* ನೂರಕ್ಕಿಂತಲೂ ಅಧಿಕ ವಿಧದ ಫ್ಯಾನ್‌ಗಳು
* ಕನಿಷ್ಠ ದರ
ಪುತ್ತೂರು: ಕಳೆದ 25 ವರ್ಷಗಳಿಂದ ವಿದ್ಯುತ್ ಉಪಕರಣಗಳು ಹಾಗೂ ಪಂಪ್‌ಸೆಟ್‌ಗಳ ಮಾರಾಟದ ಮೂಲಕ ಮನೆ ಮಾತಾಗಿರುವ ಪ್ರತಿಷ್ಠಿತ ಇಲೆಕ್ಟ್ರಿಕಲ್ ಮಳಿಗೆ ಮೈತ್ರಿ ಇಲೆಕ್ಟ್ರಿಕಲ್‌ನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಫ್ಯಾನ್ ಮೇಳಕ್ಕೆ ಡಿ.27 ರಂದು ಚಾಲನೆ ನೀಡಲಾಯಿತು.
ಮಾಸ್ಟರ್ ಪ್ಲಾನರಿಯ ಮ್ಹಾಲಕ ಎಸ್.ಕೆ ಆನಂದ್‌ರವರು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಗ್ರಾಹಕರ ನಂಬಿಕೆ ಹಾಗೂ ವಿಶ್ವಾಸಕ್ಕೆ ಪಾತ್ರವಾದ ಮೈತ್ರಿ ಇಲೆಕ್ಟ್ರಿಕಲ್ ಯಶಸ್ಸಿಯಾಗಿ ಬೆಳೆಯುತ್ತಿದೆ. ನಂಬಿಕೆ, ವಿಶ್ವಾಸವು ಸಂಸ್ಥೆಯ ಮ್ಹಾಲಕರ ರಕ್ತದ ಕಣ ಕಣದಲ್ಲಿ ಹರಿಯುತ್ತಿದ್ದು ಅದನ್ನು ಉಳಿಸಿ, ಬೆಳೆಸಿಕೊಂಡು ಮೈತ್ರಿ ಇಲೆಕ್ಟ್ರಿಕಲ್ ಬೆಳೆಯುತ್ತಿದೆ. ಸಿಬಂದಿಗಳ ಸಹಕಾರ, ಗ್ರಾಹಕರ ಪ್ರೋತ್ಸಾಹದಿಂದ ಉತ್ತಮ ಸಂಸ್ಥೆಯಾಗಿ ಬೆಳೆಯುತ್ತಿದೆ. ವ್ಯಾಪಾರದಲ್ಲಿ ಕೋಟಿ ರೂಪಾಯಿ ಸಂಪಾದನೆಗಿಂತ ಗ್ರಾಹಕರ ಸಂತೃಪ್ತಿಯೇ ಬಹುಮುಖ್ಯವಾಗಿದೆ ಎಂದರು.
ಮೇಳದಲ್ಲಿ ಏನೇನಿದೆ:
ಫ್ಯಾನ್ ಮೇಳದಲ್ಲಿ ಹ್ಯಾವೆಲ್ಸ್, ಓರಿಯೆಂಟ್, ಕ್ರಾಮ್ಟನ್, ರೆಮಿ ಹಾಗೂ ಜಾನ್‌ಸನ್ ಮೊದಲಾದ ಕಂಪನಿಗಳ ವಿವಿಧ ಶ್ರೇಣಿಯ ಫ್ಯಾನ್ ಗಳನ್ನು ಜನತೆಗೆ ಪರಿಚಯಿಸಲಾಗುತ್ತಿದೆ. ಉತ್ತಮ ದರದಲ್ಲಿ 100ಕ್ಕಿಂತ ಅಧಿಕ ವಿಧದ ಸೀಲಿಂಗ್ ಫ್ಯಾನ್‌ಗಳು ಮೇಳದಲ್ಲಿ ಲಭ್ಯವಿದೆ.
ಕನಿಷ್ಠ ದರ ರೂ.1290ರಿಂದ ಪ್ರಾರಂಭಗೊಳ್ಳಲಿದೆ. 2500 ಮೌಲ್ಯದ ಫ್ಯಾನ್‌ಗಳಿಗೆ ರೂ.200-250ಕ್ಕೂ ಅಧಿಕ ಮೊತ್ತದ ಡಿಸ್ಕೌಂಡ್ ನೀಡಲಾಗುತ್ತಿದೆ. ಕಡಿಮೆ ವಿದ್ಯುತ್ ಬಳಸುವ ಫ್ಯಾನ್‌ಗಳು, ಇನ್ವರ್ಟರ್ ಬಳಸಬಹುದಾದ ಫ್ಯಾನ್‌ಗಳು ಮೇಳದಲ್ಲಿ ಲಭ್ಯವಿದೆ. ಫ್ಯಾನ್‌ಗಳ ಪರಿಚಯಕ್ಕಾಗಿ ಫ್ಯಾನ್ ಮೇಳ ಆಯೋಜಿಸಲಾಗಿದೆ. ವಿವಿಧ ಕಂಪನಿಗಳ ಸೀಲಿಂಗ್ ಫ್ಯಾನ್, ವಾಳ್‌ಫ್ಯಾನ್, ಟೇಬಲ್ ಫ್ಯಾನ್, ಫೆಡಸ್ಟಲ್ ಫ್ಯಾನ್, ಎಕ್ಸಾಸ್ಟ್ ಫ್ಯಾನ್ ವಿಶಿಷ್ಠ ಸಂಗ್ರಹ ಹಾಗೂ ಮಾಹಿತಿಗಳನ್ನು ಹೊಂದಿದೆ. ಫ್ಯಾನ ಮೇಳ ಡಿ.29ರ ತನಕ ನಡೆಯಲಿದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮ್ಹಾಲಕ ರವಿ ನಾರಾಯಣ ತಿಳಿಸಿದರು.
ವಿಶಾಲ ಮಳಿಗೆ:
ಗ್ರಾಹಕರ ಅನುಕೂಲಕ್ಕಾಗಿ ಕಳೆದ ಮೂರು ವರ್ಷಗಳ ಹಿಂದೆ ಮೊಳಹಳ್ಳಿ ಶಿವರಾಯ ಅಡ್ಡರಸ್ತೆಯಲ್ಲಿ ಸುಶಾ ಚೇಂಬರ್ಸ್ ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿರುವ ಮೈತ್ರಿ ಇಲೆಕ್ಟ್ರಿಕಲ್ ವಿಶಾಲವಾದ ಮಳಿಗೆಯನ್ನು ಹೊಂದಿದೆ. ಎಲ್ಲಾ ರೀತಿಯ ವಿದ್ಯುತ್ ಉಪಕರಣಗಳು, ಪಂಪ್‌ಸೆಟ್‌ಗಳ ಖರೀದಿಗೆ ವಿಪುಲ ಅವಕಾಶವಿದೆ.
ಕಾರ್ಯಕ್ರಮದಲ್ಲಿ ಮಾಸ್ಟರ್ ಪ್ಲಾನರಿಯ ಆಕಾಶ್ ಎಸ್.ಕೆ., ಶಿವಕುಮಾರ್ ಕಲ್ಲಿಮಾರ್, ಲೋಕೋಪಯೋಗಿ ಇಲಾಖೆ ಗುತ್ತಿಗೆದಾರ ಸತೀಶ್ ಪರ್ಲಡ್ಕ, ವಿದ್ಯುತ್ ಗುತ್ತಿಗೆದಾರ ಮೋಹನ್ ರೈ ಸವಣೂರು, ನಾಗೇಶ್ ನಾಯಕ್, ಕೊಕ್ಕೊ ಗುರುನ ಸಂತೋಷ್ ಬೋನಂತಾಯ, ಲಲಿತ್ ಫ್ಯಾನ್ಸಿಯ ಇಂದು ಶೇಖರ್, ಕಾಮದೇನು ಹೇರ್‌ಡ್ರೆಸ್ಸರ್‍ಸ್‌ನ ಶೇಖರ್, ಹ್ಯಾವಲ್ಸ್ ಕಂಪನಿಯ ರೂಪೇಶ್, ಚೈತನ್ಯ ಇಲೆಕ್ಟ್ರಿಲ್ಸ್‌ನ ಕೃಷ್ಣಪ್ರಸಾದ್, ಇಂಜಿನಿಯರ್ ಸತ್ಯನಾರಾಯಾಣ ನೆಹರುನಗರ ಭಟ್ ಸ್ಟುಡಿಯೂದ ನಟೇಶ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಮ್ಹಾಲಕ ರವಿನಾರಾಯಣ ಸ್ವಾಗತಿಸಿ, ಮ್ಹಾಲಕರ ಪತ್ನಿ ಶರಾವತಿ ವಂದಿಸಿದರು.