ಉಪ್ಪಿನಂಗಡಿ: ಅಡ್ಡ ಬಂದ ಶ್ವಾನ – ಪಲ್ಟಿಯಾದ ಆಕ್ಟಿವಾ ವಾಹನ

0

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕಡವಿನಬಾಗಿಲು ತಿರುವುನಲ್ಲಿ ನಾಯಿಯೊಂದು ರಸ್ತೆಗೆ ಅಡ್ಡ ಬಂದು ಆಕ್ಟಿವಾ ಹೋಂಡಾಗೆ ಡಿಕ್ಕಿಯಾದ ಪರಿಣಾಮ ಆಕ್ಟಿವಾ ಪಲ್ಟಿಯಾಗಿ ಸಹ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಗೊಂಡಿರುವ ವ್ಯಕ್ತಿ ಇಳಂತಿಲ ಗ್ರಾಮದ ಕಡವಿನಬಾಗಿಲು ನಿವಾಸಿ ರಮ್ಲಾನ್ ಫಯಾಝ್ ಎಂಬವರಾಗಿದ್ದು, ಕೈ, ಕಾಲು ಮೂಳೆ ಮುರಿತಕ್ಕೊಳಗಾಗಿದ್ದಾರೆ.  ಆಕ್ಟಿವಾ ಹೋಂಡಾ ಸವಾರ ಇಮ್ರಾನ್ ಸಣ್ಣಪುಟ್ಟ ತರಚಿದ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ರಾತ್ರಿ ಉಪ್ಪಿನಂಗಡಿಯಿಂದ ಕಡವಿನಬಾಗಿಲಿನ ತಮ್ಮ ಮನೆಗೆ ಹೋಗುವ ವೇಳೆ ಈ ಅವಘಡ ಸಂಭವಿಸಿದೆ.

LEAVE A REPLY

Please enter your comment!
Please enter your name here