ಪುತ್ತೂರು:ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ 51 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಪೂರ್ವಭಾವಿ ಸಭೆಯು ನ.07 ಮುಕ್ರಂಪಾಡಿಯ ಸುಭದ್ರಾ ಕಲಾ ಭವನದಲ್ಲಿ ಸಮಿತಿಯ ಮ್ಯಾನೇಜಿಂಗ್ ಟ್ರಸ್ಟಿ ಸೋಮಶೇಖರ್ ರೈ ಇಳಂತಾಜೆಯವರ ಅಧ್ಯಕ್ಷತೆಯಲ್ಲಿ ಜರಗಿತು.
ಸಮಿತಿಯ 51 ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು 2023ರ ಫೆಬ್ರವರಿ 11ರಂದು ಆಯೋಜಿಸುವುದೆಂದು ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗಣಹೋಮ, ಅಶ್ವತ್ಥ ಪೂಜೆ ಮೊದಲಾದ ವೈದಿಕ ಕಾರ್ಯಕ್ರಮಗಳೊಂದಿಗೆ ಸಾಯಂಕಾಲ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಗುವುದು ಎಂದು ಮ್ಯಾನೇಜಿಂಗ್ ಟ್ರಸ್ಟಿ ಸೋಮಶೇಖರ ರೈ ತಿಳಿಸಿದರು.
ಸಮಿತಿ ರಚನೆ:
51ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು ಅಧ್ಯಕ್ಷರಾಗಿ ಸೋಮಪ್ಪ ಗೌಡ ಕುಕ್ಕಾಡಿ ಪಂಜಳ, ಪ್ರಧಾನ ಕಾರ್ಯದರ್ಶಿಯಾಗಿ ಉಲ್ಲಾಸ್ ಮುಕ್ರಂಪಾಡಿ, ಉಪಾಧ್ಯಕ್ಷರಾಗಿ ರಜತ ಗಿರೀಶ್, ಕೋಶಾಧಿಕಾರಿಯಾಗಿ ಪದ್ಮನಾಭ ಮುಕ್ರಂಪಾಡಿ ಹಾಗೂ ಜೊತೆಕಾರ್ಯದರ್ಶಿಯಾಗಿ ಧನ್‌ರಾಜ್ ಮುಕ್ರಂಪಾಡಿ ಇವರನ್ನು ಆಯ್ಕೆಮಾಡಲಾಯಿತು.
ಸಮಿತಿಯ ಟ್ರಸ್ಟಿಗಳಾದ ಶ್ರೀಪಾದ ಮುಕ್ರಂಪಾಡಿ, ಸಂತೋಷ್ ಕೆ ಮುಕ್ರಂಪಾಡಿ, ಪದ್ಮನಾಭ ಮುಕ್ರಂಪಾಡಿ, ಗಣೇಶ ಮುಕ್ರಂಪಾಡಿ, 50 ನೇವರ್ಷದ ಸುವರ್ಣ ಸಂಭ್ರಮ ಸಮಿತಿಯ ಅಧ್ಯಕ್ಷರಾದ ಅರುಣ್‌ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ಮಾರ್ತ ಇಳಂತಾಜೆ, ನಿವೃತ್ತ ಉಪನ್ಯಾಸಕ ವಿಷ್ಣುಭಟ್, ಉದಯಕುಮಾರ್ ರೈ ಸಂಪ್ಯ, ವಸಂತಲಕ್ಷ್ಮೀ, ಪ್ರಮಿತಾ ಸಿ ಹಾಸ್, ಟಿ. ನಾರಾಯಣ ನಾಯ್ಕ, ವಿಶ್ವನಾಥ, ಲೋಕೇಶ, ಯತೀಶ, ಜಗದೀಶ, ಅಭೀಜ್ಞಾಕೃಷ್ಣ, ರವೀಂದ್ರ, ಸುರೇಶ ಮುಕ್ವೆ, ಕೃಷ್ಣಪ್ಪ, ಲಿಖಿತ್, ನವೀನ ಡಿ, ಮೋಹನ, ಗುರುರಾಜ್, ವಸಂತ,ಲಲಿತಾ ಹಾಗೂ ಭಕ್ತಾದಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.