ಪುತ್ತೂರು: ಬನ್ನೂರು ಸಂತ ಅಂತೋನಿ ಚರ್ಚ್ ವ್ಯಾಪ್ತಿಯ ಬಾಲಯೇಸು ಮಂದಿರ ಬಳಿಯ ಬನ್ನೂರು ನೀರ್ಪಾಜೆ ದಿ.ಪೌಲ್ ಲೋಬೊರವರ ಪತ್ನಿ ಮಾಗ್ದೆಲಿನ್ ಲೋಬೋ(89 ವ.)ರವರು ಅಸೌಖ್ಯದಿಂದ ಜ.29 ರಂದು ನಿಧನ ಹೊಂದಿದ್ದಾರೆ.
ಮೃತರು ಪುತ್ರಿಯರಾದ ಲೂಸಿ ಲೋಬೊ, ಜೆಸಿಂತಾ ಲೋಬೊ, ಮೋನಿಕಾ ಲೋಬೊ, ಸಿಂತಿಯಾ ಲೋಬೊ, ಪುತ್ರರಾದ ವಿಲ್ಫ್ರೆಡ್ ಲೋಬೊ, ಗ್ರೆಗೋರಿ ಲೋಬೊ, ರೊನಾಲ್ಡ್ ಲೋಬೊ, ಬ್ರದರ್ ಫೆಲಿಕ್ಸ್ ಲೋಬೊ(ಡಿ.ಡಿ.ಎಸ್ ಸುಪೀರಿಯರ್ ತಾಕೊಡೆ), ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.