ಪಾಂಗಳಾಯಿ ಮುಂಡ್ಯತ್ತಾಯ ದೈವಸ್ಥಾನದಲ್ಲಿ ನೇಮೋತ್ಸವ ಕಾರ್ಯಾಲಯ ಉದ್ಘಾಟನೆ

ಪುತ್ತೂರು:ಪರ್ಲಡ್ಕ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ಜ.7 ರಂದು ನಡೆಯಲಿರುವ ವರ್ಷಾವಧಿ ನೇಮೋತ್ಸವ ಪೂರ್ವಭಾವಿಯಾಗಿ ಗಣಹೋಮ ಹಾಗೂ ಕಾರ್ಯಾಲಯ`ಪಂಚಾಕ್ಷರಿ’ಯು ಜ.5 ರಂದು ಉದ್ಘಾಟನೆಗೊಂಡಿತು.


ಪ್ರಾರಂಭದಲ್ಲಿ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಮುಳಿಯ ಜ್ಯುವೆಲ್ಸ್‌ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ಕಾರ್ಯಾಲಯವನ್ನು ದೀಪ ಬೆಳಗಿಸಿ, ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಾರಣಿಕ ಕ್ಷೇತ್ರವಾಗಿರುವ ಪಾಂಗಳಾಯಿ ಮುಂಡ್ಯತ್ತಾಯ ದೈವಸ್ಥಾನದಲ್ಲಿ ಭಕ್ತಿಯಿಂದ ಪ್ರಾರ್ಥಿಸಿದವರ ಇಷ್ಟಾರ್ಥಗಳು ನೆರವೇರುತ್ತದೆ. ಇದಕ್ಕೆ ನಾನೇ ಸಾಕ್ಷಿ ಎಂದರು.


ಮುಖ್ಯ ಅತಿಥಿಯಾಗಿದ್ದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಮಾತನಾಡಿ, ಶ್ರದ್ಧಾ ಭಕ್ತಿಯ ಕೇಂದ್ರವಾಗಿರುವ ಪಾಂಗಳಾಯಿಯಲ್ಲಿ ನೇಮೋತ್ಸವವು ಯಶಸ್ವಿಯಾಗಿ ನೆರವೇರಲಿ ಎಂದರು. ನಗರ ಸಭಾ ಉಪಾಧ್ಯಕ್ಷೆ ವಿದ್ಯಾಗೌರಿ, ಯು.ಆರ್ ಪ್ರಾಪರ್ಟಿಸ್‌ನ ಮ್ಹಾಲಕ ಉಜ್ವಲ್ ಪ್ರಭು, ದರ್ಬೆ ಆಕಾಶ್ ನರ್ಸರಿಯ ಮ್ಹಾಲಕ ಜಗದೀಶ್ ರಾವ್ ಎನ್, ಹಿರಿಯ ಸದಸ್ಯ ಸುರೇಶ್ ನಾಕ್ ಬಾಳೆಪುಣಿ, ನವೀನ್ ಕುಮಾರ್ ದೀಪ ಬೆಳಗಿಸಿದರು.


ಸಚಿನ್ ಟ್ರೇಡರ್‍ಸ್ ಮ್ಹಾಲಕ ಮಂಜುನಾಥ ನಾಯಕ್, ಸಚಿನ್ ನಾಯಕ್, ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ತಾರಾನಾಥ ರೈ, ಉಪಾಧ್ಯಕ್ಷ ಉಮಾಶಂಕರ್ ನಾಕ್ ಪಾಂಗಳಾಯಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ನಾಕ್, ಸದಸ್ಯರಾದ ವಿನಯ ಭಂಡಾರಿ ಪಾಂಗಳಾಯಿ, ಪಿ.ಎಸ್ ರಾಜಗೋಪಾಲ ಶಗ್ರಿತ್ತಾಯ, ಸೂರಪ್ಪ ಗೌಡ, ಜಯಶಂಕರ ರೈ, ಕರುಣಾಕರ ಆಲೆಟ್ಟಿ, ಶಿವಕುಮಾರ್ ಪಿ.ಬಿ ಕಲ್ಲಿಮಾರ್, ಗಂಗಾಧರ ನಾಕ್ ಪಾಂಗಳಾಯಿ, ಪರಮೇಶ್ವರ ನಾಯ್ಕ, ಇಂದಾಜೆ ವರದರಾಜ ನಾಯಕ್, ಕರುಣಾಕರ ಶೆಟ್ಟಿ ಪಾಂಗಳಾಯಿ, ಸುಕುಮಾರ್, ಆಕಾಶ್ ಸೇರಿದಂತೆ ಹಲವು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು.

ಆಡಳಿತ ಸಮಿತಿ ಕೋಶಾಧಿಕಾರಿ ಸರೋಜಿನಿ ಎಸ್ ಅಭಿಕಾರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಭಗವಾಧ್ವಜರೋಹಣ;
ಪಾಂಗಳಾಯಿಯಲ್ಲಿ ದೈವಸ್ಥಾನದ ಪ್ರವೇಶ ಧ್ವಾರದ ಬಳಿಯಲ್ಲಿ ಅಳವಡಿಸಲಾದ ಭಗವಾಧ್ವಜವನ್ನು ಯು.ಆರ್ ಪ್ರಾಪರ್ಟಿಸ್ ಮ್ಹಾಲಕ ಉಜ್ವಲ್ ಪ್ರಭುರವರು ಧ್ವಜಾರೋಹಣ ನೆರವೇರಿಸಿದರು.

ನಾಳೆ ನೇಮೋತ್ಸವ:
ದೈವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಬೆಳಿಗೆಗ ಶ್ರೀ ಮಹಾಗಣಪತಿ ಹೋಮ, ಕಲಶಪೂಜೆ, ನಾಗತಂಬಿಲ, ಸಾರ್ವಜನಿಕ ಆಶ್ಲೇಷ ಬಲಿ, ಪಂಚಾಮೃತ ಅಭಿಷೇಕ, ದೈವಗಳ ಸನ್ನಿಧಿಯಲ್ಲಿ ಕಲಶ ತಂಬಿಲ ಸೇವೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆದು ನೇಮೋತ್ಸವ ಜರುಗಲಿದೆ ಎಂದು ದೈವಸ್ಥಾನದ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.