ವಿಟ್ಲ: ವಿಟ್ಲ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬಾಲಾಲಯ ಪ್ರತಿಷ್ಠೆ ನಡೆಯಿತು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಗಳವರು ಆಶೀರ್ವಚನ ನೀಡಿ ದೇವರ ಇಚ್ಛೆಯಂತೆಯೇ ಆಯಾಯ ಕಾಲಕ್ಕೆ ಸರಿಯಾಗಿ ಪ್ರತಿಯೊಂದು ವಿದ್ಯಮಾನಗಳು ಘಟಿಸುತ್ತದೆ. ಇರವಿನ ಅರಿವು ಇದ್ದಾತ ಉದಾತ್ತ ಮೌಲ್ಯ ವಿಚಾರಗಳುಳ್ಳ ವ್ಯಕ್ತಿಯಾಗಿ ಗೌರವ ಪಡೆಯುತ್ತಾರೆ. ಪುಣ್ಯ ಸಂಚಯನದ ಹಾದಿಯೆನಿಸಿದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಕನ್ಯಾನ ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದ ಶ್ರೀ ಮಹಾಬಲೇಶ್ವರ ಸ್ವಾಮೀಜಿ ರವರು ಆಶೀರ್ವಚನ ನೀಡಿ ಸಮಾಜದಲ್ಲಿ ಪ್ರತಿಯೊಬ್ಬರನ್ನೂ ಒಟ್ಟು ಮಾಡುವ ದೇವರ ಬ್ರಹ್ಮಕಲಶೋತ್ಸವದಲ್ಲಿ ಯುವಶಕ್ತಿಯೊಂದಿಗೆ ಹಿರಿಯರ ಮಾರ್ಗದರ್ಶನವನ್ನು ಪಡೆದು ಮುನ್ನಡೆದಾಗ ಹಬ್ಬದ ವಾತಾವರಣವನ್ನು ಸೃಷ್ಟಿಸುವುದು ಎಂದರು.
ಕುಂಟುಕುಡೇಲು ವೇ.ಮೂ.ರಘುರಾಮ ತಂತ್ರಿಗಳ ವೈದಿಕತ್ವದಲ್ಲಿ ಶ್ರೀ ದೇವರ ಪ್ರತಿಷ್ಠೆ, ಜೀವಕಲಶಾಭೀಷೇಕ,ಪ್ರತಿಷ್ಠಾ ಕಲಶಾಭೀಷೇಕ ನಡೆಯಿತು.
ಸಮಾರಂಭದಲ್ಲಿ ಅಯ್ಯಪ್ಪ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಜ್ಯೋತಿಷಿ ಕೇಶವ ಭಟ್ ವಿಟ್ಲ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಯಾನೆ ಬಟ್ಟು ಸ್ವಾಮಿ, ಇಂಜಿನೀಯರ್ ಸಂತೋಷ್ ಕುಮಾರ್ ಪೆಲ್ತಡ್ಕ, ರವಿವರ್ಮ ವಿಟ್ಲ ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಸ್ವಾಗತಿಸಿದರು. ದಿನೇಶ್ ಶೆಟ್ಟಿ ಪಟ್ಲ ವಂದಿಸಿದರು.
ಡಾ.ತಿಮ್ಮಪ್ಪ ರೈ ಕೆದಂಬಾಡಿ ಕಾರ್ಯಕ್ರಮ ನಿರೂಪಿಸಿದರು.