ಪುತ್ತೂರು: ಕಮ್ಮಾಡಿ ಇಸ್ಲಾಮಿಕ್ ಸೆಂಟರ್ ಸಂಪ್ಯ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಝಹ್ರಬತೂಲ್ ವುಮೆನ್ಸ್ ಕಾಲೇಜಿನಲ್ಲಿ ಕಾಲೇಜ್ ಡೇ ಕಾರ್ಯಕ್ರಮ ಪ್ರಯುಕ್ತ ಶೈಕ್ಷಣಿಕ ಮಾರ್ಗದರ್ಶನ ಕಾರ್ಯಕ್ರಮ ಡಿ.1ರಂದು ನಡೆಯಿತು.
ಸಂಸ್ಥೆಯ ಅಧ್ಯಕ್ಷ ಡಾ.ಅಶ್ರಫ್ ಕಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಂಶುಪಾಲ ಅಬೂಬಕ್ಕರ್ ಸಿದ್ದೀಕ್ ಜಲಾಲಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ರಫೀಕ್ ಮಾಸ್ಟರ್ ಆತೂರು ಭಾಗವಹಿಸಿ ಮಾತನಾಡಿದರು. ಅತಿಥಿಗಳಾಗಿ ಶ್ರೀನಿವಾಸ್ ಕಾಲೇಜಿನ ಪ್ರೊ.ಅನೀಸ್ ಅಡ್ವಕೇಟ್ ಮೂಸಕುಞಿ ಪೈಂಬಚಾಲ್, ಅಬ್ದುಲ್ ರಝಾಕ್ ಸಂಪ್ಯ, ಅಬ್ದುಲ್ ರಝಾಕ್ ಸಂಟ್ಯಾರ್, ಶರೀಫ್ ಪಣೆಮಜಲ್, ಕರೀಂ ಸವಣೂರು ಉಪಸ್ಥಿತರಿದ್ದರು. ಬಳಿಕ ಆರೋಗ್ಯ ಮಾಹಿತಿ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಪುತ್ತೂರು ಡಯಾಕೇರ್‌ಸ್ಪೇಷಾಲಿಟಿ ಕ್ಲಿನಿಕ್‌ನ ಡಾ. ಹಬೀನ ಶೈರ, ಶಾಹಿದ ಎಂ.ಕಾಂ ಪಿಜಿ ಡಿಸಿ, ಸೌದ ಅಝ್ಝಾಹಿರ, ಆಯಿಷತ್ ಮರ್ವ ಎಂ.ಎ, ಸೌದ ಅಝ್ಝಕಿಯ್ಯ, ಫರ್ಝಾನ ಅಝ್ಝಕಿಯ್ಯ ಮೊದಲಾದವರು ಭಾಗವಹಿಸಿದ್ದರು.