ಉಪ್ಪಿನಂಗಡಿ ಸರಕಾರಿ ಪ್ರ.ದ.ಕಾಲೇಜು ಪ್ರಾಂಶುಪಾಲರಿಂದ ಠಾಣೆಗೆ ದೂರು: ಶಾಂತವಾಗಿ ನಡೆದ ತರಗತಿಗಳು

0

ಉಪ್ಪಿನಂಗಡಿ : ಹಿಜಾಬ್ ಕುರಿತಾಗಿ ನ್ಯಾಯಾಲಯದ ತೀರ್ಪು ಪ್ರಕಟಗೊಂಡ ಬಳಿಕ ಪ್ರತಿಭಟನೆಯ ಹೆಸರಿನಲ್ಲಿ ದಿನಂಪ್ರತಿ ಒಂದಲ್ಲ ಒಂದು ಬಗೆಯ ದಾಂಧಲೆಗೆ ಒಳಗಾಗುತ್ತಿದ್ದ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆಕಾಲೇಜಿನ ಪ್ರಾಂಶುಪಾಲರು ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದು, ಬುಧವಾರದಂದು ಕಾಲೇಜು ತರಗತಿಗಳು ಶಾಂತವಾಗಿ ನಡೆದ ಘಟನೆ ವರದಿಯಾಗಿದೆ.

ನ್ಯಾಯಾಲಯದ ತೀರ್ಪು ಬಂದ ಬಳಿಕ ತರಗತಿಯೊಳಗೆ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಲಾಗಿತ್ತಾದರೂ, ಕಾಲೇಜು ವರಾಂಡದಲ್ಲಿ ನ್ಯಾಯಾಲಯದ ತೀರ್ಪು ಉಲ್ಲಂಸುವ ವಿದ್ಯಾರ್ಥಿಗಳು ಜಮಾವಣೆಗೊಳ್ಳುತ್ತಿದ್ದರು. ಇದರಿಂದ ಕಾಲೇಜಿನಲ್ಲಿ ನಡೆಯುತ್ತಿದ್ದ ತರಗತಿಗಳಿಗೆ, ಪರೀಕ್ಷೆಗಳಿಗೆ ತೊಂದರೆಯೊಡ್ಡುವ ರೀತಿಯಲ್ಲಿ ದಾಂಧಲೆ ನಡೆಸುತ್ತಿದ್ದರು. ಇದು ಅತಿರೇಕಕ್ಕೆ ಹೋಗಿ ಉಪನ್ಯಾಸಕಿಯರ ವಿರುದ್ದ ಹಲ್ಲೆಗೆ ಮುಂದಾಗುವ ಅನಪೇಕ್ಷಿತ ಘಟನಾವಳಿಗಳು ನಡೆಯುತ್ತಿತ್ತು. ಈ ಬಗ್ಗೆ ಕಾಲೇಜಿನ ಬಹುತೇಕ ವಿದ್ಯಾರ್ಥಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಕಾಲೇಜಿನಲ್ಲೇ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದರೂ, ನಮಗೆ ಲಿಖಿತ ದೂರು ಬಾರದೇ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ಮೌನವಹಿಸುತ್ತಿದ್ದರು.

ಈ ಎಲ್ಲಾ ಗೊಂದಲಗಳ ನಡುವೆ ಕಾಲೇಜಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಅವರು, ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಲಿಖಿತ ದೂರು ಸಲ್ಲಿಸಿ, ಕೆಲ ವಿದ್ಯಾರ್ಥಿಗಳ ಅಶಿಸ್ತಿನ ವರ್ತನೆಯಿಂದಾಗಿ ಕಾಲೇಜಿನ ಶೈಕ್ಷಣಿಕ ವಾತಾವರಣಕ್ಕೆ ತೊಂದರೆಯುಂಟಾಗುತ್ತಿದೆ. ಕಾಲೇಜಿನಲ್ಲಿ ನಡೆಯುತ್ತಿರುವ ಪ್ರಯೋಗಾಲಯ ಪರೀಕ್ಷೆಗಳಿಗೆ ಹಾಗೂ ಎಪ್ರಿಲ್ ೬ರಿಂದ ನಡೆಯುವ ಸೆಮಿಸ್ಟರ್ ಪರೀಕ್ಷೆಗಳಿಗೆ ತೊಂದರೆಯುಂಟು ಮಾಡುವ ಹಾಗೂ ಪ್ರತಿಭಟನೆ ಸೇರಿದಂತೆ ಯಾವುದೇ ರೀತಿಯ ಶಾಂತಿ ಭಂಗವನ್ನುಂಟು ಮಾಡುವ ಕೃತ್ಯವನ್ನು ಕಾಲೇಜು ಪರಿಸರದಲ್ಲಿ ನಡೆಸಿದ್ದೇ ಆದರೆ ಅಂತಹವರ ವಿರುದ್ದ ಕಾನೂನು ರೀತಿಯ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಪ್ರಕರಣಕ್ಕೆ ಸಂಬಂಽಸಿ ಜಿಲ್ಲಾ ಪೊಲೀಸ್ ಅಽಕ್ಷಕರು ಹಾಗೂ ಕಾಲೇಜು ಶಿಕ್ಷಣ ಇಲಾಖಾ ಜಂಟಿ ನಿರ್ದೇಶಕರಿಗೆ ಪ್ರತಿ ರವಾನಿಸಲಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಬುಧವಾರದಂದು ಕಾಲೇಜಿನಲ್ಲಿ ಹಿಜಾಬ್ ಘಟನಾವಳಿಗಳು ನಡೆಯದೇ ಕಾಲೇಜು ಚಟುವಟಿಕೆಗಳು ಶಾಂತವಾಗಿ ನಡೆದವು.

ಇತ್ತ ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನನಲ್ಲಿ ನಡೆಯುತ್ತಿರುವ ದ್ವಿತೀಯ ಪಿಯುಸಿ ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ಸಮವಸ ಪಾಲನೆಯೊಂದಿಗೆ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಇಲ್ಲಿನ ಪ್ರಾಂಶುಪಾಲರು ಪ್ರಾರಂಭದ ದಿನಗಳಲ್ಲಿಯೇ ಪೊಲೀಸರಿಗೆ ರಕ್ಷಣೆ ಕೋರಿ ಲಿಖಿತ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ಕಾಲೇಜು ಆವರಣ ಯಾವುದೇ ಅಹಿತಕರ ಘಟನಾವಳಿಗೆ ಒಳಗಾಗದೇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸೂಕ್ತ ಅನುಕೂಲತೆಯನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ.

LEAVE A REPLY

Please enter your comment!
Please enter your name here