ಕೆಮ್ಮಾರ ಶಾಲೆ ನಲಿಕಲಿ ತರಗತಿಗೆ ಚಯರ್, ಟೇಬಲ್ ಕೊಡುಗೆ

0

ಉಪ್ಪಿನಂಗಡಿ: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ನಲಿಕಲಿ ತರಗತಿಯ ಮಕ್ಕಳಿಗಾಗಿ ಅತ್ಯಾಕರ್ಷಕ ಶೈಲಿಯ ಚೆಯರ್ ಹಾಗೂ ಟೇಬಲನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಹಾಗೂ ದಾನಿಗಳ ಸಹಕಾರದಿಂದ ಕೊಡುಗೆಯಾಗಿ ನೀಡಲಾಯಿತು.

ಇದರ ಉದ್ಘಾಟನೆಯನ್ನು ಶಾಲಾಭಿವೃದ್ಧಿ ಸಮಿತಿಯ ಹಿರಿಯ ಸದಸ್ಯ ಅಬ್ಬಾಸ್ ಹಾಗೂ ಕಡಬ ಠಾಣಾ ಎಎಸ್‌ಐ ಕನಕರಾಜ್‌ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಝ್ ಬಿ.ಕೆ. ಅವರು ಮಾತನಾಡಿ, ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯ ನಲಿಕಲಿ ಮಕ್ಕಳು ಸರಿಯಾದ ವ್ಯವಸ್ಥೆಗಳಿಲ್ಲದೇ ನೆಲದಲ್ಲಿ ಕುಳಿತು ವಿದ್ಯಾರ್ಜನೆ ಮಾಡಬೇಕಾದ ಅನಿವಾರ್ಯತೆಯಿತ್ತು. ಇದನ್ನು ಮನಗಂಡು ಶಿಕ್ಷಕರು ಮತ್ತು ಶಾಲಾಭಿವೃದ್ದಿ ಸಮಿತಿ ಯವರು ನಲಿಕಲಿ ಮಕ್ಕಳಿಗಾಗಿ ಸುಸಜ್ಜಿತ ಚಯರ್ ಹಾಗೂ ಟೇಬಲ್ ವ್ಯವಸ್ಥೆ ಮಾಡುವ ಬಗ್ಗೆ ಚರ್ಚಿಸಿದಾಗ ಅತ್ಯುತ್ತಮ ರೀತಿಯಲ್ಲಿ ಶಿಕ್ಷಕರು, ಶಾಲಾಭಿವೃದ್ದಿ ಸಮಿತಿ ಸದಸ್ಯರು ಸ್ಪಂದನೆ ನೀಡಿದರು. ಬಳಿಕ ಊರ ದಾನಿಗಳ ಸಹಕಾರದಿಂದ ಈಗ ಸುಮಾರು 30 ಸಾವಿರ ರೂ. ವೆಚ್ಚದಲ್ಲಿ ಚಯರ್ ಹಾಗೂ ಟೇಬಲ್ ಖರೀದಿಸಲಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

ಶಾಲಾ ಮುಖ್ಯ ಶಿಕ್ಷಕಿ ಜಯಶ್ರೀ ಎಂ, ಶಾಲಾಭಿವೃಧ್ದಿ ಸಮಿತಿ ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೆಲಿಕತ್, ಶಾಲಾ ಎಸ್‌ಡಿಎಂಸಿ ಸದಸ್ಯರಾದ ವಾಮನ ಬರಮೇಲು, ಪದ್ಮನಾಭ ಶೆಟ್ಟಿ ಬಡಿಲ, ಸುಮಯ್ಯ, ಅಝೀಝ್ ಜಿ, ಕವಿ ಬರಹಗಾರ ಅಬ್ದುಲ್ ಗಫ್ಫಾರ್ ಕೆಮ್ಮಾರ, ವಕೀಲರಾದ ಕಬೀರ್ ಬಂಟ್ವಾಳ, ಎಸ್.ಎಮ್ ಫ್ರೆಂಡ್ಸ್ ಇದರ ಅಧ್ಯಕ್ಷ ಖಲಂದರ್ ಎಸ್.ಪಿ, ಉದ್ಯಮಿ ರವೂಫ್ ಬಡಿಲ, ಅಝೀಝ್ ಜಿ, ಜುನೈದ್, ಹಂಝ ಬಿ, ಹಾಗೂ ಅಧ್ಯಾಪಕ ವೃಂದದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here