ರೋಟರಿ ಕ್ಲಬ್ ಪುತ್ತೂರು ಯುವ ತಂಡಕ್ಕೆ ಸಮಗ್ರ ಪ್ರಶಸ್ತಿ

0

ಪುತ್ತೂರು: ಮೂಡಬಿದ್ರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ತಂಡ ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿ ಪಡೆದುಕೊಂಡಿದೆ. ನ.27 ರಂದು ಮೂಡಬಿದ್ರಿಯ ರೋಟರಿ ಕ್ಲಬ್ ಆಯೋಜಿಸಿದ್ದ ಸ್ಪರ್ಧೆಯ ವಿವಿಧ ವಿಭಾಗಗಳಲ್ಲಿ ಪುತ್ತೂರಿನ ತಂಡ ಪ್ರಶಸ್ತಿ ಪಡೆದುಕೊಂಡಿದೆ.

ಮಹಿಳೆಯರ ಸೋಲೋ ಗಾಯನದಲ್ಲಿ ಪ್ರಥಮ, 14-18 ವರ್ಷ ವಯೋಮಿತಿಯ ಸೋಲೋ ಡ್ಯಾನ್ಸ್ನಲ್ಲಿ ಪ್ರಥಮ, ಸಮೂಹ ಗಾಯನದಲ್ಲಿ ಪ್ರಥಮ, ಗುಂಪು ನೃತ್ಯದಲ್ಲಿ ಮೂರನೇ ಸ್ಥಾನ ಪಡೆದು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ ಎಂದು ಪುತ್ತೂರು ಯುವ ರೋಟರಿ ಅಧ್ಯಕ್ಷೆ ರಾಜೇಶ್ವರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here