ಮಾಣಿ ಜಿ.ಪಂ ವ್ಯಾಪ್ತಿಯಲ್ಲಿ ಜನಸ್ಪಂದನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಗ್ರಾಮಸ್ಥರ ಸಮಸ್ಯೆ ಪರಿಹಾರಕ್ಕೆ ಈ ಕಾರ್ಯಕ್ರಮ ಸಹಕಾರಿ: ರಾಜೇಶ್ ನಾಯ್ಕ್ ಉಳಿಪ್ಪಾಡಿ

ಜನಸ್ಪಂದನಾ ಕಾರ್ಯಕ್ರಮ ಬಹಳಷ್ಟು ಯಶಸ್ವಿಯಾಗಿದೆ: ಡಾ. ಸ್ಮಿತಾರಾಮು

ಶಾಸಕರ ಜನಸ್ಪಂದನಾ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ: ಸಚ್ಚಿದಾನಂದ

ವಿಟ್ಲ: ಕಳೆದ ನಾಲ್ಕು ಜನಸ್ಪಂದನ ಕಾರ್ಯಕ್ರಮಗಳು ಯಶಶ್ವಿಯಾಗಿ ನಡೆದಿದೆ. ಬಹಳಷ್ಟು ಜನರಿಗೆ ಈ ಜನಸ್ಪಂದನ ಕಾರ್ಯಕ್ರಮ ಸಹಕಾರಿಯಾಗಿದೆ. ಹೆಚ್ಚಿನ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಪ್ರಯತ್ನ ಮಾಡಿದ್ದೇವೆ ಎಂದು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿರವರು ಹೇಳಿದರು.

ಅವರು ಡಿ.6ರಂದು ನೇರಳಕಟ್ಟೆ ಜನಪ್ರೀಯ ಗಾರ್ಡ ನ್ ನಲ್ಲಿ ನಡೆದ ಮಾಣಿ ಜಿ.ಪಂ ವ್ಯಾಪ್ತಿಯ ಬೋಳಂತೂರು, ನೆಟ್ಟಮುಡ್ನೂರು, ಅನಂತಾಡಿ, ಮಾಣಿ, ವೀರಕಂಭ,ಪೆರಾಜೆ, ಬೋಳಂತೂರು ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಕಾನೂನು ಚೌಕಟ್ಟಿನ ಡಿಯಲ್ಲಿ ಸರಕಾರ ಮಟ್ಟದಲ್ಲಿ ಆಗುವ ಪ್ರತಿಯೊಂದು ಕೆಲಸಗಳನ್ನು ಸ್ಥಳದಲ್ಲಿ ಯೇ ಪರಿಹಾರಕ್ಕಾಗಿ ಕ್ರಮಕೈಗೊಳ್ಳಲಾಗುತ್ತಿದೆ. ಸುಮಾರು 324 ಜನರಿಗೆ ಬೇರೆ ಬೇರೆ ವಿಧದ ಸವಲತ್ತುಗಳನ್ನು ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. ಇನ್ನೊಂದು ಜನಸ್ಪಂಧನೆ ಕಾರ್ಯಕ್ರಮ ನಡೆದ ಬಳಿಕ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ನಡೆಸಲಾಗುವುದು. ಇಂದಿನವರೆಗೆ ಜನಸ್ಪಂದನಾ ಕಾರ್ಯಕ್ರಮದ ಮೂಲಕ ಸುಮಾರು 2000 ಮಂದಿ ಫಲಾನುಭವಿಗಳಿಗೆ ಸರಕಾರದ ವಿವಿಧ ಸವಲತ್ತುಗಳನ್ನು ವಿತರಿಸಿದ್ದೇವೆ. ಕಳೆದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಒಟ್ಟು 309 ಅರ್ಜಿಗಳು ಸ್ವೀಕಾರವಾಗಿದ್ದು, ಇದರಲ್ಲಿ ಶೇ.90 ರಷ್ಟು ಅರ್ಜಿಗಳ ಸಮಸ್ಯೆ ಗಳನ್ನು ಸ್ಥಳದಲ್ಲಿ ಯೇ ಪರಿಹಾರ ಮಾಡಿದ್ದೇವೆ. ಜನರಿಗೆ ಸ್ಪಂದನೆ ಕೊಡುವ ಮಹತ್ವದ ಕಾರ್ಯಕ್ರಮ ಇದಾಗಿದ್ದು, ಕಾರ್ಯಕ್ರಮದ ಪ್ರಯೋಜನ ಪಡೆಯಲು ಅವರು ವಿನಂತಿ ಮಾಡಿದರು.

ಬಂಟ್ವಾಳ ತಹಶೀಲ್ದಾರ್ ಡಾ. ಸ್ಮೀತಾ ರಾಮುರವರು ಮಾತನಾಡಿ ಬಂಟ್ವಾಳ ತಾಲೂಕಿನಲ್ಲಿ ನಡೆದ ಜನಸ್ಪಂದನೆ ಕಾರ್ಯಕ್ರಮ ಬಹಳಷ್ಟು ಯಶಸ್ವಿಯಾಗಿದೆ. ಜನರ ಸಮಸ್ಯೆ, ಅಹವಾಲನ್ನು ಇಲ್ಲಿಯೇ‌ ಬಗೆಹರಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಮಾಡಲುದ್ದೇಶಿಸುರುವ ಜಿಲ್ಲಾಮಟ್ಟದ ಕಾರ್ಯಕ್ರಮಗಳನ್ನು ನೀವೆಲ್ಲರೂ ಸೇರಿ ಯಶಸ್ವಿಗೊಳಿಸಬೇಕು ಎಂದರು.

ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಜನಸ್ಪಂದನಾ ಕಾರ್ಯಕ್ರಮಕ್ಕೆ ನಮ್ಮ ಗ್ರಾಮವನ್ನು ಆಯ್ಕೆ ಮಾಡಿರುವುದು ತುಂಬಾ ಸಂತಸ ತಂದಿದೆ. ಗ್ರಾಮಸ್ಥರು ಯಾವುದೇ ಕೆಲಸವಿದ್ದರೆ ತಾಲೂಕಿಗೆ ತೆರಳಬೇಕಿತ್ತು ಆದರೆ ಇಂದಿಲ್ಲಿ ತಾಲೂಕಿನ ಎಲ್ಲಾ ಅಧಿಕಾರಿಗಳು ಬಂದಿದ್ದಾರೆ. ನಾವೆಲ್ಲರು ಇದರ ಪ್ರಯೋಜನವನ್ನು ಪಡೆದುಕೊಳ್ಳೋಣ. ಶಾಸಕರ ಜನಸ್ಪಂದನಾ ಕಾರ್ಯಕ್ರಮ ನಿಜಕ್ಕೂ ಅತ್ಯುತ್ತಮ ಕಾರ್ಯಕ್ರಮ ವಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ನೇರಳಕಟ್ಟೆಯ ಜನಪ್ರೀಯ ಹಾಲ್ ನ ಮಾಲಕ ಡಾ. ಅಬ್ದುಲ್ ಬಶೀರ್ ವಿ.ಕೆ.ರವರ ಪರವಾಗಿ ಶಾಸಕರನ್ನು ಗೌರವಿಸಲಾಯಿತು.

ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ, ಅನಂತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಣೇಶ್ ಪೂಜಾರಿ, ವೀರಕಂಬ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ವೀರಕಂಬ, ಹಿಂದುಳಿದ ವರ್ಗಗಳ ಅಧಿಕಾರಿ ಬಿಂದಿಯಾ, ಕೆ.ಎಸ್.ಆರ್.ಟಿ.ಸಿ.ಡಿಪೋ ಮ್ಯಾನೇಜರ್ ಶ್ರೀಸ ಭಟ್, ತಾಲೂಕು ಆರೋಗ್ಯ ಅಧಿಕಾರಿ ಅಶೋಕ್ , ಜಿ.ಪಂ.ಇಂಜಿನಿಯರ್ ತಾರಾನಾಥ, ಪಿ.ಡಬ್ಲ್ಯೂ ಡಿ.ಇಲಾಖೆ ಇಂಜಿನಿಯರ್ ಜಯಪ್ರಕಾಶ್, ಅರಣ್ಯ ಇಲಾಖೆಯ ಅಧಿಕಾರಿ ರಾಜೇಶ್ ಬಳಿಗಾರ್, ಪಶುಸಂಗೋಪನೆ ಇಲಾಖೆ ಯ ವೈದ್ಯ ಅಧಿಕಾರಿ ಅವಿನಾಶ್, ವಿಟ್ಲ ಸಿ.ಡಿ.ಪಿ.ಒ. ಉಷಾ, ಕಾರ್ಮಿಕ ಇಲಾಖೆಯ ಅಧಿಕಾರಿ ಮರ್ಲಿನ್ ಮೊದಲಾದವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ನೇರಳಕಟ್ಟೆ ಹಿಪ್ರಾ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು. ತಾ.ಪಂ.ಇ.ಒ.ರಾಜಣ್ಣ ವಂದಿಸಿದರು.ದಿನೇಶ್ ರಾಯಿ‌ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.