ಪುತ್ತೂರು : ಆರ್ಯಾಪು ಗ್ರಾಮ ,ಬುಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಹಾಗೂ ನೇಮೋತ್ಸವವೂ ಡಿ.10 ಮತ್ತು 11 ರಂದು ವಿಜೃಂಭಣೆಯಿಂದ ನಡೆಯಲಿದೆ .
ಡಿ.9 ರಂದು ಸಂಜೆ ಗಂಟೆ 7 ರಿಂದ ದೇವತಾ ಪ್ರಾರ್ಥನೆ , ಉಗ್ರಣ ಪೂಜೆಯ ಬಳಿಕ ಮರಾಟಿ ಭಜನಾ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದ್ದು , ಡಿ 10 ರಂದು ಬೆಳಿಗ್ಗೆ 8 ರಿಂದ ಗಣಪತಿ ಹವನ , ಕಲಶ ಪೂಜೆ, ಕಲಶಾಭಿಷೇಕ , ಮಹಾಪೂಜೆ ನಂತರ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದ್ದು , ಸಂಜೆ 5 ರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ ,ದೇವರ ಸವಾರಿ ಮತ್ತು ಕಟ್ಟೆಪೂಜೆ ಜರಗಲಿದ್ದು ,ಆನಂತರ ಅನ್ನಸಂತರ್ಪಣೆ ನಡೆಯಲಿದೆ.
ಡಿ.11ರಂದು ಬೆಳಗ್ಗೆ 9 ರಿಂದ ಶ್ರೀದೇವರ ಬಳಿ ಹೊರಟು ಉತ್ಸವ , ದರ್ಶನದ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ , ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5 ರಿಂದ ಶ್ರೀ ರಕ್ತೇಶ್ವರಿ ಹಾಗೂ ಪಂಜುರ್ಲಿ ದೈವಗಳ ಭಂಡಾರ ತೆಗೆದು ನೇಮೋತ್ಸವ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆಯೆಂದುದೇವಾಲಯದ ಪ್ರಕಟಣೆ ತಿಳಿಸಿದೆ.