ಫಿಲೋಮಿನಾ ಎಂ.ಎಸ್.ಡಬ್ಲ್ಯೂನಿಂದ ಪಡ್ನೂರು ಶಾಲೆಯಲ್ಲಿ ಮಹಿಳಾ ಸಬಲೀಕರಣ, ಸಂಜೀವಿನಿ ಒಕ್ಕೂಟ ಮಾಹಿತಿ ಕಾರ್ಯಕ್ರಮ

0

 

 

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ಸಮಾಜಕಾರ್ಯ ವಿಭಾಗ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡ್ನೂರು ಇದರ ಆಶ್ರಯದಲ್ಲಿ ಅಂತರ್ರಾಷ್ಟೀಯ ಮಹಿಳಾ ದಿನದ ಪ್ರಯುಕ್ತ ಮಹಿಳಾ ಸಬಲೀಕರಣ ಹಾಗೂ ಸಂಜೀವಿನಿ ಒಕ್ಕೂಟದ ಮಾಹಿತಿ ಕಾರ್ಯಕ್ರಮವನ್ನು ಪಡ್ನೂರು ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸೀತಾರಾಮ ಬೇರಿಕೆ ಯವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತಾಲೂಕು ಪಂಚಾಯತ್ ನ ಕಾರ್ಯಕ್ರಮ ವ್ಯವಸ್ಥಾಪಕರರಾದ ಜಗತ್ ರವರು ಸ್ವ-ಸಹಾಯ ಸಂಘ ಹಾಗೂ ಶ್ರೀಶಕ್ತಿ ಸಂಘದ ಸದಸ್ಯರಿಗೆ ಮಾಹಿತಿ ನೀಡಿ ಮಾತನಾಡಿ, ಸರಕಾರದ ಬೇರೆ ಬೇರೆ ಕಾರ್ಯಕ್ರಮಗಳ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ಮಹಿಳೆಯರು ಇದರ ಪ್ರಯೋಜನವನ್ನು ಪಡೆಯಬೇಕು. ಸಂಜೀವಿನಿ ಯೋಜನೆಯಡಿ ಒಕ್ಕೂಟ ರಚನೆಯಾಗಿದ್ದು, ಸ್ವ-ಸಹಾಯ ಗುಂಪುಗಳಲ್ಲಿ ಜೀವನೋಪಾಯ ಚಟುವಟಿಕೆ ನಡೆಸಿ ಆರ್ಥಿಕವಾಗಿ ಸಬಲೀಕರಣವಾಗಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬನ್ನೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಎಂ.ರವರು ಮಾತನಾಡಿ, ಮಹಿಳೆಯರಿಗೆ ಜಾರಿಯಾದ ಯೋಜನೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಅಥಿತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬನ್ನೂರು ಇಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ  ಚಿತ್ರಾವತಿ ಅವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ, ಬನ್ನೂರು ಗ್ರಾ.ಪಂ ಸದಸ್ಯರಾದ ಶ್ರೀನಿವಾಸ ಪೆರ್ವೋಡಿ,  ಕೆ.ವಿಮಲ, ರಮಣಿ ಡಿ. ಗಾಣಿಗ ಉಪಸ್ಥಿತರಿದ್ದರು.

ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಾದ ರೋಶನ್ ಸ್ವಾಗತಿಸಿ, ಅಬ್ದುಲ್ ಬಾಸಿತ್ ವಂದಿಸಿದರು. ರವಿಕಿರಣ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here