ರಾಹುಲ್‌ ಗಾಂಧಿಯ ಕನಸಿನ ಕನ್ಯೆ?

0

ದೆಹಲಿ: ಈ ದೇಶದ ಜನ ತಮ್ಮ ಸ್ವಂತ ಮದುವೆ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೋ ಇಲ್ಲವೋ ತಿಳಿಯದು. ಆದರೆ ರಾಹುಲ್‌ ಗಾಂಧಿ ಮತ್ತು ನಟ ಸಲ್ಮಾನ್‌ ಖಾನ್‌ ಮದುವೆಯ ಬಗ್ಗೆ ಆಗಾಗ ಚರ್ಚೆಗಳು ಮುನ್ನಲೆಗೆ ಬರುತ್ತಲೇ ಇರುತ್ತದೆ. ಒಂದರ್ಥದಲ್ಲಿ ಇವರಿಬ್ಬರ ಮದುವೆಯ ಬಗ್ಗೆ ನಡೆದಷ್ಟು  ಚರ್ಚೆಗಳು ಬೇರೆ ಯಾವುದೇ ವಿಚಾರಗಳ ಬಗ್ಗೆ ನಡೆದಿಲ್ಲ ಎಂದೇ ಹೇಳಬಹುದು. ಮದುವೆ ಬಗ್ಗೆ ನಟ ಸಲ್ಮಾನ್‌ ಖಾನ್‌ ಹಲವು ಬಾರಿ ಹಾರಿಕೆ ಉತ್ತರ ನೀಡಿದ್ದಾರೆ. ಆದರೆ ಈಗ ರಾಹುಲ್‌ ಗಾಂಧಿ ಮದುವೆ ಬಗ್ಗೆ ಮೊದಲ ಬಾರಿ ಮೌನ ಮುರಿದಿದ್ದಾರೆ. ಭಾರತ್‌ ಜೋಡೋ ಯಾತ್ರೆಯ ವೇಳೆ ಯೂಟ್ಯೂಬ್‌ ಚಾನೆಲ್‌ ಒಂದಕ್ಕೆ ಸಂದರ್ಶನ ನೀಡುವ ಸಂದರ್ಭದಲ್ಲಿ ಮದುವೆ ಕುರಿತಾದ ಪ್ರಶ್ನೆಗೆ ಉತ್ತರಿಸಿ ತಮ್ಮ ಕನಸಿನ ಕನ್ಯೆಯ ಬಗ್ಗೆ ಹೇಳಿದ್ದಾರೆ. 

ನನ್ನ ಬಾಳಸಂಗಾತಿಯಾಗುವ ಹೆಣ್ಣುಮಗಳ ಬಗ್ಗೆ ಮಾತನಾಡಿದ ರಾಹುಲ್‌ ಇದೊಂದು ಆಸಕ್ತಿದಾಯಕ ಪ್ರಶ್ನೆ ನನ್ನ ಬಾಳಸಂಗಾತಿಗೆ ನನ್ನ ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿಯವರ ಗುಣಗಳ ಮಿಶ್ರಣ ಹೊಂದಿದ್ದರೆ ಉತ್ತಮ ಎಂದು ಹೇಳಿದ್ದಾರೆ.  ತಾಯಿ ಮತ್ತು ಅಜ್ಜಿ ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ ಎಂದು ಹೇಳಿದ್ದಾರೆ.  ಹಾಗೆಯೇ ನನ್ನ ಸಂಗಾತಿ ನನಗೆ ಎರಡನೇ ತಾಯಿಯಂತಿರಬೇಕು ಎಂದು ತಿಳಿಸಿದ್ದಾರೆ. ಕಾರು ಬೈಕುಗಳ ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದಿರುವ ರಾಹುಲ್‌ ತನ್ನಲ್ಲಿ ಒಂದು ಎಲೆಕ್ಟ್ರಿಕ್‌ ಸ್ಕೂಟರ್‌ ಇದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here