ರಾಮಕುಂಜ ಕಿಂಡರ್ ಗಾರ್ಟನ್‌ನಲ್ಲಿ ‘ಆರೆಂಜ್ ಡೇ’

0

ರಾಮಕುಂಜ: ಮಕ್ಕಳಿಗೆ ಬಣ್ಣದ ಅರಿವು ಮೂಡಿಸುವ ಉದ್ದೇಶದಿಂದ ರಾಮಕುಂಜ ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ ನ.16 ರಂದು ಆರೆಂಜ್ ಡೇ ಆಚರಿಸಲಾಯಿತು.


ವಿವಿಧ ಬಗೆಯ ಆರೆಂಜ್ ಬಣ್ಣದ ಹೂಗಳು, ಹಣ್ಣುಗಳು, ತರಕಾರಿಗಳು ಸೇರಿದಂತೆ ಬಗೆ ಬಗೆಯ ಕ್ರಾಫ್ಟ್‌ಗಳನ್ನು ಒಂದೆಡೆ ಜೋಡಿಸಿ ಮಕ್ಕಳಿಗೆ ಬಣ್ಣದ ಪರಿಚಯ ಮಾಡಿಸಲಾಯಿತು. ಕೇಸರಿ ಬಣ್ಣದ ಬಲೂರು, ಆಟಿಕೆಗಳನ್ನು ಪ್ರದರ್ಶನಕ್ಕಿಡಲಾಯಿತು. ಮಕ್ಕಳಿಗೆ ಮನೋರಂಜನೆಯೊಂದಿಗೆ ಕೇಸರಿ ಬಣ್ಣದ ಗ್ರಹಣ ಶಕ್ತಿ ಹೆಚ್ಚಿಸಲು ಪ್ರಾಮುಖ್ಯತೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಲೋಹಿತಾ, ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here