ರೂ.1.70 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಸಂಜೀವ ಮಠಂದೂರು
ಪುತ್ತೂರು: ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ಪೂರ್ಣಗೊಂಡ ಕಾಮಗಾರಿಗಳ ಉದ್ಘಾಟನೆ ಮತ್ತು ಹೊಸ ಕಾಮಗಾರಿಗಳಿಗೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿದರು.
ಕೊಳ್ತಿಗೆ ಗ್ರಾಮದಲ್ಲಿ 2.53 ಕೋಟಿ ರೂ. ಅನುದಾನದಲ್ಲಿ ಸುಮಾರು ಏಳು ಕಾಮಗಾರಿಗಳನ್ನು ಸಂಜೀವ ಮಠಂದೂರು ಉದ್ಘಾಟಿಸಿದರು. 1.70ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟಿಕರಗೊಂಡ ಕೊಳ್ತಿಗೆ-ಪಾಂಬಾರು ರಸ್ತೆ, 33ಲಕ್ಷದಲ್ಲಿ ನಿರ್ಮಾಣಗೊಂಡ ಉಬರಾಜೆ-ಪುಂಡ್ಯಾವನ ರಸ್ತೆ, ತಲಾ ಹತ್ತು ಲಕ್ಷದಲ್ಲಿ ಕಾಂಕ್ರೀಟಿಕರಣಗೊಂಡ ಕುಂಟಿಕಾನ-ಕಂಟ್ರಮಜಲು ರಸ್ತೆ, ಪೆರ್ಲಂಪಾಡಿ-ಕುದ್ಕುಳಿ ರಸ್ತೆ, ಸರಸ್ವತಿ ಮೂಲೆ – ನಳೀಲು ರಸ್ತೆ, ಪೆರ್ಲಂಪಾಡಿ-ಸುಬ್ಬನಡ್ಕ ರಸ್ತೆ, ಮಾವಿನಕಟ್ಟೆ- ಕಲ್ಲರ್ಪೆ ರಸ್ತೆಯನ್ನು ಉದ್ಘಾಟಿಸಿದರು. ಇದೇ ವೇಳೆ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೊಠಡಿಯ ಉದ್ಘಾಟನೆ, ಪೆರ್ಲಂಪಾಡಿ ಸ.ಹಿ.ಪ್ರಾ.ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆಯನ್ನು ನೆರವೇರಿಸಿದರು.
1.70 ಕೋಟಿ ವೆಚ್ಚದ 11 ಹೊಸ ಕಾಮಗಾರಿಗಳಿಗೆ ಶಿಲಾನ್ಯಾಸ:
ರೂ.50 ಲಕ್ಷ ವೆಚ್ಚದಲ್ಲಿ ಷಣ್ಮುಖ ದೇವಸ್ಥಾನದ ಬಳಿಯ ತಡೆಗೋಡೆ ನಿರ್ಮಾಣ, ರೂ.30 ಲಕ್ಷ ವೆಚ್ಚದಲ್ಲಿ ಪೆರ್ಲಂಪಾಡಿ-ಕಣಿಯಾರು ರಸ್ತೆ ಕಾಂಕ್ರೀಟಿಕರಣ, ತಲಾ ರೂ ಹತ್ತು ಲಕ್ಷ ವೆಚ್ಚದಲ್ಲಿ 9 ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗಳಾದ ಮಾಲೆತ್ತೋಡಿ-ಕಜೆ-ಭಟ್ರಹಿತ್ಲು ರಸ್ತೆ, ಪೆರ್ನಾಜೆ -ಪುಂದ್ರೂಕೋಡಿ, ಉಬರಾಜೆ-ಕೋರಿಕ್ಕಾರು, ಮಾವಿನಕಟ್ಟೆ-ಕಲ್ಲರ್ಪೆ, ಮೊಗಪ್ಪೆ-ಕಲ್ಲರ್ಪೆ, ಮೊಗಪ್ಪೆ-ಕುರ್ಮಕೋಡಿ, ಪಾಲ್ತಾಡು-ಬಾಕಿಜಾಲು,ಸರಸ್ವತಿ ಮೂಲೆ-ಪಂಜಿಕೂಡೇಲು, ಬಾಯಂಬಾಡಿ ರಸ್ತೆಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರುರವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ಕೊಳ್ತಿಗೆ ಗ್ರಾ.ಪಂ. ಅಧ್ಯಕ್ಷ ಶ್ಯಾಮಸುಂದರ್ ರೈ ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಿದರು.
ಕೊಳ್ತಿಗೆ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಸತೀಶ್ ಪಾಂಬಾರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕೊಳ್ತಿಗೆ ಗ್ರಾ.ಪಂ.ಮಾಜಿ ಸದಸ್ಯೆ ಚಂದ್ರಾವತಿ ಕುದ್ಕುಳಿ ಪ್ರಾರ್ಥನೆ ನೆರವೇರಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಕೊಳ್ತಿಗೆ ಗ್ರಾ.ಪಂ.ಉಪಾಧ್ಯಕ್ಷೆ ನಾಗವೇಣಿ ಉಪಸ್ಥಿತರಿದ್ದರು