ರಾಜ್ಯಮಟ್ಟದ ಪಿಯು ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟ : ಫಿಲೋಮಿನಾ ಕಾಲೇಜಿಗೆ 6 ಬೆಳ್ಳಿ., 2 ಕಂಚಿನ ಪದಕ

0

ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳೂರು ಇವರು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಸಿದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಹುಡುಗರ ಹಾಗೂ ಹುಡುಗಿಯರ ವಿಭಾಗದಲ್ಲಿ 6 ಬೆಳ್ಳಿ ಹಾಗೂ 2 ಕಂಚಿನ ಪದಕ ಲಭಿಸಿದೆ.


ದ್ವಿತೀಯ ವಿಜ್ಞಾನ ವಿಭಾಗದ ಎಂ.ಎಸ್ ಚೈತನ್ಯರವರು 4*100ಮೀ ರಿಲೇಯಲ್ಲಿ ಬೆಳ್ಳಿ, 100ಮೀ ಹರ್ಡಲ್ಸ್ನಲ್ಲಿ ಕಂಚು, ಡಿಂಪಲ್ ಎಸ್.ಬಂಗೇರವರು 4*100ಮೀ ರಿಲೇಯಲ್ಲಿ ಬೆಳ್ಳಿ, ಚೈತ್ರಿಕಾ ಎಂ ರವರು 4*100ಮೀ ರಿಲೇಯಲ್ಲಿ ಬೆಳ್ಳಿ, ದ್ವಿತೀಯ ವಾಣಿಜ್ಯ ವಿಭಾಗದ ವರ್ಷಾರವರು ಹ್ಯಾಮರ್ ತ್ರೋನಲ್ಲಿ ಬೆಳ್ಳಿ, ದ್ವಿತೀಯ ಕಲಾ ವಿಭಾಗದ ನವ್ಯಶ್ರೀ ರವರು5000ಮೀ ಓಟದಲ್ಲಿ ಬೆಳ್ಳಿ, ಪ್ರಥಮ ವಿಜ್ಞಾನ ವಿಭಾಗದ ಅನಘ ಕೆ.ಎನ್‌ರವರು 4*100ಮೀ
ರಿಲೇಯಲ್ಲಿ ಬೆಳ್ಳಿ, ಪ್ರಥಮ ವಾಣಿಜ್ಯ ವಿಭಾಗದ ಆದರ್ಶ್ ಶೆಟ್ಟಿಯವರು ಹೈಜಂಪ್‌ನಲ್ಲಿ ಕಂಚಿನ ಪದಕಗಳನ್ನು ಗಳಿಸಿರುತ್ತಾರೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಎಲ್ಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯರವರು ತರಬೇತಿಯನ್ನು ನೀಡಿರುತ್ತಾರೆ. ಕಾಲೇಜಿನ ಸಂಚಾಲಕ ವಂ|ಲಾರೆನ್ಸ್ ಮಸ್ಕರೇನ್ಹಸ್, ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋ, ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾರವರು ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿರುತ್ತಾರೆ.

ವರ್ಷಾ ರಾಜ್ಯಮಟ್ಟಕ್ಕೆ…
ಈ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಹ್ಯಾಮರ್ ತ್ರೋನಲ್ಲಿ ಬೆಳ್ಳಿ ಪದಕ ಗಳಿಸಿದ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ವರ್ಷಾರವರು ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

LEAVE A REPLY

Please enter your comment!
Please enter your name here