ಸಿರಿ ಕಡಮಜಲು ಕೃಷಿ ಕ್ಷೇತ್ರಕ್ಕೆ ಅಖಿಲ ಭಾರತ ಗೇರು ಬೆಳೆಗಾರರ ಸಂಘದ ಅಧ್ಯಕ್ಷರ ಭೇಟಿ

0

ಪುತ್ತೂರು : ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಅಖಿಲ ಭಾರತ ಗೇರು ಬೆಳೆಗಾರರ ಸಂಘದ ಅಧ್ಯಕ್ಷರೂ ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರೂ ಆದ ಶಂಕರನಾರಾಯಣ ಖಂಡಿಗೆಯವರು ಮಾ. 22 ರಂದು ಭೇಟಿ ನೀಡಿ ಸಮಗ್ರ ಕೃಷಿಯನ್ನು ವೀಕ್ಷಿಸಿ ಸಂವಾದ ನಡೆಸಿದರು. ಕಡಮಜಲು ರೈ ಯವರು ಒಬ್ಬ ಸಾಹಸಿ, ಸಾಧಕರಾಗಿದ್ದು ಅವರ ಸಮಗ್ರ ಕೃಷಿ, ಸಮರ್ಪಕ ಸಮೃದ್ಧಿ ಕೃಷಿಯನ್ನು ಕಂಡು ಹೊಟ್ಟೆ ತುಂಬುತ್ತದೆ. ಕೃಷಿ ಕ್ಷೇತ್ರ ಸ್ವಚ್ಛ, ಸುಂದರವಾಗಿದೆ. ಕೊಕ್ಕೊ ಕೃಷಿ, ಗೇರು ಕೃಷಿ ಹೈನುಗಾರಿಕೆ, ಕೃಷಿಕರಿಗೆಲ್ಲ ಆದರ್ಶ ಮತ್ತು ಸ್ಪೂರ್ತಿದಾಯಕವಾಗಿದೆ ಎಂದರು. ಪೆರ್ಲದ ಕೃಷಿಕರಾದ ಪ್ರಸನ್ನ ಕುಮಾರ್‌ ಜೊತೆಗಿದ್ದರು. ಕಡಮಜಲು ಸುಭಾಸ್ ರೈ‌ ಮತ್ತು ಪ್ರೀತಿ ಎಸ್. ರೈ ಪುಸ್ತಕ ಸ್ಮರಣಿಕೆ ನೀಡಿ ಗೌರವಿಸಿದರು.  

LEAVE A REPLY

Please enter your comment!
Please enter your name here