ಬೆಟ್ಟಂಪಾಡಿ: ಮಕ್ಕಳ ಗ್ರಾಮಸಭೆ – ಸ್ಪರ್ಧೆಯಲ್ಲಿ ನವೋದಯ ಪ್ರೌಢಶಾಲೆಗೆ ಹಲವು ಬಹುಮಾನ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಮಕ್ಕಳ ಗ್ರಾಮ ಸಭೆಯ ಪ್ರಯುಕ್ತ ನಡೆದ ಅಂತರ್ ಶಾಲಾ ಸ್ಪರ್ಧೆಯಲ್ಲಿ ನವೋದಯ ಪ್ರೌಢಶಾಲೆಯ ಹಲವು ವಿದ್ಯಾರ್ಥಿಗಳು ಭಾಗವಹಿಸಿ ಅನೇಕ ಬಹುಮಾನಗಳನ್ನು ಪಡೆದಿರುತ್ತಾರೆ.

ಚಿತ್ರಕಲಾ ಸ್ಪರ್ಧೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಾದ ತೇಜಸ್ ಕೆ. ವಿ. ಪ್ರಥಮ, ಯಶಸ್ವಿ ದ್ವಿತೀಯ, ಚೈತನ್ಯ ಕೆ. ಮತ್ತು 8 ನೇ ತರಗತಿಯ ಯತೀನ್ ಪ್ರೋತ್ಸಾಹಕ ಬಹುಮಾನವನ್ನು ಪಡೆದಿರುತ್ತಾರೆ. ಭಾಷಣ ಸ್ಪರ್ಧೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯರಾದ ಶಿಲ್ಪ ಪ್ರಥಮ ಹಾಗೂ ಶ್ರುತಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ರಾಷ್ಟ್ರಗೀತೆ ಸ್ಪರ್ಧೆಯಲ್ಲಿ 9 ನೇ ತರಗತಿಯ ಸಮೀಕ್ಷಾ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಶಾಲಾ ಶಿಕ್ಷಕಿಯರಾದ ಸುಮಂಗಲಾ ಕೆ., ಶೋಭಾ ಬಿ. ಹಾಗು ಶಿಕ್ಷಕ ವೃಂದದವರು ಇವರಿಗೆ ಮಾರ್ಗದರ್ಶನವನ್ನು ನೀಡಿರುತ್ತಾರೆ ಎಂದು ಮುಖ್ಯಗುರು ಪುಷ್ಪಾವತಿ ಎಸ್. ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here