ಡಿ. 8: ಕೃಷಿ ಉಪಕರಣಗಳ ಮಾರಾಟ ಮತ್ತು ಸೇವಾ ಮಳಿಗೆ ಕೃಷಿ ಏಜೆನ್ಸೀಸ್ ನವೀಕೃತಗೊಂಡು ಶುಭಾರಂಭ

0

ಶುಭಾರಂಭ ಪ್ರಯುಕ್ತ ಯಂತ್ರಗಳ ಮೇಲೆ ವಿಶೇಷ ರಿಯಾಯಿತಿ, ವಿನಿಮಯ ಮೇಳ, ಪ್ರದರ್ಶನ ಮಾರಾಟ ಮತ್ತು ಉಚಿತ ಯಂತ್ರ ತಪಾಸಣಾ ಶಿಬಿರ

ಪುತ್ತೂರು: ಯುವ ಜನತೆ ಕೃಷಿಯತ್ತ ಹೆಚ್ಚು ಒಲವು ವ್ಯಕ್ತಪಡಿಸುವ ಕಾಲ. ಹಿಂದೆ ಮಾನವ ಶ್ರಮವನ್ನು ಬಳಸಿ ಕೃಷಿ ಕೆಲಸವನ್ನು ಮಾಡಲಾಗುತ್ತಿತ್ತು. ಆದರೆ ಆಧುನಿಕ ಯುವ ಕೃಷಿಕರು ಹೆಚ್ಚಾಗಿ ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಕೃಷಿ ಕೂಲಿ ಕಾರ್ಮಿಕರ ಕೊರತೆ ಒಂದೆಡೆಯಾದರೆ ನಿಗದಿತ ಸಮಯದಲ್ಲಿ ಕೃಷಿ ಕೆಲಸ ಕಾರ್ಯಗಳು ನಡೆಸಬೇಕು ಮತ್ತು ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯಗಳಿಸಬೇಕು ಎಂಬ ಉದ್ದೇಶದಿಂದ ಕೃಷಿಯಲ್ಲಿ ಯಥೇಚ್ಚವಾಗಿ ಯಂತ್ರಗಳ ಬಳಕೆ ಆರಂಭಗೊಂಡಿದೆ. ಕೃಷಿ ಉತ್ತೇಜನಕ್ಕೆ ವಿವಿಧ ರೀತಿಯ ರಾಸಾಯನಿಕ ಗೊಬ್ಬರಗಳು, ಸಾವಯವ ಗೊಬ್ಬರಗಳು ಮರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಜೊತೆಗೆ ಯಂತ್ರಗಳು ದೊರೆಯುತ್ತದೆ. ಪುತ್ತೂರು ಮತ್ತು ಉಪ್ಪಿನಂಗಡಿಯಲ್ಲಿ ತನ್ನ ಶಾಖೆಯನ್ನು ಹೊಂದಿರುವ ಕೃಷಿ ಏಜೆನ್ಸೀಸ್ ಸಂಸ್ಥೆಯು ತನ್ನ 5 ನೇ ವರ್ಷದ ಸಂಭ್ರಮದಲ್ಲಿರುವ ಈ ಶುಭ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷವಾಗಿ ಕೃಷಿಕರಿಗೆ ಪ್ರಯೋಜನವಾಗಲಿರುವ ವಿವಿಧ ಕಂಪೆನಿಗಳ ಆಧುನಿಕ ಯಂತ್ರಗಳನ್ನು ಪರಿಚಯಿಸುತ್ತಾ ಬಂದಿದೆ. ದಿನಗಳು ಉರುಳಿದಂತೆ ಯಂತ್ರಗಳ ಮಾಡೆಲ್‌ಗಳಲ್ಲಿ ಒಂದಷ್ಟು ಬದಲಾವಣೆಗಳು, ಯಂತ್ರಗಳ ಕಾರ್ಯವೈಖರಿಯಲ್ಲಿ ಆಧುನಿಕ ಟಚಪ್ ಕೂಡಾ ನಡೆಯುತ್ತಿರುತ್ತದೆ. ಕೃಷಿ ವಿಧಾನದಲ್ಲಿ ನಾವು ಬದಲಾವಣೆಯನ್ನು ಬಯಸಿದಂತೆ ಉಪಕರಣಗಳಲ್ಲೂ ಬದಲಾವಣೆಯನ್ನು ಮಾಡಬೇಕಾಗುತ್ತದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸಗಳು ನಡೆಯಬೇಕಾದರೆ ಕೃಷಿ ಚಟುವಟಿಕೆಗಳಲ್ಲಿ ಯಂತ್ರಗಳ ಅನಿವಾರ್ಯತೆಗೆ ಕೃಷಿಕರು ಮಾರುಹೋಗುತ್ತಿದ್ದಾರೆ. ಕರಾವಳಿಯಲ್ಲಿ ನಡೆಯುವ ಕೃಷಿ ಚಟುವಟಿಕಗಳಿಗೆ ಬೇಕಾದ ಎಲ್ಲಾ ರೀತಿಯ ಯಂತ್ರೋಪಕರಣಗಳು ಕೃಷಿ ಏಜನ್ಸೀಸ್‌ನಲ್ಲಿ ಲಭ್ಯವಿದ್ದು ಗ್ರಾಹಕರು ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

ನವೀಕೃತ ಮಳಿಗೆ ಉದ್ಘಾಟನೆ

ಉಪ್ಪಿನಂಗಡಿಯ ಎಚ್ ಎಂ ಅಡಿಟೋರಿಯಂ ಮುಂಭಾಗದಲ್ಲಿರುವ ಕೃಷಿ ಏಜೆನ್ಸೀಸ್ ಶಾಖೆಯು ಗ್ರಾಹಕರ ಅನುಕೂಲತೆಗಾಗಿ ಮಳಿಗೆಯನ್ನು ನವೀಕೃತಗೊಳಿಸಿದ್ದು ಇದರ ಉದ್ಘಾಟನೆಯು ಡಿ. 8 ರಂದು ನಡೆಯಲಿದೆ. ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಅರಿಕೋಡಿ ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ತುಳು ಚಲನಚಿತ್ರ ನಟ ರಂಗಭೂಮಿ ಕಲಾವಿದ ಸುಂದರ್ ರೈ ಮಂದಾರ, ಸೊರಕೆ ಶ್ರೀಫಾರಂ ಮಾಲಕರೂ ಪ್ರಗತಿಪರ ಕೃಷಿಕರಾದ ಭರತ್ ರೈ, ಸಿಝ್ಲರ್ ಅಗ್ರಿಝೋನ್ ಆಡಳಿತ ಪಾಲುದಾರ ಪ್ರಸನ್ನಕುಮಾರ್ ಶೆಟ್ಟಿ, ಪುತ್ತೂರಿನ ಕೋಡಿಬೈಲ್ ಇಂಪೋರ್ಟ್ ಆಂಡ್ ಎಕ್ಸ್‌ಪೋರ್ಟ್ ಸಂಸ್ಥೆಯ ಆಡಳಿತ ನಿದೇರ್ಶಕರಾದ ಅಜಯ್‌ರಾಮ್ ಭಾಗವಹಿಸಲಿದ್ದಾರೆ.

ಮಳಿಗೆಯಲ್ಲಿ ಏನೇನಿದೆ?

ನವೀಕೃತಗೊಂಡು ಶುಭಾರಂಭಗೊಳ್ಳಲಿರುವ ಕೃಷಿ ಏಜೆನ್ಸೀಸ್ ಮಳಿಗೆಯಲ್ಲಿ ಡಿ.8 ರಿಂದ ಒಂದು ವಾರಗಳ ಕೃಷಿ ಯಂತ್ರೋಪಕರಣಗಳ ಮೇಲೆ ವಿಶೇಷ ರಿಯಾಯಿತಿ ಇರುತ್ತದೆ.‌

ಅಡಿಕೆ ಹಾಗೂ ಭತ್ತ ಕೃಷಿ ಮದ್ದು ಬಿಡುವ ಯಂತ್ರಗಳು ಮತ್ತು ಹುಲ್ಲು ಕತ್ತರಿಸುವ ಯಂತ್ರಗಳ ವಿನಿಮಯ ಮೇಳ ಮತ್ತು ಯಂತ್ರಗಳ ತಪಾಸಣಾ ಶಿಬಿರ ಇದ್ದು ಹಳೆಯ ಯಂತ್ರಗಳನ್ನು ವಿನಿಮಯ ಮಾಡಿಕೊಳ್ಳಲು ಕೃಷಿಕರಿಗೆ ಅವಕಾಶವಿರುತ್ತದೆ. ತಮ್ಮಲ್ಲಿರುವ ಯಂತ್ರಗಳು ಹಳೆಯ ಮಾಡೆಲ್ ಆಗಿದ್ದರೆ ಅದನ್ನು ವಿವಿಮಯ ಮಾಡಿ ಹೊಸ ಮಾಡೆಲ್ ಯಂತ್ರವನ್ನು ಪಡೆದುಕೊಳ್ಳಲು ಕೃಷಿಕರಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಸಿ ಸಿ ಟಿವಿ ಅಳವಡಿಕೆ ಮತ್ತು ಸಾವಯವ ಗೊಬ್ಬರ

ಸಿ ಸಿ ಟಿವಿ ಅಳವಡಿಕೆ ಮತ್ತು ಸಾವಯವ ಗೊಬ್ಬರದ ಪ್ರದರ್ಶನ ಮತ್ತು ಮಾರಾಟ ಸೇವೆಯನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ. ಲೇಟೆಸ್ಟ್ ಮಾಡೆಲ್ ಸಿ ಸಿ ಟಿವಿಗಳ ಪ್ರದರ್ಶನವನ್ನು ಮಾಡಲಾಗುತ್ತಿದ್ದು ವಿಶೇಷ ರಿಯಾಯಿತಿಯನ್ನು ಪ್ರಕಟಿಸಲಾಗಿದೆ. ವಿವಿಧ ಶೈಲಿಯ ಉತ್ತಮ ಗುಣಮಟ್ಟದ, ಎಲ್ಲಾ ಕೃಷಿಗಳಿಗೂ ಅನ್ವಯವಾಗುವ ಸಾವಯವ ಗೊಬ್ಬರಗಳ ಮಾರಾಟದ ವ್ಯವಸ್ಥೆಯೂ ಇರುತ್ತದೆ.

ಎಲ್ಲಾ ರೀತಿಯ ಯಂತ್ರಗಳು ಮಳಿಗೆಯಲ್ಲಿ ಲಭ್ಯ

ಕೃಷಿ ಚಟುವಟಿಕೆಗೆ ಬೇಕಾದ ಎಲ್ಲಾ ರೀತಿಯ ಯಂತ್ರೋಪಕರಣಗಳು ಕೃಷಿ ಏಜೆನ್ಸೀಸ್‌ನಲ್ಲಿ ಲಭ್ಯವಿದೆ. ತೋಟಕ್ಕೆ ಮದ್ದು ಬಿಡುವ ಯಂತ್ರ, ಹುಲ್ಲು ಕತ್ತರಿಸುವ ಯಂತ್ರಗಳು ಸೇರಿದಂತೆ ಎಲ್ಲಾ ರೀತಿಯ ಸಣ್ಣ ಪುಟ್ಟ ಯಂತ್ರಗಳು ಲಭ್ಯವಿದೆ. ಜೊತೆಗೆ ಸಿ ಸಿ ಟಿ ವಿ , ಶ್ರೇಷ್ಟ ಗುಣಮಟ್ಟದ ಸಾವಯವ ಗೊಬ್ಬರಗಳು ಮಾರಾಟಕ್ಕೆ ಲಭ್ಯವಿದ್ದು ಕೃಷಿಕರು ಮಳಿಗೆಗೆ ಭೇಟಿ ನೀಡಿ ಯಂತ್ರದ ಬಗ್ಗೆ ಮಾಹಿತಿ ಮತ್ತು ನಿಮ್ಮಲ್ಲಿರುವ ಹಳೆಯ ಯಂತ್ರಗಳನ್ನು ಹೊಸ ಯಂತ್ರಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ. ಕೃಷಿಕರಿಗೆ ಮಳಿಗೆಯಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು ಎಂದು ಸಂಸ್ಥೆಯ ಮಾಲಕರಾದ ಸದಾಶಿವ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here