ಪುತ್ತೂರು : ಶಂಸುಲ್ ಉಲಮಾ ಅರಬಿಕ್ ಕಾಲೇಜು ತೋಡಾರು ಇದರ 13 ನೇ ವಾರ್ಷಿಕೋತ್ಸವದ ಪ್ರಯುಕ್ತ ಪುತ್ತೂರು ತಾಲೂಕಿನಾದ್ಯಂತ ಸಂದೇಶ ಜಾಥವನ್ನು ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಸವಣೂರಿನಲ್ಲಿ ಜರುಗಿತು. ಮುಕ್ವೆಯಲ್ಲಿ ಮಖಾಮ್ ಝಿಯಾರತ್ ಕಾರ್ಯಕ್ರಮವನ್ನು ನಡೆಸಲಾಯಿತು.
ಬದ್ರಿಯಾ ಜುಮಾ ಮಸೀದಿ ಸವಣೂರಿನ ಆವರಣದಲ್ಲಿ ಉದ್ಘಾಟನಾಸಮಾರಂಭವು ಜರುಗಿತು. ಮಸೀದಿ ಅಧ್ಯಕ್ಷರಾದ ಉಮರ್ ಹಾಜಿ ಕೆನರಾ ಧ್ವಜ ಹಸ್ತಾಂತರಿಸುವ ಮೂಲಕ ಸಂದೇಶ ಜಾಥಕ್ಕೆ ಔದ್ಯೋಗಿಕ ಚಾಲನೆ ನೀಡಿದರು.ಈ ಸಂಧರ್ಭ ಭಾಷಣ ಮಾಡಿದ ಮಸೀದಿ ಖತೀಬರಾದ ಅಶ್ರಫ್ ಬಾಖವಿ ಚಾಪಳ್ಳ ” ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜು ಸಾಮಾಜಿಕ ,ಶೈಕ್ಷಣಿಕ ಹಾಗೂ ಧಾರ್ಮಿಕ ಕ್ರಾಂತಿಯಲ್ಲಿ ಹೆಸರು ಗಳಿಸಿದ ಸಂಸ್ಥೆಯಾಗಿದೆ ” ಎಂದು ಆಶಂಸ ಭಾಷಣದಲ್ಲಿ ನುಡಿದರು. ಮುಂದಕ್ಕೆ ಜಾಥ ಸಂಚಾರವು ಪ್ರಾರಂಭವಾಯಿತು.
ಸವಣೂರಿನಿಂದ ಪ್ರಾರಂಭವಾದ ಜಾಥವು ರೆಂಜಲಾಡಿ, ಕೂಡುರಸ್ತೆ, ಕಟ್ಟತ್ತಾರು, ಮಾಡಾವು ಕೆಐಸಿ ಕುಂಬ್ರ, ಸಂಪ್ಯ, ಕೂರ್ನಡ್ಕ ಪರ್ಲಡ್ಕ, ಬಪ್ಪಳಿಗೆ ,ಉಪ್ಪಿನಂಗಡಿ ಪೆರಿಯಡ್ಕ ಗಂಡಿಬಾಗಿಲು ಕೊಯಿಲ, ಅತೂರು, ನೆಕ್ಕರೆ , ಕುಂತೂರು, ಕಳಾರ, ಸುಂಕದಕಟ್ಟೆ ಹಾಗೂ ಕಡಬ ಮುಖಾಂತರ ಸಾಗಿತು. ಪುತ್ತೂರಿನ ಎಲ್ಲಾ ಜನತೆಯು ತೋಡಾರಿನ ಪ್ರಚಾರ ಜಾಥವನ್ನು ಸ್ವಾಗತಿಸಲಾಯಿತು.