ಬಿಜೆಪಿಯ ರೌಡಿ ರಾಜಕಾರಣಕ್ಕೆ ಪುತ್ತೂರಿನಲ್ಲೂ ಶಾಸಕರಿಂದ ಗೂಂಡಾಗಿರಿಗೆ ಕುಮ್ಮಕ್ಕು – ಕಾಂಗ್ರೆಸ್ ಆರೋಪ

0

ಪುತ್ತೂರು: ರಾಜ್ಯದಲ್ಲಿ ರೌಡಿಗಳನ್ನು ಸೇರಿಸಿಕೊಂಡು ಇವತ್ತು ರೌಡಿ ರಾಜ್ಯ ಮಾಡುವ ಪ್ರಯತ್ನ ಬಿಜೆಪಿ ಮಾಡುತ್ತಿದೆ. ಅದೇ ರೀತಿ ಪುತ್ತೂರಿನಲ್ಲೂ ರೌಡಿ ರಾಜ್ಯ ನಡೆಯುತ್ತಿದೆ.
ಪುತ್ತೂರಿನಲ್ಲಿ ಗೂಂಡಾಗಿರಿಗೆ ಕುಮಕ್ಕು ಕೊಡುವ ಕೆಲಸ ಶಾಸಕರು ಮಾಡುತ್ತಿದ್ದಾರೆ ಎಂದು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಆಲಿ ಅವರು ಆರೋಪಿಸಿದ್ದಾರೆ.


2020ರ ಫೆ. 12ಕ್ಕೆ ಆಗಿರುವ ಭೂ ನ್ಯಾಯ ಮಂಡಳಿಯ ಸದಸ್ಯರನ್ನು ಜಾಗದ ವ್ಯಾಜ್ಯಕ್ಕೆ ಸಂಬಂಧಿಸಿ ತಾನು ಹೇಳಿದವರಿಗೆ ತೀರ್ಪು ನೀಡಿಲ್ಲ ಎಂಬ ಕಾರಣಕ್ಕೆ ಶಾಸಕ ಸಂಜೀವ ಮಠಂದೂರು ಅವರು ಭೂ ನ್ಯಾಯ ಮಂಡಳಿಯಿಂದ ಡಿ.9ರಂದು ತೀರ್ಪು ಹೊರ ಬಂದ ಕೇವಲ 7 ದಿನದೊಳಗೆ ಭೂ ನ್ಯಾಯ ಮಂಡಳಿಯ ನಾಮ ನಿರ್ದೇಶಿತ ಸದಸ್ಯರ ನೇಮಕದ ಹಿಂದಿನ ಆದೇಶ ರದ್ದು ಮಾಡಿ ಹೊಸ ಭೂ ನ್ಯಾಯ ಮಂಡಳಿ ರಚನೆ ಮಾಡಿದ್ದಾರೆ.

ಈ ಹಿಂದೆ ಭೂ ನ್ಯಾಯ ಮಂಡಳಿಯ ಸಮಿತಿಯಲ್ಲಿ ವಕೀಲರಾದ ಬಿಜೆಪಿಯ ಪ್ರಮುಖರಾದ ಕೃಪಾಶಂಕರ್, ಗುರುವ ಮರಿಕೆ, ಜಯಾನಂದ ಮೋನಪ್ಪ ಪುರುಷ ಸದಸ್ಯರಾಗಿದ್ದರು. ಆದರೆ ಒಕ್ಕಲು ಮಸೂದೆಗೆ ಸಂಬಂಧಿಸಿದ ವ್ಯಾಜ್ಯ ಪ್ರಕರಣವೊಂದರಲ್ಲಿ ಪೆರ್ನು ಗೌಡ ಅವರ ಸಹೋದರರ ಹಾಗೂ ಶಕುಂತಲಾ ಅವರ ನಡುವೆ ವ್ಯಾಜ್ಯ ನಡೆಯುತ್ತಿತ್ತು. ಈ ಕುರಿತು ಭೂ ನ್ಯಾಯ ಮಂಡಳಿಯಲ್ಲಿ ಮೂರು ಬಾರಿ ಶಕುಂತಲಾ ಅವರ ಪರವಾಗಿ ತೀರ್ಪು ಬಂದಿತ್ತು. ಶಾಸಕರು ಈ ಕುರಿತು ಪೆರ್ನು ಗೌಡ ಅವರ ಪರವಾಗಿ ತೀರ್ಪು ನೀಡುವಂತೆ ಭೂ ನ್ಯಾಯ ಮಂಡಳಿ ಸದಸ್ಯರಿಗೆ ಮತ್ತು ಸಹಾಯಕ ಕಮೀಷನರ್‌ಗೆ ಒತ್ತಡ ಹಾಕಿದ್ದರು.

ಆದರೆ ಡಿ.9ರಂದು ಕೂಡಾ ಮತ್ತೆ ತೀರ್ಪು ಶಕುಂತಲಾ ಅವರ ಪರವಾಗಿ ಬಂದಿದ್ದರಿಂದ ಶಾಸಕರು ತೀರ್ಪು ಬಂದ 7 ದಿವಸದೊಳಗೆ ಭೂ ನ್ಯಾಯ ಮಂಡಳಿ ಹಿಂದಿನ ಸಮಿತಿ ರದ್ದು ಪಡಿಸಿ ಹೊಸ ಸಮಿತಿ ರಚನೆ ಮಾಡಿ ಆದೇಶ ಹೊರಡಿಸುವ ಮೂಲಕ ತಾನು ಹೇಳಿದ ಹಾಗೆ ಕೇಳಬೇಕು. ಇಲ್ಲವಾದರೆ ಅವರಿಗೆ ಪಾಠ ಕಳಿಸುವ ಕೆಲಸವನ್ನು ಭೂ ನ್ಯಾಯ ಮಂಡಳಿಯ ಸದಸ್ಯತ್ವ ರದ್ದುಪಡಿಸುವ ಮೂಲಕ ಸಂದೇಶ ನೀಡಿದ್ದಾರೆ ಎಂದ ಅವರು ಶಾಸಕರು ಅನ್ಯಾಯದ ಪರವಾಗಿ, ಭೂ ನ್ಯಾಯ ಮಂಡಳಿ ಸದಸ್ಯರು ನ್ಯಾಯದ ಪರವಾಗಿ ನಿಂತಿದ್ದರಿಂದ ಈ ಘಟನೆ ನಡೆದಿದೆ. ಇದಾದ ಬಳಿಕ ಶಕುಂತಲಾ ಅವರಿಗೆ ಹಲ್ಲೆ ನಡೆಸಲಾಗಿದೆ. ಈ ಎಲ್ಲಾ ಬೆಳವಣಿಗೆ ನೋಡಿದಾಗ ಶಾಸಕರು ಪುತ್ತೂರಿನಲ್ಲಿ ಗೂಂಡಾಗಿರಿಗೆ ಕುಮ್ಮಕ್ಕು ನೀಡುವಂತೆ ಕಾಣುತ್ತಿದೆ. ಬಿಹಾರ ಮತ್ತು ಯು.ಪಿ ಮಾದರಿ ಕಾರ್ಯಕ್ರಮವನ್ನು ಶಾಸಕರು ಇಲ್ಲಿಯೂ ಹಾಕಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸಹಾಯಕ ಕಮೀಷನರ್‌ಗೂ ವರ್ಗಾವಣೆ ಸಾಧ್ಯತೆ:
ನಾನು ಹೇಳಿದ ರೀತಿಯಲ್ಲಿ ತೀರ್ಪು ನೀಡಬೇಕೆಂದು ನನ್ನ ಮಾತು ಮೀರಬಾರದು ಎಂದು ಬೆದರಿಕೆಯ ಕೆಲಸವನ್ನು ಮಂಡಳಿ ರದ್ದುಪಡಿಸುವ ಮೂಲಕ ಪುತ್ತೂರಿನಲ್ಲಿ ನಡೆಯುವ ಶಾಸಕರ ದುರಾಢಳಿತ, ಅವರ ಅಧಿಕಾರ ದರ್ಪ, ಜನವಿರೋಧಿ ಕಾರ್ಯವನ್ನು ತೋರಿಸುತ್ತಿದೆ. ಹಲವಾರು ವಿಚಾರದಲ್ಲಿ ಭೂ ನ್ಯಾಯ ಮಂಡಳಿ ಸಂವಿಧಾನಿಕ ಸಮಿತಿ. ಅದಕ್ಕೆ ಅದರದ್ದೇ ಆಧಿಕಾರ ಇದೆ. ಅದನ್ನು ಉಲ್ಪಂಘಿಸಿ ತೀರ್ಫು ಕೊಡುಬೇಕೆಂದು ,ಶಾಸಕರ ಒತ್ತಡ ದೊಡ್ಡ ಅಪರಾಧ. ತೀರ್ಪು ಕೊಟ್ಟ ಸಮಿತಿ ಅಧ್ಯಕ್ಷ ಸಹಕಾಯ ಕಮೀಷನರ್ ಅವರಿಗೂ ಒತ್ತಡ ಹಾಕಲಾಗಿತ್ತು. ಆದರೆ ಅವರು ಒತ್ತಡಕ್ಕೆ ಮನಿಯದೆ ಉತ್ತಮ ತೀರ್ಪು ನೀಡಿದ್ದಾರೆ. ಹಾಗಾಗಿ ಮುಂದೆ ಈಗ ಸಮಿತಿ ರದ್ದು ಪಡಿಸಿದಂತೆ ಮುಂದೆ ಸಹಾಯಕ ಕಮೀಷನರ್ ಅವರನ್ನು ವರ್ಗಾವನೆ ಮಾಡುವ ಸಾಧ್ಯತಿದೆ ಶಾಸಕರಿಂದ ಆಗಲಿದೆ ಎಂದು ಮಹಮ್ಮದ್ ಆಲಿ ಹೇಳಿದರು.

ನನಗೆ ಒತ್ತಡ ಹಾಕಿದ್ದರು:
ಭೂ ನ್ಯಾಯ ಮಂಡಳಿಯ ಈ ಹಿಂದಿನ ಸದಸ್ಯರು ರಾಜೀನಾಮೆ ಕೊಡದಿದ್ದರೂ ಹೊಸದಾಗಿ ಸಮಿತಿ ರಚನೆ ಆಗಿದೆ. ಅದಕ್ಕೆ ಕಾರಣ ಶಾಸಕರು ಕೊಡಬೇಕು. ಈ ಕುರಿತು ಭೂ ನ್ಯಾಯ ಮಂಡಳಿಯ ಹಿಂದಿನ ಸದಸ್ಯರಾಗಿರುವ ಕೃಪಾಶಂಕರ್ ಅವರನ್ನು ನಾವು ಮಾತನಾಡಿಸಿದ್ದೇವೆ. ಅವರು ಹೇಳಿದಂತೆ ಶಾಸಕರು ಸತತವಾಗಿ ನನಗೆ ಒತ್ತಡ ಹಾಕಿದ್ದರು. ಆದರೆ ನನ್ನ ಆತ್ಮ ಸಾಕ್ಷಿ ಒಪ್ಪಿ ನಾನೊಬ್ಬ ವಕೀಲನಾಗಿ ಕಾನೂನಿನ್ವಯ ತೀರ್ಪು ನೀಡಿದ್ದೇನೆ. ಶಾಸಕರ ತಾಳಕ್ಕೆ ತಕ್ಕಂತೆ ಕುಣಿಯುವ ಕೆಲಸ ನಾನು ಮಾಡಿಲ್ಲ ಎಂದು ಹೇಳಿದ್ದಾರೆ ಎಂದು ಹೆಚ್ ಮಹಮ್ಮದ್ ಆಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಧಾಮೋದರ್ ಭಂಡಾರ್‌ಕರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here