ಸವಣೂರು : ವಿದ್ಯಾರಶ್ಮಿಯಲ್ಲಿ ರೊಟರ‍್ಯಾಕ್ಟ್ ಕೆನರಾ ವಲಯ ಮಟ್ಟದ ಕ್ರೀಡಾಕೂಟ

0

ಸವಣೂರು : ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೊಟರ‍್ಯಾಕ್ಟ್ ಕ್ಲಬ್ ವಿದ್ಯಾರಶ್ಮಿ ಹಾಗೂ ರೊಟರ‍್ಯಾಕ್ಟ್ ಕೆನರಾ ವಲಯ ಸಮಿತಿ ಇವುಗಳ ಜಂಟಿ ಆಶ್ರಯದಲ್ಲಿ ಕೆನರಾ ವಲಯ ಮಟ್ಟದ ಕ್ರೀಡಾಕೂಟ ನಡೆಯಿತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್.ಎಲ್ ಶೆಟ್ಟಿ ಮಾತನಾಡಿ, ಕ್ರೀಡಾಳುಗಳು ಸ್ಪರ್ಧಾ ಮನೋಭಾವದಿಂದ ಸ್ವರ್ಧೆಯಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.

ಕೆನರಾ ವಲಯದ ಕ್ರೀಡಾ ನಿರ್ದೇಶಕ ಶಶಿಧರ್.ಕೆ ಮಾವಿನಕಟ್ಟೆ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೊ.ಸುಜಿತ್.ಟಿ.ರೈ  ಹಾಗೂ  ಶ್ರೀಧರ್.ಕೆ. ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.

ವೇದಿಕೆಯಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣ ಮೂರ್ತಿ.ಕೆ ಹಾಗೂ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರೊಟರ‍್ಯಾಕ್ಟ್ ಕ್ಲಬ್ ನ ಸಲಹೆಗಾರರಾಗಿರುವ ಪ್ರತಿಭಾ. ಎಸ್ ಹಾಗೂ ಕೆನರಾ ವಲಯ ಪ್ರತಿನಿಧಿ ಸಿಯಾಕ್ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಅತ್ಯಂತ ವೇಗದ ಓಟಗಾರನಾಗಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ರಿವಾನ್ ಮೂಡಿಬಂದರು.

ವಿದ್ಯಾರಶ್ಮಿ ರೊಟರ‍್ಯಾಕ್ಟ್ ಕ್ಲಬ್‌ನ ಅಧ್ಯಕ್ಷೆ ರಕ್ಷಿತಾ.ಎ ಸ್ವಾಗತಿಸಿ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ವಾಜಿದ್ ವಂದಿಸಿದರು. ರಕ್ಷಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here