













ಕಾಣಿಯೂರು: ಕಂದಾಯ ಇಲಾಖೆಗಳ ನೇತೃತ್ವದಲ್ಲಿ ನಡೆಯಲಿರುವ ರೈತಾಪಿ ಜನರ ಮನೆ ಬಾಗಿಲಿಗೆ ನಿಮ್ಮ ದಾಖಲೆ ಅಭಿಯಾನಕ್ಕೆ ಚಾರ್ವಾಕ ಗ್ರಾಮದಲ್ಲಿ ಮಾ. 12ರಂದು ಚಾಲನೆ ನೀಡಲಾಯಿತು. ಕಾಣಿಯೂರು ಗ್ರಾ.ಪಂ. ಉಪಾಧ್ಯಕ್ಷ ಗಣೇಶ್ ಉದನಡ್ಕ, ಗ್ರಾ.ಪಂ.ಸದಸ್ಯೆ ಕೀರ್ತಿಕುಮಾರಿ ಅಂಬುಲ, ಚಾರ್ವಾಕ ಗ್ರಾಮಕರಣಿಕ ಪುಷ್ಪರಾಜ್, ಗ್ರಾಮಸಹಾಯಕ ಭಾಸ್ಕರ್, ಪುತ್ತೂರು ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ದೇವಯ್ಯ ಗೌಡ ಖಂಡಿಗ, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ವಿಶ್ವನಾಥ ದೇವಿನಗರ, ಗ್ರಾ.ಪಂ.ಮಾಜಿ ಸದಸ್ಯ ದಯಾನಂದ ಅಂಬುಲ ಉಪಸ್ಥಿತರಿದ್ದರು.








