ಫಿಲೋಮಿನಾದಲ್ಲಿ ರೋಟರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ತೆರೆ:ಸೆವೆನ್ ಬ್ಲಾಸ್ಟರ್‍ಸ್ ಮೈಸೂರು ಚಾಂಪಿಯನ್, ಯುವರತ್ನ ರೈಡರ್‍ಸ್ ರನ್ನರ್‍ಸ್

0

ಚಿತ್ರ: ಶೈನಿ ದರ್ಬೆ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್, ರೋಟರಿ ಕ್ಲಬ್ ಪುತ್ತೂರು ಎಲೈಟ್, ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇವುಗಳ ಪ್ರಾಯೋಜಕತ್ವದಲ್ಲಿ ದ17 ಹಾಗೂ 18 ರಂದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜು ಕಾಲೇಜು ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ರೋಟರಿ ಅಂತರ್ರಾಷ್ಟ್ರೀಯ ಜಿಲ್ಲೆ 3181 ಇದರ ಎರಡನೇ ವರ್ಷದ ರೋಟರಿ ಪ್ರೀಮಿಯರ್ ಲೀಗ್(ಆರ್.ಪಿ.ಎಲ್)-2022 ಓವರ್‌ಆರ್ಮ್ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ತೆರೆ ಕಂಡಿದೆ.


ಕೂಟದಲ್ಲಿ ಸೆವೆನ್ ಬ್ಲಾಸ್ಟರ್‍ಸ್ ಮೈಸೂರು ತಂಡ 2022 ರ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದು, ಯುವರತ್ನ ರೈಡರ್‍ಸ್ ತಂಡವು ರನ್ನರ್‍ಸ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಮೂರನೇ ಸ್ಥಾನಿಯಾಗಿ ಮಂಗಳೂರು ಸೂಪರ್ ಕಿಂಗ್ಸ್, ಚತುರ್ಥ ಸ್ಥಾನಿಯಾಗಿ ಭದ್ರ ಚಾಲೆಂಜರ್‍ಸ್ ತಂಡವು ಸ್ಥಾನ ಪಡೆಯಿತು.

ಅಜೇಯ 89 ರನ್‌ಗಳೊಂದಿಗೆ ಕೂಟದಲ್ಲಿಯೇ ವೈಯಕ್ತಿಕ 169 ರನ್‌ಗಳನ್ನು ಸಿಡಿಸುವ ಮೂಲಕ ಮಂಗಳೂರು ಸೂಪರ್ ಕಿಂಗ್ಸ್ ತಂಡದ ಶಿವಪ್ರಸಾದ್ ಕಿಲ್ಲೆರವರು ಉತ್ತಮ ಬ್ಯಾಟರ್ ಆಗಿ, ಉತ್ತಮ ಬೌಲರ್ ಆಗಿ ಯುವರತ್ನ ರೈಡರ್‍ಸ್ ತಂಡದ ರಮೇಶ್, ಪಂದ್ಯ ಪುರುಷೋತ್ತಮರಾಗಿ ಹಾಗೂ ಅತ್ಯಂತ ಅಮೂಲ್ಯವಾದ ಆಟಗಾರನಾಗಿ ಸೆವೆನ್ ಬ್ಲಾಸ್ಟರ್‍ಸ್ ತಂಡದ ಮ್ಯಾಡಿರವರು ಹೊರ ಹೊಮ್ಮಿರುತ್ತಾರೆ. ರೋಟರಿ ರಾಯಲ್ಸ್, ಮುಳಿಯ ಟೈಗರ್‍ಸ್, ರೆಡ್ ಮಾನ್‌ಸ್ಟರ್‍ಸ್, ಕೂರ್ಗ್ ಬ್ಲಾಸ್ಟರ್‍ಸ್, ಮೆಟ್ರೋ ರಾಯಲ್ಸ್, ರೋಯಲ್ ಚಾಲೆಂಜರ್‍ಸ್ ಮೈಸೂರು ತಂಡಗಳು ಲೀಗ್ ಹಂತದಲ್ಲಿಯೇ ನಿರ್ಗಮಿಸಿತ್ತು.


ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಗವರ್ನರ್ ಆಗಿರುವ ಮೇಜರ್ ಡೋನರ್ ಪ್ರಕಾಶ್ ಕಾರಂತ್, ರೋಟರಿ ಜಿಲ್ಲೆ 3181 ಇದರ ಮಾಜಿ ಜಿಲ್ಲಾ ಗವರ್ನರ್ ಎಂ.ರಂಗನಾಥ್ ಭಟ್, ರೋಟರಿ ಜಿಲ್ಲೆ 3180 ಇದರ ಮಾಜಿ ಜಿಲ್ಲಾ ಗವರ್ನರ್ ಡಾ.ಭಾಸ್ಕರ್ ಎಸ್, ರೋಟರಿ ಜಿಲ್ಲೆ 3181ಇದರ ನಿಯೋಜಿತ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್, ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಇವೆಂಟ್ಸ್ ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈ, ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಆಡಳಿತ ಕಾರ್ಯದರ್ಶಿ ಕೆ.ನಾರಾಯಣ ಹೆಗ್ಡೆ, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಎ.ಜಗಜ್ಜೀವನ್‌ದಾಸ್ ರೈ, ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಮೇಜರ್ ಜನರಲ್ ನಿವೃತ್ತ ಎಂ.ವಿ ಭಟ್, ರೋಟರಿ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ರೈ, ರೋಟರಿ ವಲಯ ಐದರ ವಲಯ ಸೇನಾನಿ ಪುರಂದರ ರೈ, ಇವೆಂಟ್ ಚೇರ್‌ಮ್ಯಾನ್ ಎಸ್.ಸಂತೋಷ್ ಶೆಟ್ಟಿ, ಆರ್‌ಪಿಎಲ್ ಲೀಗ್ ಸಲಹೆಗಾರ ಮನೋಹರ್ ಅಮೀನ್ ಹಾಗೂ ಎಸ್.ಬಾಲಚಂದರ್, ಇವೆಂಟ್ ಕಾರ್ಯದರ್ಶಿ ಎಲ್ಯಾಸ್ ಪಿಂಟೋ, ಆರ್‌ಪಿಎಲ್ ವೈಸ್ ಚೇರ್‌ಮ್ಯಾನ್ ಸಂತೋಷ್ ಶೆಟ್ಟಿ, ಇವೆಂಟ್ ಕೋಶಾಧಿಕಾರಿ ನರಸಿಂಹ ಪೈ, ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ, ರೋಟರಿ ಪುತ್ತೂರು ಸ್ವರ್ಣ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ, ರೋಟರಿ ಪುತ್ತೂರು ಎಲೈಟ್ ಅಧ್ಯಕ್ಷ ಡಾ|ಪೀಟರ್ ವಿಲ್ಸನ್ ಪ್ರಭಾಕರ್, ಆರ್‌ಪಿಎಲ್ ಚೇರ್‌ಮ್ಯಾನ್ ಆಸ್ಕರ್ ಆನಂದ್ ಸ್ವಾಗತಿಸಿ, ಕಾರ್ಯದರ್ಶಿ ನಾಗಾರಾಜ್ ಬಿ, ರೋಟರಿ ಸೆಂಟ್ರಲ್ ಕಾರ್ಯದರ್ಶಿ ಚಂದ್ರಹಾಸ ರೈ, 10 ತಂಡಗಳಾದ ಮಂಗಳೂರು ಸೂಪರ್ ಕಿಂಗ್ಸ್ ಮಾಲಕ ಆನಂದ ಶೆಟ್ಟಿ, ರೋಟರಿ ರಾಯಲ್ಸ್ ಮಾಲಕ ವಲಯ ಹಾಗೂ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಎಲ್ಯಾಸ್ ಸಾಂತೀಸ್, ಭದ್ರ ಚಾಲೆಂಜರ್‍ಸ್ ಮಾಲಕ ಹಾಗೂ ವಲಯ ನಾಲ್ಕರ ಅಸಿಸ್ಟೆಂಟ್ ಗವರ್ನರ್ ಮಂಜುನಾಥ್ ಆಚಾರ್ಯ, ಮುಳಿಯ ಟೈಗರ್‍ಸ್ ಮಾಲಕ ಕೃಷ್ಣನಾರಾಯಣ ಮುಳಿಯ, ಯುವರತ್ನ ರೈಡರ್‍ಸ್ ಮಾಲಕ ಹಾಗೂ ರೋಟರಿ ವಲಯ ಐದರ ವಲಯ ಸೇನಾನಿ ಡಾ|ಹರ್ಷ ಕುಮಾರ್ ರೈ ಮಾಡಾವು, ರೆಡ್ ಮಾನ್‌ಸ್ಟರ್‍ಸ್ ಮಾಲಕ ಮನ್ಸೂರ್, ಕೂರ್ಗ್ ಬ್ಲಾಸ್ಟರ್‍ಸ್ ಮಾಲಕ ರವಿ ಬಿ.ಕೆ, ರೋಯಲ್ ಚಾಲೆಂಜರ್‍ಸ್ ಮೈಸೂರು ಮಾಲಕ ಜಗದೀಶ್, ಸೆವೆನ್ ಬ್ಲಾಸ್ಟರ್‍ಸ್ ಮಾಲಕ ಎಸ್.ಬಾಲಚಂದರ್, ಮೆಟ್ರೋ ರಾಯಲ್ಸ್ ಮಾಲಕ ಚಂದ್ರಶೇಖರ್ ಭಟ್‌ರವರುಗಳ ಸಹಿತ ಹಲವರು ಉಪಸ್ಥಿತರಿದ್ದರು.

ಫೈನಲ್ ಹೋರಾಟ…
ಸೆವೆನ್ ಬ್ಲಾಸ್ಟರ್‍ಸ್ ಮೈಸೂರು ಮತ್ತು ಯುವರತ್ನ ರೈಡರ್‍ಸ್ ರನ್ನರ್‍ಸ್ ನಡುವೆ ನಡೆದ ಫೈನಲ್ ಹೋರಾಟದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸೆವೆನ್ ಬ್ಲಾಸ್ಟರ್‍ಸ್ ಮೈಸೂರು ತಂಡವು ಆರು ಓವರ್‌ಗಳಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 63 ರನ್‌ಗಳ ಬೃಹತ್ ಗುರಿಯನ್ನು ಎದುರಾಳಿ ತಂಡವಾದ ಯುವರತ್ನ ರೈಡರ್‍ಸ್ ತಂಡಕ್ಕೆ ನೀಡಿತ್ತು. ಆದರೆ ಸೆವೆನ್ ಬ್ಲಾಸ್ಟರ್‍ಸ್ ಮೈಸೂರು ತಂಡದ ಬೌಲರ್‌ಗಳ ಕರಾರುವಾಕ್ ಬೌಲಿಂಗ್‌ನಿಂದ ಆರು ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಕೇವಲ 41 ರನ್‌ಗಳನ್ನು ಗಳಿಸಿ 22 ರನ್‌ಗಳಿಂದ ಸೋಲೊಪ್ಪಿಕೊಂಡಿತು.

ಹೈಲೈಟ್ಸ್..
*ಒಟ್ಟು ಹತ್ತು ತಂಡಗಳ ಟೂರ್ನಿಯನ್ನು ತಲಾ ಐದರಂತೆ `ಎ’ ಮತ್ತು `ಬಿ’ ವಿಭಾಗಗಳನ್ನಾಗಿ ಮಾಡಿ ಆಡಿಸಲಾಗಿತ್ತು.
*ಕಾಲೇಜಿನ ಕ್ರೀಡಾಂಗಣದಲ್ಲಿ ಎರಡು ಪಿಚ್‌ಗಳನ್ನು ನಿರ್ಮಿಸಿ ಏಕಕಾಲದಲ್ಲಿ ಕ್ರಿಕೆಟ್ ಪ್ರಿಯರಿಗೆ ಪಂದ್ಯಾಟವನ್ನು ಆಸ್ವಾದಿಸುವ ಅವಕಾಶವನ್ನು ಸಂಘಟಕರು ಒದಗಿಸಿದ್ದರು.
*ಎರಡು ದಿನಗಳಲ್ಲಿಯೂ ಬೆಳಗ್ಗಿನ ಹಾಗೂ ಸಂಜೆಯ ಉಪಹಾರ ಮತ್ತು ಮಧ್ಯಾಹ್ನ ಭೋಜನದ ವ್ಯವಸ್ಥೆಯನ್ನು ಕೂಡ ಅಚ್ಚುಕಟ್ಟಾಗಿ ಮಾಡಲಾಗಿತ್ತು.
*ಇತ್ತಂಡ ಆಟಗಾರರಿಗೆ ಪ್ರತ್ಯೇಕ ಡಗೌಟ್‌ನ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here