ಉಪ್ಪಿನಂಗಡಿ: ರಾಜ್ಯ ಸರಕಾರದ ಹೊಸ ಯೋಜನೆಯಾದ “ಕಂದಾಯ ದಾಖಲೆ ಮನೆ ಬಾಗಿಲಿಗೆ” ಕಾರ್ಯಕ್ರಮವನ್ನು ಉಪ್ಪಿನಂಗಡಿ ಗ್ರಾಮದಲ್ಲಿ ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ನೀಡುವ ಮೂಲಕ ಮಾ. 12ರಂದು ಚಾಲನೆ ನೀಡಲಾಯಿತು.
ನಾಡ ಕಚೇರಿಯ ಕಂದಾಯ ನಿರೀಕ್ಷಕ ರಂಜನ್ ಕಲ್ಕುದಿ, ಗ್ರಾಮಕರಣಿಕರಾದ ಹರೀಶ್ ಪಿ., ಗ್ರಾಮ ಸೇವಕ ಯತೀಶ್ರವರು ಗ್ರಾಮ ವ್ಯಾಪ್ತಿಯ ರಾಮನಗರ, ಲಕ್ಷ್ಮೀನಗರ, ದೂಜಮೂಲೆ ಪ್ರದೇಶದಲ್ಲಿರುವ ಫಲಾನುಭವಿಗಳ ಮನೆಗಳಿಗೆ ಭೆಟಿ ನೀಡಿ ಕಂದಾಯ ಇಲಾಖೆಗೆ ಸಂಬಂಧಿಸಿದ ಪಹಣಿ, ಇಂಡೆಕ, ಜಾತಿ, ಆದಾಯ ಪ್ರಮಾಣ ಪತ್ರ ಮತ್ತು ನಕ್ಷೆ (ಅಟ್ಲಾಸ್)ಗಳನ್ನು ನೀಡುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಚಂದ್ರ ಮುಳಿಯ, ಸದಸ್ಯರಾದ ಲೋಕೇಶ್ ಬೆತ್ತೋಡಿ, ಧನಂಜಯ ಕುಮಾರ್, ಉಷಾ ಉಪಸ್ಥಿತರಿದ್ದರು.