ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಕಟಾ, ಕುಮಿಟೆಯಲ್ಲಿ ತೇಜಸ್ ಡಿ.ವಿಗೆ ಕಂಚಿನ ಪದಕ

ಪುತ್ತೂರು: ಉಡುಪಿ ಅಮೃತ ಗಾರ್ಡನ್ ನಲ್ಲಿ ನ.5ರಂದು ನಡೆದ ಕರಾಟೆ ಬುಡೋಕಾನ್ 40 ಬಿಕೆಐ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್-2022ರಲ್ಲಿ ಬ್ಲೂ ಮತ್ತು ಪರ್ಪಲ್ ಬೆಲ್ಟ್‌ನಲ್ಲಿ ವೈಯಕ್ತಿಕ ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ  ತೇಜಸ್ ಡಿ.ವಿ ರವರು ತೃತೀಯ ಸ್ಥಾನ ಗಳನ್ನು ಪಡೆದು ಕಂಚಿನ ಪದಕಗಳನ್ನು ಪಡೆದುಕೊಂಡಿರುತ್ತಾರೆ.

ಇವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 5 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸುರೇಶ್ ಬುಡೋಕಾನ್ ಕರಾಟೆ ಪುತ್ತೂರು ರವರ ಶಿಷ್ಯ ಮತ್ತು ಪುತ್ತೂರು ನಗರ ಪೊಲೀಸ್ ಠಾಣಾ ಹೆಡ್‌ಕಾನ್‌ಸ್ಟೇಬಲ್‌ಗಳಾದ ವಿನೋದ್ ಮತ್ತು ಗೀತಾ ದಂಪತಿ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.