಾತನಾಡಿ ನಮ್ಮೆಲ್ಲರಿಗೂ ಸಂಸ್ಕಾರ ಕೊಟ್ಟದ್ದು ಈ ಸಾಂಸ್ಕೃತಿಕ ಲೋಕ. ಸಾಂಸ್ಕೃತಿಕ ಲೋಕ ದೇಶದ ಇಡಿ ಇಂಚಿಂಚು ನೆಲವನ್ನು ಪವಿತ್ರಗೊಳಿಸಿ ಜಗತ್ತಿನಲ್ಲಿ ಭಾರತದ ಸಂಸ್ಕೃತಿಯನ್ನು ಪರಿಚಯಿಸುವ ಜೊತೆಯಲ್ಲಿ ದೇಶ ಮತ್ತೊಮ್ಮೆ ಜಗದ್ಗುರು ಭಾರತ ಆಗಬೇಕಾಗಿದ್ದಾರೆ ದೊಡ್ಡ ಕೊಡುಗೆ ಕೊಟ್ಟವರು ಸಾಂಸ್ಕೃತಿಕ ಕಲಾವಿದರು. ಇಂತಹ ಕಲಾವಿದರು ಯುವ ಪೀಳಿಗೆಗೆ ಪ್ರೇರಣೆ ಕೊಡುವ ಜೊತೆಯಲ್ಲಿ ನಮಗೂ ಆದರ್ಶ ಪ್ರಿಯರು. ಈ ನಿಟ್ಟಿನಲ್ಲಿ ಪತ್ರಿಕಾ ಮಾದ್ಯಮ ವರದಿ ಮಾಡುವುದು ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದುವುದು ಮುಖ್ಯವಲ್ಲ. ದೇಶದ ಸಂಸ್ಕೃತಿಯನ್ನು ಎಚ್ಚರಿಸಬೇಕು. ಅದು ಕೂಡಾ ನಮ್ಮ ಜವಾಬ್ದಾರಿ ಎಂದು ವಿಜಯ ಕರ್ನಾಟಕ ಟೈಮ್ಸ್ ಗ್ರೂಫ್ ದೊಡ್ಡ ಕೆಲಸ ಮಾಡಿ ಪುತ್ತೂರಿನ ಜನತೆಗೆ ಒಂದಷ್ಟು ಕಲಾವಿದರನ್ನು ಪರಿಚಯಿಸುವ, ಅವರ ರಸದೌತನವನ್ನು ನೀಡುವ ಕೆಲಸ ಮಾಡಿದೆ ಎಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ಡಿವೈಎಸ್ಪಿ ಡಾ. ಹೀರಯ್ಯ ಹಿರೇಮಠ್, ವಿಜಯ ಕರ್ನಾಟಕ ಪುತ್ತೂರು ಪ್ರಧಾನ ವಿತರಕರಾಗಿರುವ ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು, ಸ್ವಣೋದ್ಯಮಿ ಜಿ.ಎಲ್. ಬಲರಾಮ ಆಚಾರ್ಯ, ಅಕ್ಷಯ್ ಕಾಲೇಜಿನ ಅಧ್ಯಕ್ಷ ಜಯಂತ ನಡುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯ ಕರ್ನಾಟಕ ಸ್ಥಾನೀಯ ಸಂಪಾದಕ ರವೀಂದ್ರ ಶೆಟ್ಟಿ, ಜಾಹಿರಾತು ವಿಭಾಗದ ಮುಖ್ಯಸ್ಥ ರಾಮಕೃಷ್ಣ, ಪ್ರಸರಣ ವಿಭಾಗದ ನಾರಾಯಣ, ರವೀಂದ್ರ ದೇರಳ, ಕೃಷ್ಣ ಭಟ್, ಧನುಷ್ ಕಲ್ಲಡ್ಕ ಅತಿಥಿಗಳನ್ನು ಗೌರವಿಸಿದರು. ವಿಜಯಕರ್ನಾಟಕ ಪುತ್ತೂರು ಜಿಲ್ಲಾ ವರದಿಗಾರ ಸುಧಾಕರ್ ಸುವರ್ಣ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.

ಶ್ರೇಷ್ಠ ಕಲಾವಿದರು: ಭಾಗವತಿಕೆಯಲ್ಲಿ ಹಲವು ಆವಿಷ್ಕಾರಗಳನ್ನು ಮಾಡಿರುವ 6 ಭಾಗವತರ ಸಂಗಮದಲ್ಲಿ ಗಾನ ಮಾಧುರ್ಯ, ರಾಗ ತಾಳಗಳ ಸಮಪಾಕ, ಸುಮಧುರ ಕಂಠ, ಪಾತ್ರಕ್ಕೆ ಕಾಲಕ್ಕೆ ತಕ್ಕಂತೆ ರಾಗಗಳ ಬಳಕೆ,ರಾಗಗಳ ರಸೋತ್ಕರ್ಷ, ರಾಗ ತಾಳಗಳ ಸಮನ್ವಯ.ಗಾನ ಗಂಧರ್ವ, ಗಾನ ಮಂದಾರ, ಗಾನ ಕೋಗಿಲೆ,ರಸರಾಗ ಚಕ್ರವರ್ತಿ, ರಾಗ ಸ್ವರಸಿರಿ, ಸ್ವರಸ್ನೇಹ ಸಂಜೀವಿನಿ ಮುಂತಾದ ಬಿರುದಾವಳಿ ಪಡೆದಿರುವ ಪ್ರತಿಭಾನ್ವಿತರಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕ ಅಧ್ಯಕ್ಷರಾಗಿರುವ ಭಾಗವತ ಪಟ್ಲ ಸತೀಶ್ ಶೆಟ್ಟಿ, ಗೆಜ್ಜೆಗಿರಿ ಮೇಳದ ಪ್ರಧಾನ ಭಾಗವತ ಗಿರೀಶ್ ರೈ ಕಕ್ಕೆಪದವು, ಗಣೇಶ್ ಭಟ್ ಹೊಸಮೂಲೆ, 25ನೇ ವರ್ಷದ ಪ್ರಸಿದ್ಧ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್, 4 ದಶಕಗಳ ಯಕ್ಷಗಾನ ಕಲಾ ಸೇವೆಯ ಅನುಭವ ಹೊಂದಿರುವ ರಾಘವೇಂದ್ರ ಮಯ್ಯ ಹಾಲಾಡಿ, ಚಂದ್ರಕಾಂತ್ ಮೂಡುಬೆಳ್ಳೆ ಅವರ ಹಾಡುಗಾರಿಕೆಯಿತ್ತು.ತೆಂಕು ಶೈಲಿಯಲ್ಲಿ ಸುಬ್ರಹ್ಮಣ್ಯ ಭಟ್ ದೇಲಂತಮಜಲು, ಮಯೂರ್ ನಾಯ್ಗ ಹಾಗೂ ಬಡಗು ಶೈಲಿಯಲ್ಲಿ ಸುನಿಲ್ ಭಂಡಾರಿ ಮತ್ತು ಸುಜನ್ ಹಾಲಾಡಿ ಅವರು ಚೆಂಡೆ ಮದ್ದಳೆಯಲ್ಲಿ, ಚಕ್ರತಾಳದಲ್ಲಿ ರಾಜೇಂದ್ರ ಸಹಕರಿಸಿದರು.ನಾಟ್ಯ ವೈಭವದಲ್ಲಿ ಅಕ್ಷಯ ಕುಮಾರ್ ಮಾರ್ನಾಡು ಮತ್ತು ರಕ್ಷಿತ್ ಶೆಟ್ಟಿ ಪಡ್ರೆಯವರ ನಿಹಾರಿಕಾ ಮತ್ತು ಉಪಾಸನಾ ಪಂಜರಿಕೆ ಸಹಕರಿಸಿದರು.ನಾಟ್ಯ ವೈಭವದ ಜತೆಯಲ್ಲಿ ಒಂದು ಗಂಟೆಯ ಯಕ್ಷಗಾನ ಪ್ರಸಂಗವೂ ಪ್ರಸ್ತುತಗೊಂಡಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.