ನೇಪಾಳಕ್ಕೆ “ಪ್ರಚಂಡ” ಪ್ರಧಾನಿ 

0

ನೇಪಾಳ: ಮಾಜಿ ಮಾವೋ ವಾದಿ ಗೆರಿಲ್ಲಾ ಸಂಘಟನೆಯ ಮುಖಂಡ ಪುಷ್ಪಕಮಲ ದಹಲ್‌ ಪ್ರಚಂಡ ನೇಪಾಳ ದೇಶದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನೇಪಾಳದ ಹಿಂದೂ ರಾಜಪ್ರಭುತ್ವದ ವಿರುದ್ಧ ದಶಕದ ಕಾಲದ ಸುದೀರ್ಘ ಹೋರಾಟದ ಬಳಿಕ ಕಳೆದ ತಿಂಗಳು ನಡೆದ ಸಂಸದೀಯ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ದೊರಕದೆ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. 275 ಸದಸ್ಯ ಬಲದ ಸಂಸತ್ತಿನಲ್ಲಿ ಮಾವೋ ವಾದಿ ಸೆಂಟರ್‌ ಪಕ್ಷ 32 ಸ್ಥಾನ ಪಡೆದಿದ್ದರೆ ಪ್ರಮುಖ ವಿಪಕ್ಷ ಕಮ್ಯೂನಿಸ್ಟ್‌ ಯುನಿಫೈಡ್‌ ಮಾಕ್ಸಿಸ್ಟ್‌ – ಲೆನಿನಿಸ್ಟ್‌ (ಯುಎನ್‌ಎಲ್‌) 78 ಸ್ಥಾನ ಪಡೆದಿದೆ. ಎರಡೂ ಪಕ್ಷ ಇತರ ಪಕ್ಷಗಳೊಂದಿಗೆ ಮೈತ್ರಿ ಕೂಟ ರಚಿಸಿ ಬಹುಮತಕ್ಕೆ ಅಗತ್ಯವಿರುವ 138 ಸಂಖ್ಯಾಬಲ ಹೊಂದುವ ವಿಶ್ವಾಸದಲ್ಲಿದೆ. ಅಧಿಕಾರ ಹಂಚಿಕೆಯ ಸೂತ್ರದ ಪ್ರಕಾರ 2025ರಲ್ಲಿ ಪ್ರಧಾನಿ ಪಟ್ಟ ಯುಎನ್‌.ಎಲ್‌ ಪಾಲಾಗಲಿದೆ. 

 

LEAVE A REPLY

Please enter your comment!
Please enter your name here