ಶ್ರೀ ರಾಮಕುಂಜೇಶ್ವರ ಕಿಂಡರ್‌ಗಾರ್ಟನ್‌ನಲ್ಲಿ ‘ಕಿಡ್ಸ್ ಫೆಸ್ಟ್’

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‌ನಲ್ಲಿ ಜ.28 ರಂದು ‘ಕಿಡ್ಸ್ ಫೆಸ್ಟ್’ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಉದ್ಘಾಟಿಸಿದರು.


ಕಿಡ್ಸ್ ಫೆಸ್ಟ್‌ನಲ್ಲಿ ಮಕ್ಕಳ ಸಹಾಯದೊಂದಿಗೆ ತಯಾರಿಸಿದ ಚಿತ್ರಕಲೆಗಳು, ಗೂಡುದೀಪಗಳು, ಕ್ರಾಫ್ಟ್‌ಗಳ ಪ್ರದರ್ಶನ ಮಾಡಲಾಯಿತು. ಅಲ್ಲದೇ ವಿವಿಧ ಬಣ್ಣಗಳ ಪರಿಚಯ, ವೆಜಿಟೇಬಲ್ ಥೀಮ್, ಫ್ರೂಟ್ಸ್ ಥೀಮ್, ಫ್ಲವರ್ ಥೀಮ್‌ಗಳ ಅರಿವಿನ ಜೊತೆಗೆ ಫ್ಯಾಮಿಲಿ ಪೋಟೋ ಶೂಟ್ ಚಿತ್ರಣ, ಪೋಟೋ ಬೂತ್, ಪೋಟೋ ಕಾರ್ನರ್‌ಗಳನ್ನೂ ವ್ಯವಸ್ಥೆಗೊಳಿಸಲಾಗಿದ್ದು ಇವು ಮಕ್ಕಳನ್ನು ಮುದಗೊಳಿಸಿದವು.

ಮಕ್ಕಳೊಂದಿಗೆ ಪೋಷಕರ ತರಕಾರಿ ಮಾರುಕಟ್ಟೆ, ತಿಂಡಿ ತಿನಿಸು, ವಿವಿಧ ರೀತಿಯ ಪಾನೀಯಗಳ ಮಾರಾಟವೂ ನಡೆಯಿತು. ಔಷಧೀಯ ಸಸ್ಯಗಳ ಪರಿಚಯ ಮತ್ತು ಮಾರಾಟ, ಪುಸ್ತಕ ಮಳಿಗೆಗಳು ಕಾರ್ಯಕ್ರಮಕ್ಕೆ ಇನ್ನಷ್ಟೂ ಮೆರುಗು ನೀಡಿದವು. ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು, ಆಟಿಕೆಗಳೊಂದಿಗೆ ಮಕ್ಕಳ ಆಟೋಟ ಚಟುವಟಿಕೆಗಳು, ಬಣ್ಣಗಳ ಆಟ, ಚಟುವಟಿಕೆಗಳ ಪ್ರದರ್ಶನಗಳೂ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ, ಆಡಳಿತಾಧಿಕಾರಿ ಆನಂದ ಎಸ್.ಟಿ., ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಯ.ಎನ್., ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ಲೋಹಿತಾ ಎ.,, ಶಿಕ್ಷಕವೃಂದ ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here