ಕೊಕ್ಕಡ ಜೇಸಿ ಪದಗ್ರಹಣ, ಅಕ್ಷರ ದೀವಿಗೆ ಆರಂಭೋತ್ಸವ

0

ಮಕ್ಕಳಲ್ಲಿ ಹೆಚ್ಚು ಹೆಚ್ಚು ಓದುವ ಹವ್ಯಾಸ ಬೆಳೆಸಬೇಕು: ಡಾ.ದಿವ ಕೊಕ್ಕಡ

ನೆಲ್ಯಾಡಿ: ಜೇಸಿಐ ಕೊಕ್ಕಡ ಕಪಿಲಾ ಇದರ 3 ನೇ ವರ್ಷದ, 2023 ನೇ ಸಾಲಿನ ನೂತನ ಅಧ್ಯಕ್ಷ ಜಿತೇಶ್ ಎಲ್.ಪಿರೇರಾ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜ.೪ರಂದು ಸಂಜೆ ಕೊಕ್ಕಡ ಕೌಕ್ರಾಡಿ ಸಂತ ಜಾನರ ಹಿ.ಪ್ರಾ.ಶಾಲಾ ಸಭಾಂಗಣದಲ್ಲಿ ನಡೆಯಿತು.


ಉಜಿರೆ ಶ್ರೀ ಧ.ಮಂ.ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ದಿವ ಕೊಕ್ಕಡರವರು ಅಕ್ಷರ ದೀವಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಜನತೆ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಗೌರವದಿಂದ ಬದುಕಲು ಸಕಲ ಪ್ರಯತ್ನ ಮಾಡಬೇಕು. ಮಕ್ಕಳು ಹೆಚ್ಚು ಹೆಚ್ಚು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಕೊಕ್ಕಡ ಜೇಸಿಐ ಅಕ್ಷರ ದೀವಿಗೆ ಕಾರ್ಯಕ್ರಮ ಹಮ್ಮಿಕೊಂಡಿರುವುದನ್ನು ಶ್ಲಾಘಿಸಿದರು. ಅಕ್ಷರ ದೀವಿಗೆ ಆರಂಭೋತ್ಸವ ಅಂಗವಾಗಿ ಸ್ಥಳೀಯ ಶಾಲಾ ಮಕ್ಕಳ ಜ್ಞಾನ ವರ್ಧನೆಗೆ ನೆರವಾಗುವ ವೈವಿಧ್ಯಮಯ ಪುಸ್ತಕಗಳನ್ನು ವಿತರಿಸಲಾಯಿತು. ಜೇಸಿ ವಲಯದ ಉಪಾಧ್ಯಕ್ಷರಾದ ಭರತ್ ಶೆಟ್ಟಿಯವರು ಪದಪ್ರದಾನ ನೆರವೇರಿಸಿ ಮಾರ್ಗದರ್ಶನ ನೀಡಿದರು. 2023ನೇ ಸಾಲಿನಲ್ಲಿ ಅತ್ಯುತ್ತಮ ಕಾರ್ಯಕ್ರಮಗಳ ಮೂಡಿಬರುವ ಮೂಲಕ ಕೊಕ್ಕಡ ಜೇಸಿಐ ಗುರುತಿಸಿಕೊಳ್ಳಲಿ ಎಂದರು.


ನೂತನ ಘಟಕದ ಪದಪ್ರಧಾನ:
2023ನೇ ಸಾಲಿನ ನೂತನ ಅಧ್ಯಕ್ಷ ಜಿತೇಶ್ ಎಲ್ ಪಿರೇರಾ, ಕಾರ್ಯದರ್ಶಿ ವಿಕ್ಟರ್ ಸುವಾರಿಸ್, ಕೋಶಾಧಿಕಾರಿ ಜಸ್ವಂತ್ ಪಿರೇರಾ, ಮಹಿಳಾ ಜೇಸಿ ಅಧ್ಯಕ್ಷೆ ದೀಪಾ ವಿ., ಜೆಜೆಸಿ ಅಧ್ಯಕ್ಷೆ ಪ್ರತೀಕ್ಷಾ ಕೆ.ಶೆಟ್ಟಿ, ಜೇಸಿಲೆಟ್ ಅಧ್ಯಕ್ಷೆ ಅಪೂರ್ವ ಕೆ.ಯು. ಹಾಗೂ ಅವರ ತಂಡದವರು ಅಧಿಕಾರ ಸ್ವೀಕಾರ ಮಾಡಿದರು. ನೂತನ ಅಧ್ಯಕ್ಷ ಜಿತೇಶ್ ಎಲ್.ಪಿರೇರಾರವರು ಮಾತನಾಡಿ ಸಹಕಾರ ಕೋರಿದರು.


ಸಾಧಕರಿಗೆ ಸನ್ಮಾನ:
ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಬೆಳ್ತಂಗಡಿಯ ಸಹಾಯಕ ಪ್ರಾಧ್ಯಾಪಕ ಡಾ. ಕುಶಾಲಪ್ಪ ಎಸ್, ಹಿರಿಯ ಜೇಸಿ ಸದಸ್ಯ ಕೆ.ಯು. ಕರ್ಕೇರಾ, ಕೌಕ್ರಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಫಾಯಲ್ ಸ್ಟ್ರೆಲ್ಲಾ, ಯಕ್ಷಗಾನ ಪ್ರತಿಭೆ ಚಂದನಾ ಆಚಾರ್ಯ ಅವರನ್ನು ಅಭಿನಂದಿಸಲಾಯಿತು. ಉನ್ನತ ಸಾಧನೆಗೈದ ಡಾ.ದಿವ ಕೊಕ್ಕಡ, ಭರತ್ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ಗಣೇಶ, ಕೆ.ಶ್ರೀಧರ ರಾವ್ ಸನ್ಮಾನಿಸಲಾಯಿತು. ಕೌಕ್ರಾಡಿ ಸಂತ ಜಾನಕರ ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.


2023ನೇ ಸಾಲಿನ ಉಪಾಧ್ಯಕ್ಷರಾದ ನರಸಿಂಹ ನಾಯಕ್, ಹರಿಶ್ಚಂದ್ರ ಆಚಾರ್ಯ, ವಿದ್ಯೇಂದ್ರ ಎಸ್., ಸಂತೋಷ ಕುಮಾರ್, ರಾಜಾರಾಮ ಟಿ., ಅಕ್ಷತ್ ರೈ, ನಿರ್ದೇಶಕರಾದ ರಾಮಕೃಷ್ಣ ಸುವರ್ಣ, ಮನೋರಮಾ, ಗಣೇಶ ಶೆಟ್ಟಿ, ಪಿ.ಟಿ. ಸೆಬಾಸ್ಟಿಯನ್, ಜೆಸಿಂತಾ ಡಿ ಸೋಜ, ಶ್ರೀನಿವಾಸ ಗೌಡ, ಹರೀಶ್, ಜಾನ್ಸನ್, ಜ್ಯೋತಿ ಹೆಬ್ಬಾರ್, ಕಾರ್ತಿಕ್, ಹರೀಶ್ ಕಳೆಂಜ, ಪೂರ್ವಾಧ್ಯಕ್ಷ ಗಣೇಶ ಕೆ, ಮಾರ್ಗದರ್ಶಕರಾದ ಜೋಸೆಫ್ ಪಿರೇರಾ, ಪ್ರಶಾಂತ್ ಸಿ.ಹೆಚ್, ಸವಿತಾ ಮುಂತಾದವರು ಉಪಸ್ಥಿತರಿದ್ದರು. ವಿವಿಧ ಜೇಸಿ ಘಟಕಗಳ ಅಧ್ಯಕ್ಷರು, ಸಂಘ ಸಂಸ್ಥೆಗಳ ಪ್ರಮುಖರು ಗಣ್ಯರು ಆಗಮಿಸಿ ಶುಭ ಹಾರೈಸಿದರು. ಪದಗ್ರಹಣ ಸಮಾರಂಭದ ಬಳಿಕ ಯುವ ಜೇಸಿ ಸದಸ್ಯರು ಹಾಗೂ ನೆಲ್ಯಾಡಿ ತಂಡದವರಿಂದ ಫಿಲಂ ಡ್ಯಾನ್ಸ್ ಕಾರ್ಯಕ್ರಮ ನಡೆಯಿತು.

 

LEAVE A REPLY

Please enter your comment!
Please enter your name here