ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟ

0

ಉದನೆ ಸೈಂಟ್ ಆಂಟನೀಸ್, ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಗೆ ಹಲವು ಪ್ರಶಸ್ತಿ

ನೆಲ್ಯಾಡಿ: ಇಲ್ಲಿನ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ನಡೆದ ಉಪ್ಪಿನಂಗಡಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಬಹುಮಾನ ಪಡೆದುಕೊಂಡಿದ್ದಾರೆ.
ಹದಿನೇಳರ ವಯೋಮಾನದ ಹುಡುಗರ ಓಟದ ಸ್ಪರ್ಧೆಯಲ್ಲಿ ಸಂಸ್ಥೆಯ ವಿದ್ಯಾರ್ಥಿ ವೀಕ್ಷಿತ್ 800 ಮೀ. ಪ್ರಥಮ, 400 ಮೀ, ತೃತೀಯ ಹಾಗೂ 1500 ಮೀ. ಓಟದಲ್ಲಿ ತೃತೀಯ ಸ್ಥಾನಗಳಿಸಿದ್ದಾರೆ. ಹದಿನಾಲ್ಕರ ವಯೋಮಾನದ ಬಾಲಕರ ಓಟದ ಸ್ಪರ್ಧೆಯಲ್ಲಿ ಶೋಬಿತ್ 200 ಮೀ. ಪ್ರಥಮ ಹಾಗೂ 100 ಮೀ. ಓಟದಲ್ಲಿ ತೃತೀಯ ಸ್ಥಾನಗಳಿಸಿದನು. ನವನೀತ್ 400 ಮೀ. ಓಟದಲ್ಲಿ ತೃತೀಯ ಹಾಗೂ ಬಾಲಕಿಯರ ವಿಭಾಗದಲ್ಲಿ ಸಂಜನಾ 200 ಮೀ.ಓಟದಲ್ಲಿ ದ್ವಿತೀಯ ಸ್ಥಾನ ಗಳಿಸಿದರು. ಹದಿನಾಲ್ಕರ ವಯೋಮಾನದ ಬಾಲಕಿಯರ 4/100 ಮೀ. ರಿಲೆಯಲ್ಲಿ ತಂಡ ಪ್ರಥಮ ಸ್ಥಾನ ಗಳಿಸಿತು. ಸಂಜನಾ, ಫಾತಿಮತ್ ಮಶ್ರೂಫ, ವಂಶಿತಾ, ನಿಶಾ ಮ್ಯಾಥ್ಯೂ ತಂಡವನ್ನು ಪ್ರತಿನಿಧಿಸಿದ್ದರು.
ಉದನೆ ಬಿಷಪ್ ಪೋಳಿಕಾರ್ಪೋಸ್ ಆಂಗ್ಲಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಆಶ್ಲಿ ಕೆ 600 ಮೀ. ಓಟ ಹಾಗೂ 400 ಮೀ. ಓಟದಲ್ಲಿ ದ್ವಿತಿಯ, ಗುಂಡೆಸೆತದಲ್ಲಿ ಪ್ರೈಸ್ ತೃತೀಯ, ಉದ್ದ ಜಿಗಿತದಲ್ಲಿ ಸುಶಾನ್ ಶೆಟ್ಟಿ ತೃತೀಯ, 200 ಮೀಟರ್ ಓಟದಲ್ಲಿ ಇವಾ ದ್ವಿತೀಯ ಸ್ಥಾನ ಗಳಿಸಿದರು. ಹದಿನಾಲ್ಕರ ವಯೋಮಾನದ ಹುಡುಗರ 600 ಮೀ. ಓಟದಲ್ಲಿ ಸೆಲ್ವಿನ್ ಪ್ರಥಮ, ಶಾನ್ ತೃತೀಯ, 400 ಮೀ. ಓಟದಲ್ಲಿ ಪ್ರಣಿಲ್ ದ್ವಿತೀಯ ಸ್ಥಾನ ಗಳಿಸಿದರು. ಹದಿನಾಲ್ಕರ ವಯೋಮಾನದ ಹುಡುಗಿಯರ 600 ಮೀ. ಓಟದಲ್ಲಿ ಶೈನಿ ತೃತೀಯ, ಉದ್ದ ಜಿಗಿತದಲ್ಲಿ ರಿಂಷ ತೃತೀಯ, ಗುಂಡೆಸತದಲ್ಲಿ ಸಿನಿ ಮ್ಯಾಥ್ಯೂ ದ್ವಿತೀಯ ಸ್ಥಾನ ಗಳಿಸಿದರು. ಹದಿನೇಳರ ವಯೋಮಾನದ ಬಾಲಕಿಯರ ಟ್ರಿಪಲ್ ಜಂಪ್‌ನಲ್ಲಿ ಹನಿ ಕೆ.ಜೆ ದ್ವಿತೀಯ, 200 ಮೀ. ಓಟದಲ್ಲಿ ಅಲೀನ ಪ್ರಥಮ ಸ್ಥಾನ ಗಳಿಸಿದರು. 8ನೇ ತರಗತಿ ಬಾಲಕರ 4/100 ಮೀ ರಿಲೆಯಲ್ಲಿ ಶಾಲೆಯ ತಂಡ ದ್ವಿತೀಯ ಸ್ಥಾನ ಗಳಿಸಿತು. ಶಾನ್, ಜೋಯಲ್, ಹರ್ಷಲ್, ಪ್ರಣಿಲ್ ತಂಡವನ್ನು ಪ್ರತಿನಿಧಿಸಿದ್ದರು. ಹದಿನಾಲ್ಕರ ವಯೋಮಾನದ ಬಾಲಕರ ವಿಭಾಗದಲ್ಲಿ ಸೆಲ್ವಿನ್ ಓವರ್ ಆಲ್ ಚಾಂಪಿಯನ್ ಪಡೆದುಕೊಂಡರು. ಸಂಸ್ಥೆಯ ಸಂಚಾಲಕ ರೆ.ಫಾ ಹನಿ ಜೇಕಬ್‌ರವರ ಮಾರ್ಗದರ್ಶನದಲ್ಲಿ ಶಾಲಾ ದೈ.ಶಿ.ಶಿಕ್ಷಕರಾದ ರಾಜೇಶ್ ರೈ, ಜಿಮ್ಸನ್ ವರ್ಗೀಸ್‌ರವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

 

LEAVE A REPLY

Please enter your comment!
Please enter your name here