ಪುತ್ತೂರು: ಶ್ರೀರಾಮ ಮಂದಿರ ಕೆದಂಬಾಡಿ ಶ್ರೀ ಕ್ಷೇತ್ರ ಸನ್ಯಾಸಿಗುಡ್ಡೆ ಇದರ 31 ನೇ ವಾರ್ಷಿಕ ಪ್ರತಿಷ್ಠಾ ಉತ್ಸವ ವಿವಿಧ ಧಾರ್ಮಿಕ ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ದ. 20 ರಂದು ಆರಂಭಗೊಂಡು ದ. 26 ರಂದು ಸಂಪನ್ನಗೊಂಡಿತು.
ದ. 20 ರಂದು ಉದ್ಘಾಟನೆಗೊಂಡು ಧಾರ್ಮಿಕ ಸಭೆ ನಡೆಯಿತು. ದ. 21 ರಂದು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ವಿವಿಧ ಭಜನಾ ಮಂಡಳಿಗಳಿಂದ ‘ಅರ್ಧ ಏಕಾಹ ಭಜನೆ’ ಜರಗಿತು. ದ. 22 ರಂದು ಬೆಳಿಗ್ಗೆ ಸತ್ಯನಾರಾಯಣ ಪೂಜೆ ನಡೆದು ಪ್ರಸಾದ ವಿತರಣೆ ಮಾಡಲಾಯಿತು. ದ. 23 ರಂದು ಸಂಜೆ ‘ಶ್ರೀರಾಮ ಕಲ್ಪೋಕ್ತ ಪೂಜೆ’ ನಡೆದು ದ. 24 ರಂದು ಭಜನೆ, ದ. 26 ರಂದು ಸ್ಥಳ ಸಾನಿಧ್ಯ ದೈವಗಳಾದ ಶ್ರೀ ಗುಳಿಗ ಮತ್ತು ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ನಡೆಯುವುದರೊಂದಿಗೆ ವಾರ್ಷಿಕ ಪ್ರತಿಷ್ಟಾ ಉತ್ಸವ ಸಂಪನ್ನಗೊಂಡಿತು.
ಷ
ಪ್ರತಿ ಕಾರ್ಯಕ್ರಮಗಳ ದಿನ ವಿವಿಧ ಸೇವಾ ಕರ್ತರಿಂದ ಭಜನೆ ಸೇವೆ, ಅನ್ನಸಂತರ್ಪಣೆ ಸೇವೆಗಳು ನಡೆದುಬಂದವು. ಶ್ರೀರಾಮ ಮಂದಿರದ ಅಧ್ಯಕ್ಷ ಬೆದ್ರುಮಾರ್ ಜೈಶಂಕರ ರೈ ಹಾಗು ಪದಾಧಿಕಾರಿಗಳು, ಸದಸ್ಯರು, ಶ್ರೀರಾಮ ಭಜನಾ ಸಮಿತಿ ಅಧ್ಯಕ್ಷ ಕರುಣಾಕರ ರೈ ಕೋರಂಗ, ಪದಾಧಿಕಾರಿಗಳು ಹಾಗು ಸದಸ್ಯರು, ಶ್ರೀದೇವಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಸದಸ್ಯರುಗಳು, ಶ್ರೀರಾಮ ಭಕ್ತವೃಂದ ವಿವಿಧ ರೀತಿಯಲ್ಲಿ ಸಹಕರಿಸಿದರು.
ಶ್ರೀ ಕಟೀಲು ಮೇಳದಿಂದ ಕಾಲಮಿತಿ ಯಕ್ಷಗಾನ
ಕೆದಂಬಾಡಿ ಶ್ರೀದೇವಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಇವರ 26 ನೇ ವರ್ಷದ ಸೇವೆಯಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯವರಿಂದ ‘ಬ್ರಹ್ಮಕಪಾಲ’ ಕಾಲಮಿತಿ ಯಕ್ಷಗಾನ ಬಯಲಾಟ ನಡೆಯಿತು.