ಪುತ್ತೂರು: 30 ನೇ ವರ್ಷದ ಕೋಟಿ ಚೆನ್ನಯ್ಯ ಜೋಡು ಕರೆ ಕಂಬಳದ ಕರೆ ಮೂಹೂರ್ತ

0

ಪುತ್ತೂರು: ಜ.28 ಮತ್ತು 29ರಂದು ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯಲ್ಲಿ ನಡೆಯುವ 30ನೇ ವರ್ಷದ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಜೋಡುಕರೆ ಕಂಬಳಕ್ಕೆ ಡಿ.12 ರಂದು ಕರೆ ಮುಹೂರ್ತ ನಡೆಯಿತು.

ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಕಂಬಳ ಸಮಿತಿ ಸಂಚಾಲಕ ಸುಧಾಕರ ಶೆಟ್ಟಿರವರ ನೇತೃತ್ವದಲ್ಲಿ ಮೂಲ ನಾಗನ ಕಟ್ಟೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿರವರು ಹಾರೆಯ ಮೂಲಕ ಮಣ್ಣು ತೆಗೆಯುವ ಮೂಲಕ ಕರೆ ಮುಹೂರ್ತಕ್ಕೆ ಚಾಲನೆ ನೀಡಿ ಶುಭಹಾರೈಸಿದರು.

ಪ್ರಧಾನ ಕಾರ್ಯದರ್ಶಿ ಪಿ.ವಿ.ದಿನೇಶ್ ಕುಲಾಲ್, ಕೋಶಾಧಿಕಾರಿ ಪಂಜಿಗುಡ್ಡೆ ಈಶ್ವರ ಭಟ್, ಉಪಾಧ್ಯಕ್ಷ ವಸಂತ್ ಕುಮಾರ್ ರೈ ಜೆ.ಕೆ., ಶಿವರಾಮ ಆಳ್ವ, ಜಿನ್ನಪ್ಪ ಪೂಜಾರಿ ಮುರ, ಜೋಕಿಂ ಡಿಸೋಜ, ಜತೆಕಾರ್ಯದರ್ಶಿ ಬಿ.ಪ್ರೇಮಾನಂದ ನಾಕ್, ಪ್ರವೀಣ್ ಶೆಟ್ಟಿ ಅಳಕೆಮಜಲು, ವಿಕ್ರಂ ಶೆಟ್ಟಿ ಕೋಡಿಂಬಾಡಿ, ಸುಧಾಕರ ಶೆಟ್ಟಿ ಬೀಡಿನಮಜಲು, ರೋಶನ್ ರೈ ಬನ್ನೂರು, ವಿಕ್ರಂ ಶೆಟ್ಟಿ ಅಂತರ, ಮುರಳೀಧರ ರೈ ಮಠಂತಬೆಟ್ಟು, ರೋಶನ್ ರೈ ಬನ್ನೂರು, ಉಮೇಶ್ ಕರ್ಕೆರ, ಕೃಷ್ಣಪ್ರಸಾದ್ ಆಳ್ವ, ಗಣೇಶ್ ಶೆಟ್ಟಿ ಬಿಳಿಯೂರು, ಮಂಜುನಾಥ ಗೌಡ ತೆಂಕಿಲ, ವಿಜಿತ್ ಗೌಡ, ವಿಜಯ ಕುಮಾರ್ ಪೂಜಾರಿ ಕೋಡಿಂಬಾಡಿ, ಕಿರಣ್ ಡಿಸೋಜ ಬನ್ನೂರು, ಯತೀಶ್ ಶೆಟ್ಟಿ ಕೋಡಿಂಬಾಡಿ, ಪ್ರಶಾಂತ್ ಮುರ, ರಮೇಶ್ ನೆಲ್ಲಿಕಟ್ಟೆ, ಸುದೇಶ್ ಚಿಕ್ಕಪುತ್ತೂರು, ಗಣೇಶ್ ಪೂಜಾರಿ ಕಾವು, ಜನಾರ್ಧನ ಸಿಟಿಗುಡ್ಡೆ, ಭವಿನ್ ಶೇಟ್ ನೆಲ್ಲಿಕಟ್ಟೆ, ಚಂದ್ರಶೇಖರ ಶೆಟ್ಟಿ ಪಾಲ್ತಾಡು, ಉಪಸ್ಥಿತರಿದ್ದರು. ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರ್ವಹಿಸಿದರು.

ಹೆಸರು ಸೂಚಿಸಿ ಬಹುಮಾನ ಗೆಲ್ಲಿರಿ

30ನೇ ವರ್ಷದ ಸವಿನೆನಪಿಗೆ ಕಳೆದ 29 ವರ್ಷಗಳಿಂದ ನಡೆದುಕೊಂಡು ಬಂದ ಕಂಬಳದ ಇತಿಹಾಸವನ್ನು ಮುಂದಿನ ಪೀಳಿಗೆಗೆ ದಾಖಲಿಸುವ ನಿಟ್ಟಿನಲ್ಲಿ ಸ್ಮರಣ ಸಂಚಿಕೆಯನ್ನು ಹೊರತರಲು ಉದ್ಧೇಶಿಸಲಾಗಿದ್ದು ಈ ಸ್ಮರಣ ಸಂಚಿಕೆಗೆ ಸೂಕ್ತ ಹೆಸರು ಸೂಚಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದೆ. ಹೆಸರನ್ನು [email protected] ಗೆ ಕಳುಹಿಸಬಹುದು. ಆಯ್ಕೆಯಾದ ಹೆಸರಿಗೆ ಸೂಕ್ತ ಬಹುಮಾನ ನೀಡಲಾಗುವುದು.

ಎನ್.ಚಂದ್ರಹಾಸ ಶೆಟ್ಟಿ
ಅಧ್ಯಕ್ಷರು, ಕಂಬಳ ಸಮಿತಿ

LEAVE A REPLY

Please enter your comment!
Please enter your name here