ನೆಲ್ಯಾಡಿ: ಸಮರ್ಪಕ ಚರಂಡಿ ಇಲ್ಲದೇ ಹೆದ್ದಾರಿಯಲ್ಲಿಯೇ ನಿಂತ ಮಳೆ ನೀರು, ವಾಹನ ಸವಾರರ ಪರದಾಟ

0

 

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75 ನೆಲ್ಯಾಡಿ ಸಮೀಪದ ಹೊಸಮಜಲುನಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿಯೇ ನಿಂತ ಪರಿಣಾಮ ವಾಹನ ಸವಾರರು ಸಮಸ್ಯೆಗೆ ಸಿಲುಕಿದ ಘಟನೆ ಎ.9ರಂದು ಸಂಜೆ ನಡೆದಿದೆ.

ಅಡ್ಡಹೊಳೆ-ಬಿ.ಸಿ.ರೋಡ್ ಮಧ್ಯೆ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ವೇಗದಿಂದ ನಡೆಯುತ್ತಿದ್ದು ನೆಲ್ಯಾಡಿ ಭಾಗದಲ್ಲಿ ಅಲ್ಲಲ್ಲಿ ರಸ್ತೆ ಅಗೆಯಲಾಗಿದೆ. ಹಲವು ಕಡೆಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಿಲ್ಲ ಎಂಬ ದೂರು ಸಾರ್ವಜನಿಕರಿಂದ ಕೇಳಿಬಂದಿದೆ. ಇದರ ಮಧ್ಯೆಯೇ ಎ.9ರಂದು ನೆಲ್ಯಾಡಿ ಭಾಗದಲ್ಲಿ ಸುರಿದ ಮಳೆಯಿಂದಾಗಿ ಹೆದ್ದಾರಿಯಲ್ಲಿಯೇ ನೀರು ನಿಂತು ವಾಹನ ಸವಾರರು ಪರದಾಟ ನಡೆಸಿದ್ದಾರೆ. ಹೊಸಮಜಲುನಲ್ಲಿ ಮಳೆ ನೀರು ಹರಿಯಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಹೆದ್ದಾರಿಯಲ್ಲಿಯೇ ಕೆಸರು ನೀರು ನಿಂತಿದೆ. ಇದರಿಂದಾಗಿ ದ್ವಿಚಕ್ರ ಸೇರಿದಂತೆ ಇತರೇ ವಾಹನ ಸವಾರರು ಸಮಸ್ಯೆಗೆ ಸಿಲುಕಿದ್ದರು ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here