ವಕೀಲರ ರಕ್ಷಣಾ ಕಾಯ್ದೆ ಮಸೂದೆಯನ್ನು ಸದನದಲ್ಲಿ ಮಂಡಿಸಿ ಅಂಗೀಕರಿಸಲು ವಕೀಲರ ಸಂಘದಿಂದ ಶಾಸಕರಿಗೆ ಮನವಿ

0

ಪುತ್ತೂರು:ವಕೀಲರ ರಕ್ಷಣಾ ಕಾಯ್ದೆ ಮಸೂದೆಯನ್ನು ಸದನದಲ್ಲಿ ಮಂಡಿಸಿ ಅಂಗೀಕರಿಸುವಂತೆ ಒತ್ತಾಯಿಸಿ ಪುತ್ತೂರು ವಕೀಲರ ಸಂಘದಿಂದ ಶಾಸಕ ಸಂಜೀವ ಮಠಂದೂರು ಅವರಿಗೆ ಡಿ.17 ರಂದು ವಕೀಲರ ಸಂಘದ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.


ದೇಶದ ಸ್ವಾತಂತ್ರ್ಯ ಪೂರ್ವ ಹೋರಾಟದಿಂದ ಪಡೆದ ಸ್ವಾತಂತ್ರ್ಯವು ಹರಣ ಆಗದಂತೆ ರಕ್ಷಿಸುವಲ್ಲಿ ವಕೀಲರು ದೇಶದ ರಾಜಕಾರಣದಲ್ಲಿ ವಹಿಸಿದ ಪಾತ್ರ ಅನನ್ಯ ಹಾಗು ಅನುಕರಣೀಯ. ತಮ್ಮ ವೃತ್ತಿಯನ್ನು ಹಾಗು ಅನುಭವದ ಸಾರವನ್ನು ದೇಶಕ್ಕಾಗಿ ಹಾಗು ಸಂವಿಧಾನದ ರಕ್ಷಣೆಯಲ್ಲಿ ಮುಡಿಪಿಟ್ಟ ವೃತ್ತಿಪರ ನ್ಯಾಯವಾದಿಗಳು ಮುಂಚೂಣಿಯಲ್ಲಿ ಕಾಣಸಿಗುತ್ತಾರೆ.ನಮ್ಮ ಸ್ವಂತ ಕೆಲಸಗಳನ್ನು ಬದಿಗಿಟ್ಟು ಸಂಸಾರ ಸುಖವನ್ನು ಕೂಡಾ ತ್ಯಾಗ ಮಾಡಿ ಕೇವಲ ತನ್ನ ಕಕ್ಷಿಗಾರರಿಗೋಸ್ಕರ ಹಗಲಿರುಳು ದುಡಿಯುತ್ತಾ ಹೋರಾಡುತ್ತಿರುವ ನ್ಯಾಯವಾದಿ ವೃತ್ತಿ ಬಾಂಧವರು ತಮ್ಮ ಕಚೇರಿಯಲ್ಲಿ ಹಾಗೂ ತಾವು ವೃತ್ತಿ ಮಾಡುತ್ತಿರುವ ನ್ಯಾಯಾಲಯಗಳಲ್ಲಿ ಹಾಗು ಇತರೇ ಕಡೆಗಳಲ್ಲಿ ಯಾವುದೇ ರಕ್ಷಣೆಯಿಲ್ಲದೆ, ಎದುರಾಳಿ ಕಕ್ಷಿಗಾರರ ಹಾಗು ಇತರರ ದುಷ್ಪ್ರೇರಿತ ದಾಳಿಗೆ ತುತ್ತಾಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.

ರಕ್ಷಣೆ ಕೊಡಬೇಕಾದ ಆರಕ್ಷಕರು ಸಹ ನ್ಯಾಯವಾದಿಗಳನ್ನು ಗುರಿಯಾಗಿಸಿ ಹಲ್ಲೆ ಮಾಡುತ್ತಿರುವುದೂ ಇತ್ತೀಚಿನ ಕೆಲವು ಘಟನೆಗಳಿಂದ ಸ್ಪಷ್ಟವಾಗಿದೆ.ತಮ್ಮ ಕಕ್ಷಿಗಾರರ ರಕ್ಷಣೆಗಾಗಿ ಅವರ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಟ ಮಾಡುತ್ತಿರುವ ನ್ಯಾಯವಾದಿಗಳಿಗೆ ರಕ್ಷಣೆ ಇಲ್ಲದೆ ಹೋದರೆ ಅದು ಸ್ವತಂತ್ರ ಭಾರತದ ಕಗ್ಗೊಲೆ ಎಂದರೂ ತಪ್ಪಾಗಲಾರದು.ಈ ನಿಟ್ಟಿನಲ್ಲಿ ವಕೀಲರ/ನ್ಯಾಯವಾದಿಗಳ ಸಂರಕ್ಷಣಾ ಕಾಯ್ದೆಯನ್ನು ಸದನದಲ್ಲಿ ಮಂಡಿಸಿ ಅಂಗೀಕರಿಸಿ ಜಾರಿಗೊಳಿಸಿ ಸಮಸ್ತ ವಕೀಲರ ಸಮುದಾಯಕ್ಕೆ ಬೆಂಬಲ ಸೂಚಿಸಬೇಕಾಗಿ ಮನವಿ ಮಾಡುತ್ತಿದ್ದೆವೆ ಎಂದು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಮತ್ತು ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ಅವರು ಮನವಿಯನ್ನು ಶಾಸಕರಿಗೆ ನೀಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here