ರಾಮಕುಂಜ ಪ.ಪೂ.ಕಾಲೇಜು ವಿದ್ಯಾರ್ಥಿಗಳಿಂದ ಮತದಾರರ ಜಾಗೃತಿ ಜಾಥಾ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಮತದಾರರ ಜಾಗೃತಿ ಜಾಥಾ ನಡೆಯಿತು.


ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ ಕೆ.,ರವರು ಕಾಲೇಜಿನಲ್ಲಿ ಜಾಥಾಕ್ಕೆ ಚಾಲನೆ ನೀಡಿದರು. ಮತದಾರರಲ್ಲಿ ಜಾಗೃತಿ ಮೂಡಿಸುವ ಘೋಷಣಾ ಫಲಕಗಳನ್ನು, ಘೋಷಣೆಗಳನ್ನು ಕೂಗುತ್ತಾ ಕಾಲೇಜಿನಿಂದ ಹೊರಟ ಜಾಥಾವು ಆತೂರಿನವರೆಗೆ ಸಾಗಿ ರಾಮಕುಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಮುಕ್ತಾಯಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಪಂಚಾಯತ್ ರಾಜ್ ತರಬೇತುದಾರ, ಪತ್ರಕರ್ತ ಸಂಶುದ್ಧೀನ್‌ರವರು, ಈ ದೇಶದ ಪ್ರತಿ ಪ್ರಜೆಯು ತಮ್ಮ ಹಕ್ಕಾದ ಮತದಾನವನ್ನು ಚಲಾಯಿಸಬೇಕು. ವಿದ್ಯಾರ್ಥಿಗಳಾದ ನೀವು ಹದಿನೆಂಟು ವರ್ಷ ತುಂಬಿದ ಕೂಡಲೇ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡು, ಹೆಮ್ಮೆಯಿಂದ ತಮ್ಮ ಇಷ್ಟದ ಅಭ್ಯರ್ಥಿಗೆ ಮತ ಚಲಾವಣೆ ಮಾಡಬೇಕು. ಒಂದು ವೇಳೆ ಯಾವುದೇ ಅಭ್ಯರ್ಥಿಯು ಅಧಿಕಾರಕ್ಕೆ ಬರುವುದರಲ್ಲಿ ನಿಮಗೆ ಸಹಮತವಿಲ್ಲದಿದ್ದರೆ, ನೋಟಾ ಮತ ಚಲಾವಣೆಯನ್ನು ಮಾಡಬಹುದು. ನಿಮ್ಮ ಒಂದು ವೋಟು ರಾಷ್ಟ್ರಕಟ್ಟುವಲ್ಲಿ ಮಹತ್ತರವಾದ ಪಾತ್ರ ವಹಿಸಲಿದೆ. ಜಾಥಾದ ಮೂಲಕ ಜಾಗೃತಿ ಮೂಡಿಸಿ, ನೀವೂ ಮತದಾನದ ಮಹತ್ವವನ್ನು ಅರಿತುಕೊಂಡಿದ್ದೀರಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ಉಪನ್ಯಾಸಕರಾದ ಗುಡ್ಡಪ್ಪ ಬಲ್ಯ, ಸತೀಶ್ ಜಿ.ಆರ್, ಶಿವಪ್ರಸಾದ್, ಭರತ್, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ಉಪನ್ಯಾಸಕ ಚೇತನ್ ಎಂ. ಸ್ವಾಗತಿಸಿದರು. ಹಿರಿಯ ಉಪನ್ಯಾಸಕ ವಸಂತ ಕುಮಾರ್ ಡಿ ವಂದಿಸಿದರು.

LEAVE A REPLY

Please enter your comment!
Please enter your name here