ಅಜ್ಜಿಕಲ್ಲು ಶ್ರೀ ಜಟಾಧಾರಿ ಭಜನಾ ಮಂದಿರದ ದಾರಂದ ಮುಹೂರ್ತ ಕಾರ್ಯಕ್ರಮ

0

ಪುತ್ತೂರು: ಅಜ್ಜಿಕಲ್ಲು ಶ್ರೀ ಜಟಾಧಾರಿ ಭಜನಾ ಮಂದಿರದ ದಾರಂದ ಮುಹೂರ್ತ ಕಾರ್ಯಕ್ರಮ ನ.28 ರಂದು ನಡೆಯಿತು.
ವೇ ಮೂ ದಿನೇಶ್ ಮರಡಿತ್ತಾಯ ಮತ್ತು ಶಿಲ್ಪಿ ಭೋಜಜರಾಜ ಆಚಾರ್ಯ ಅವರು ದಾರಂದಮುಹೂರ್ತ ನೆರವೇರಿಸಿದರು.

ನ.27ರಂದು ಗುಮ್ಮಟೆಗದ್ದೆ ಶ್ರೀಕೃಷ್ಣ ಭಜನಾ ಮಂದಿರದಿಂದ ಅಜ್ಜಿಕಲ್ಲು ಮಂದಿರಕ್ಕೆ ಶೋಭಾಯಾತ್ರೆ ಮೂಲಕ ದಾರಂದ ತರಲಾಯಿತು. ಈ ಸಂದರ್ಭ ಶ್ರೀ ಕ್ಷೇ.ಧ.ಗ್ರಾ.ಯೋ ಸದಸ್ಯರು ಊರಿನ ಭಕ್ತರು ಆರತಿ ಬೆಳಗಿಸಿ ಪುಷ್ಪಾರ್ಚನೆ ಮೂಲಕ ಸ್ವಾಗತಿಸಿದರು.

ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ರೈ ಎಸ್ಟೇಟ್ ಉದ್ಯಮಿ ಅಶೋಕ್ ರೈ ಕೋಡಿಂಬಾಡಿ, ಕಾಂಗ್ರೇಸ್ ಪ್ರಮುಖರಾದ ಶಶಿಕಿರಣ್ ರೈ ನೂಜಿಬೈಲ್, ಸಂತೋಷ್ ಭಂಡಾರಿ, ನವೀನ್ ರೈ ಚೆಲ್ಯಾಡ್ಕ, ಲಕ್ಷ್ಮಣ ನಾಯ್ಕ್ ಅಜ್ಜಿಕಲ್ಲು, ಶ್ರೀ ಕೃಷ್ಣ ಭಜನಾ ಮಂದಿರ ಅಧ್ಯಕ್ಷ ಭರತ್, ವೀರಕೇಸರಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ರೈ ಚಿಲ್ಮೆತ್ತರು, ಶ್ರಿದೇವಿ ಭಜನಾ ಮಂದಿರ ಮುಂಡೋಮೂಲೆ ಅಧ್ಯಕ್ಷ ಈಶ್ವರ ನಾಯ್ಕ್ ಮುಂಡೋಮೂಲೆ, ಶ್ರೀಧರ್ ರೈ ಹೊಸಮನೆ ಒಳಮೋಗ್ರು ಪಂಚಾಯತ್ ಅಧ್ಯಕ್ಷ ತ್ರಿವೇಣಿ, ಸದಸ್ಯ ಮಹೇಶ್ ಕೇರಿ, ಧನಂಜಯ ಪಟ್ಲ, ಸಂತೋಷ್ ನಾಯಿಲ, ಪ್ರಕಾಶ್ ನಾಯ್ಕ್ ಬೈರೋಡಿ, ಪುರುಷ ಗುಮ್ಮಟ ಗದ್ದೆ ಪ್ರವೀಣ್ ಅಜ್ಜಿಕಲ್ಲು ಸಹಿತ ಹಲವಾರು ಗಣ್ಯರು, ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಘ ಶ್ರೀಕೃಷ್ಣ ಭಜನಾ ಮಂದಿರ, ಶ್ರೀದೇವಿ ಭಜನಾ ಮಂದಿರ ವೀರಕೇಸರಿ ಸ್ಪೋರ್ಟ್ಸ್ ಕ್ಲಬ್, ಅಂಬೇಡ್ಕರ್ ಆದಿ ದ್ರಾವಿಡ ಸಂಘ, ಓಂಶಿವ ಯುವಕಮಂಡಲ ಸದಸ್ಯರು ಭಾಗವಹಿಸಿದರು.

LEAVE A REPLY

Please enter your comment!
Please enter your name here