ಪುತ್ತೂರು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ನೂತನ ಸಂಘ ರಚನೆ

0

 ಅಧ್ಯಕ್ಷರಾಗಿ ಸತ್ಯನಾರಾಯಣ ಅಡಿಗ.ಎ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ, ಕೋಶಾಧಿಕಾರಿಯಾಗಿ ಜನಾರ್ದನ ಆಯ್ಕೆ.
 ನಿಡ್ಪಳ್ಳಿ; ಪುತ್ತೂರು ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ಪಾಣಾಜೆ ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾರಾಯಣ ಅಡಿಗ.ಎ, ಕಾರ್ಯದರ್ಶಿಯಾಗಿ ಹೀರೆಬಂಡಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ವಿಶಾಲಾಕ್ಷಿ ಹಾಗೂ ಕೋಶಾಧಿಕಾರಿಯಾಗಿ ಬಲ್ನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬಲ್ನಾಡು ಅವಿರೋಧವಾಗಿ ಆಯ್ಕೆಯಾದರು.
  ಈ ಆಯ್ಕೆ ಪ್ರಕ್ರಿಯೆಯನ್ನು ನ. 2 ರಂದು ದ.ಕ.ಹಾಲು ಒಕ್ಕೂಟದ ಪುತ್ತೂರು ಶಿಬಿರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಡೆಸಲಾಯಿತು.
ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಒಳಮೊಗ್ರು ಹಾ.ಉ.ಸ. ಸಂಘದ ಕಾರ್ಯದರ್ಶಿ ಶೇಖರ ರೈ, ಕೆಯ್ಯೂರು ಹಾ.ಉ.ಸ.ಸಂಘದ ಕಾರ್ಯದರ್ಶಿ  ಭಾಸ್ಕರ್ ರೈ, ಭಕ್ತಕೋಡಿ ಹಾ.ಉ.ಸ.ಸಂಘದ ಕಾರ್ಯದರ್ಶಿ ಪ್ರಫುಲ್ ರೈ, ಸುಳ್ಯ ಪದವು ಹಾ.ಉ.ಸ.ಸಂಘದ ಕಾರ್ಯದರ್ಶಿ ವಿನಯ ಕುಮಾರ್ ,ಪಾಲ್ತಾಡು ಹಾ.ಉ.ಸ.ಸಂಘದ ಕಾರ್ಯದರ್ಶಿ ಮೋಹನ್ ,ಕೊಳ್ತಿಗೆ ಹಾ.ಉ.ಸ.ಸಂಘದ ಕಾರ್ಯದರ್ಶಿ ಹರ್ಷಿತ್,ಸನ್ಯಾಸಿಗುಡ್ಡೆ ಹಾ.ಉ.ಸ.ಸಂಘದ ಕಾರ್ಯದರ್ಶಿ ಅಮಿತಾ, ಕೆದಂಬಾಡಿ ಹಾ.ಉ.ಸ.ಸಂಘದ ರೇಖಾ, ಚಿಕ್ಕಮುಡ್ನೂರು ಹಾ.ಉ.ಸ.ಸಂಘದ ಕಾರ್ಯದರ್ಶಿ ಅನುರಾಧ, ಪೆರಿಯಡ್ಕ ಹಾ.ಉ.ಸ.ಸಂಘದ ಕಾರ್ಯದರ್ಶಿ ಮದುಷಾ ಇವರು ಆಯ್ಕೆ ಆಗಿರುತ್ತಾರೆ.

LEAVE A REPLY

Please enter your comment!
Please enter your name here